ಸುಬ್ರಹ್ಮಣ್ಯ: ಕೂಸಿಗೆ ಮುನ್ನ ಕುಲಾವಿಯ೦ತೆ ಹಾಗಾಗಿದೆ ಲೋಕೋಪಯೋಗಿ ಇಲಾಖಾ ಕಾಮಗಾರಿ |
ಪ್ರಕಟಿಸಿದ ದಿನಾಂಕ : 2010-03-21
ಸುಬ್ರಹ್ಮಣ್ಯ, ಮಾ.೨೦: ಜನಹಿತೋಪಯೋಗಕ್ಕಾಗಿ ಲೋಕೋಪಯೋಗಿ ಇಲಾಖೆಯವರು ವಿವಿಧ ಕಾಮಗಾರಿಗಳನ್ನು ನಡೆಸುತ್ತಾರೆ. ಅನೇಕ ವೇಳೆ ಜನಪ್ರತಿನಿಧಿಗಳ ಒತ್ತಡದಿಂದಲೋ, ಜನರ ಬೇಡಿಕೆಗೆ ಮಣಿದೋ ಕಾಮಗಾರಿ ಮಾಡಿ ಮುಗಿಸುತ್ತಾರೆ. ಆದರೆ ಈ ಇಲಾಖೆಯ ಅನೇಕ ಕಾಮಗಾರಿಗಳು ಗೊತ್ತುಗುರಿ ಇಲ್ಲದೆ ನಾಗರಿಕರಿಗೆ ಉಪಕಾರವಾಗುವ ಬದಲು ಅಪಕಾರ, ತೊಂದರೆಗಳಾಗುವುದೇ ಅಧಿಕ.
ಇದಕ್ಕೊಂದು ಜ್ವಲಂತ ಉದಾಹರಣೆ ದೇವಾಲಯನಗರ ಸುಬ್ರಹ್ಮಣ್ಯದಲ್ಲಿ ಕಳೆದ ಜಾತ್ರೆಯ ವೇಳೆ ಲೋಕೋಪಯೋಗಿ ಇಲಾಖೆಯವರು ಮಾಡಿದ ಡಾಮರೀಕರಣ ಮತ್ತು ಚರಂಡಿ ಕಾಮ ಗಾರಿ. ಸುಬ್ರಹ್ಮಣ್ಯದ ಕುಮಾರಧಾರೆ ರಸ್ತೆ ಡಾಮರು ಹಾಗೂ ಚರಂಡಿ ಕಾಮಗಾರಿಯ ಬಗ್ಗೆ ೩೦ ಲಕ್ಷ ರೂ ಹಣವನ್ನು ಸರಕಾರ ಬಿಡುಗಡೆಮಾಡಿದೆ ಎಂದು ಇಲಾಖಾ ಇಂಜಿನಿಯರ್ ಪತ್ರಿಕಾ ಹೇಳಿಕೆ ನೀಡಿ ಕಾಮಗಾರಿ ಆರಂಭಿಸಿದ್ದರು.
ಕುಮಾರಧಾರೆಯಿಂದ ಸುಬ್ರಹ್ಮಣ್ಯದ ರಥಬೀದಿಯವರೆಗಿನ ಎರಡು ಕಿ.ಮೀ. ಉದ್ದದ ರಸ್ತೆಯ ಆಯ್ದ ಭಾಗಗಳಲ್ಲಿ ಡಾಮರೀಕರಣ ಅರ್ಥಾತ್ ತೇಪೆಹಾಕಿ ರಥ ಚಲಿಸುವಲ್ಲಿ ಮಾತ್ರ ಮರು ಡಾಮರೀಕರಣವಾಯಿತು. ಅದೇ ರೀತಿ ಜಾತ್ರೆಯ ವೇಳೆ ನವಂಬರ ತಿಂಗಳಿ ನಲ್ಲಿ ಚರಂಡಿ ಕಾಮಗಾರಿ ನಡೆಯಿತು. ಮಳೆಗಾಲದಲ್ಲೂ ಚರಂಡಿ ಮಣ್ಣು ಹೂಳೆತ್ತದ ಚರಂಡಿಯನ್ನು ಜೆಸಿಬಿ ಯಂತ್ರದ ಮೂಲಕ ದುರಸ್ತಿಗೊಳಿಸಿ ದೊಡ್ಡ ತೋಡನ್ನು ಮಾಡಿದರು. ಮೊದಲೇ ಕಿರಿದಾದ ರಾಜ್ಯ ಹೆದ್ದಾರಿ ಮತ್ತಷ್ಟು ಕಿರಿದಾಯಿತು. ರಸ್ತೆ ಕಿರಿ ದಾಗುತ್ತಲೇ ರಸ್ತೆಯ ಎರಡೂ ಬದಿ ಚರಂಡಿ ಅಗಲ ವಾಯಿತು.
ರಸ್ತೆಯಂಚಿ ನಲ್ಲಿ ಈ ಮೊದಲೇ ಇದ್ದ , ಹಲವು ಮನೆಗಳ ಎದುರು ತೋಡಿಗಾಗಿ ಹಾಕಿದ್ದ ಹಾಸು ಗಲ್ಲನ್ನೂ ಜೆಸಿಬಿ ತೆಗೆದು ರಸ್ತೆ ಯನ್ನು ರಾಡಿಮಾಡಿ ಹಾಕಿತು. ಏತನ್ಮಧ್ಯೆ ಪ್ರಭಾವೀ ಜನಪ್ರತಿನಿಧಿ ಗಳ ಅಂಗಡಿ, ಮನೆ ಎಂದರು ಚರಂಡಿ ಮಾಡಲೇ ಇಲ್ಲ.ಅವರು ಮಾಡಲು ಬಿಡಲೂ ಇಲ್ಲ. ಚರಂ ಡಿ ತೆಗೆದಲ್ಲಿ ರಸ್ತೆಯ ಎರಡೂ ಬದಿ ಕೆಂಪುಕಲ್ಲಿನಿಂದ ಚರಂಡಿ ರಚನೆ ಮಾಡು ತ್ತೇವೆ ಎಂದ ಇಲಾ ಖೆ ಕೆಲವೇ ಮೀಟರ್ ವರೆಗೆ ಕೆಂಪುಕಲ್ಲು ಕಟ್ಟಿ ಚರಂಡಿಗೆ ತಡೆ ಗೋಡೆ ನಿರ್ಮಿಸಿದೆ. ಜಾತ್ರೆಯ ವೇಳೆ ಹದಿನೈದು ದಿನ ಭರದ ಕಾಮಗಾರಿ. ಅದೆಷ್ಟು ರಭಸದ ಕಾಮಗಾರಿ.
ಜಾತ್ರೆ ಮುಗಿಯುವುದೇ ತಡ ಕಾಮ ಗಾರಿ ದಿಢೀರನೆ ಸ್ಥಗಿತಗೊಂಡಿತು. ರಸ್ತೆ ಯಂಚಿನಲ್ಲಿರುವ ಮನೆಯವರು ಡಾಮರು ರಸ್ತೆಗಿಳಿಯಲು ಕಾಲುಸಂಕ, ತೂಗುಸೇತುವೆ ಮಾಡಿ ಜಾತ್ರೆಗೆ ಬಂದಿದ್ದ ಅತಿಥಿಗಳನ್ನು ಸ್ವಾಗತಿಸಿದ್ದರು. ಇಲಾಖೆ ಇಂದು ಕಾಮಗಾರಿ ಮಾಡುತ್ತದೆ, ನಾಳೆ ಮಾಡುತ್ತದೆ ಎಂದು ಜನರೆಲ್ಲ ಕಾದದ್ದೇ ಬಂತು. ಇಲಾಖೆಗೆ ದೂರವಾಣಿ ಕರೆ ಮಾಡಿದರೆ ಉತ್ತರವಿಲ್ಲ. ರಸ್ತೆ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳಾರೂ ಸ್ಪಂದಿಸಲೇ ಇಲ್ಲ. ಇದೇ ರಸ್ತೆಯಲ್ಲಿ ರಾತ್ರಿ ಹಗಲು ಸಂಚರಿ ಸುವ ವಾಹನಗಳು, ಭಕ್ತರು ಎದ್ದು ಬಿದ್ದು ಹೋಗುತ್ತಿದ್ದಾರೆ.
ಸಮಸ್ಯೆಯ ಗಂಭೀರತೆಯನ್ನರಿತ ಸುಬ್ರ ಹ್ಮಣ್ಯದ ಹರಿಶ್ಚಂದ್ರ ಕೆ.ಎನ್.ಅವರು ಮಾಹಿತಿ ಹಕ್ಕು ಅಧಿನಿಯಮದಡಿ ಇಲಾಖೆಗೆ ಕಾಮಗಾರಿಯ ವಿವರ ಒದ ಗಿಸುವಂತೆ ಕೋರಿ ಅರ್ಜಿ ಸಲ್ಲಿಸಿದರು. ಅವರ ಅರ್ಜಿಗೆ ಮೂರು ತಿಂಗಳ ಅನಂತರ ಉತ್ತರ ನೀಡುವ ಸೌಜನ್ಯವನ್ನು ಇಲಾಖೆ ಹೊಂದಿ, ಮಾಹಿತಿ ಒದಗಿಸಿದೆ.
ಸದ್ರಿ ಕಾಮಗಾರಿಗೆ ೩೦ ಲಕ್ಷ ರೂ. ಸರಕಾರದಿಂದ ಬಿಡುಗಡೆಯಾದರೂ ಸದ್ರಿ ಕಾಮಗಾರಿಯ ಅಂದಾಜು ಪಟ್ಟಿ ಹಾಗೂ ಟೆಂಡರ್ ಪ್ರಕ್ರಿಯೆ ಇನ್ನು ಆಗಬೇಕಾಗಿದೆ. ಆದುದರಿಂದ ಯಾವುದೇ ರೀತಿಯ ಹಣ ಪಾವತಿಯಾಗಿರುವುದಿಲ್ಲ, ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕಾಮಗಾರಿಯನ್ನು ಸಂಪೂರ್ಣ ವಾಗಿ ಪೂರ್ಣಗೊಳಿಸುವುದಾಗಿ ತಿಳಿಸಿರು ತ್ತಾರೆಂದು ಉತ್ತರ ನೀಡಲಾಗಿದೆ.
ಅಂದಾಜು ಪಟ್ಟಿ, ಟೆಂಡರ್ ಯಾವುದೂ ಆಗದೆ ಅರೆಬರೆ ಕಾಮಗಾರಿ ನಡೆಸಿದ ನಾಟಕವಾಡಿ ರಸ್ತೆಯನ್ನು ಕಿರಿದುಗೊಳಿಸಿ ರಸ್ತೆಯ ಬಹುಭಾಗವನ್ನು ಚರಂಡಿಯೇ ನುಂಗುವಂತೆ ಮಾಡಿದ ಇಲಾಖೆ ಮಗು ಹುಟ್ಟುವ ಮೊದಲೇ ಅಂಗಿ ಹೊಲಿಸಿ ದಂತಾಗಿದೆ. ಇದೇ ರಸ್ತೆಯಲ್ಲಿ ಮಂತ್ರಿಗಳು, ಅಧಿಕಾರಿಗಳು ಅವರು, ಇವರು ಎಲ್ಲರೂ ಬರುತ್ತಾರೆ. ಯಾರಿಗೂ ಕಣ್ಣು ಕಾಣಿಸದು.
ಪೂರ್ವಾಪರ ಯೋಚಿಸದೆ, ರಸ್ತೆಯನ್ನು ಮನಬಂದಂತೆ ಅಗೆದು ಅಸಮರ್ಪಕ ಚರಂಡಿ ನಿರ್ಮಿ ಸಿದ ಇಲಾಖೆಗೆ ಬಿಸಿ ಮುಟ್ಟಿಸಿ, ಉತ್ತಮ ರಸ್ತೆ, ತಡೆಗೋಡೆ ಉಳ್ಳ ಚರಂಡಿ ನಿರ್ಮಿಸಲು ಎಲ್ಲರೂ ಪಕ್ಷಭೇದ ಮರೆತು ಒತ್ತಾಯಿಸುವ ಕಾಲ ಸನ್ನಿಹಿತವಾ ಗಿದೆ. ಈಗಾಗಲೇ ಒಮ್ಮೆ ಭಾರೀ ಮಳೆ ಯಾಗಿದೆ. ಮಳೆಗಾಲದ ಒಳಗಾಗಿ ಚರಂಡಿಗೆ ಕಾಯಕಲ್ಪವಾಗದಿದ್ದರೆ ರಸ್ತೆಯೇ ಚರಂಡಿಯಾಗಿ ಭಾರೀ ಅನಾಹುತವಾಗುವ ಭೀತಿ ಇದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|