ರಾಜ್ಯದಲ್ಲಿಯೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ನವೋದಯ ಟ್ರಸ್ಟ್‌ಗೆ ನಬಾರ್ಡ್ ಪ್ರಶಸ್ತಿ ಪ್ರದಾನ |
ಪ್ರಕಟಿಸಿದ ದಿನಾಂಕ : 2010-03-21
ಮಂಗಳೂರು, ಮಾ. ೨೦ : ಸ್ವ ಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನ ಹಾಗೂ ಸಮಗ್ರ ನಿರ್ವಹಣೆಯಲ್ಲಿ ರಾಜ್ಯದಲ್ಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರಿನ ನವೋದಯ ಗ್ರಾಮವಿಕಾಸ ಚಾರಿಟೆಬಲ್ ಟ್ರಸ್ಟಿಗೆ ನಬಾರ್ಡ್ ರಾಜ್ಯ ಸಂಸ್ಥೆ ಘೋಷಿಸಿರುವ ರಾಜ್ಯ ಮಟ್ಟದ ಪ್ರಶಸ್ತಿಯನ್ನುಟ್ರಸ್ಟ್‌ನ ಮೆನೇಜಿಂಗ್ ಟ್ರಸ್ಟಿ ಎಂ.ಎನ್. ರಾಜೇಂದ್ರ ಕುಮಾರ್ ಅವರು ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು.
ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಾದೇಶಿಕ ನಿರ್ದೇಶಕ ಬಿ. ಶ್ರೀನಿವಾಸ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ರಾಜ್ಯದಲ್ಲೇ ಅತ್ಯುತ್ತಮ ಸ್ವಯಂ ಸೇವಾ ಸಂಸ್ಥೆ ಎಂಬ ಗೌರವಕ್ಕೆ ಪಾತ್ರವಾಗಿರುವ ನವೋದಯ ಗ್ರಾಮವಿಕಾಸ ಚಾರಿಟೆಬಲ್ ಟ್ರಸ್ಟ್‌ಗೆ ಸ್ವಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನ, ನಿರ್ವಹಣೆ ಹಾಗೂ ಸಾಲಜೋಡಣೆಯಲ್ಲಿ ಮಾಡಿರುವ ವಿಶಿಷ್ಟ ಸಾಧನೆಗಾಗಿ ಸತತ ಮೂರನೇ ಬಾರಿ ನಬಾ ರ್ಡ್ ರಾಜ್ಯಮಟ್ಟದ ಪ್ರಥಮ ಪ್ರಶಸ್ತಿ ದೊರೆಯುತ್ತಿದೆ.
ಸಮಾರಂಭದಲ್ಲಿ ಸಿಂಡಿಕೇಟ್ ಬ್ಯಾಂಕ್ ಸಿಎಂಡಿ ಬಸಂತ್ ಶೇಟ್, ಎಸ್‌ಬಿಐ ಮುಖ್ಯ ಮಹಾ ಪ್ರಬಂಧಕಿ ಶ್ರೀಮತಿ ಅರುಂಧತಿ ಭಟ್ಟಾಚಾರ್ಯ, ನಬಾರ್ಡ್ ಬೆಂಗಳೂರು ಪ್ರಾದೇಶಿಕ ಕಚೇರಿಯ ಮುಖ್ಯ ಮಹಾಪ್ರಬಂಧಕ ಡಾ| ವೆಂಕಟೇಶ ತಗತ್, ಮಹಾಪ್ರಬಂಧಕ ಎಂ.ವಿ.ಪಾತ್ರೋ ಮುಖ್ಯ ಅತಿಥಿಗಳಾಗಿ ದ್ದರು. ಪ್ರಶಸ್ತಿ ಸ್ವೀಕರಿಸುವ ಸಂದರ್ಭ ದಲ್ಲಿ ದ.ಕ.ಜಿ.ಕೆ. ಸಹಕಾರಿ ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕ ಪಿ. ನಾರಾಯಣ ಕಾಮತ್ ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|