ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ ಕಚ್ಚಾ ಬಾಂಬ್ ಪತ್ತೆ |
ಪ್ರಕಟಿಸಿದ ದಿನಾಂಕ : 2010-03-21
ತಿರುವನಂತಪುರಂ, ಭಾನುವಾರ, 21 ಮಾರ್ಚ್: ಕಿಂಗ್‌ಫಿಶರ್ ವಿಮಾನದಲ್ಲಿ ವಾರಸುದಾರರಿಲ್ಲದ ಬ್ಯಾಗ್‌ನಲ್ಲಿ, ಕಚ್ಚಾ ಬಾಂಬ್ ಪತ್ತೆಯಾಗಿದ್ದರಿಂದ ತುರ್ತುನಿಲುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಿಂದ ತಿರುವನಂತಪುರಂಗೆ ಪ್ರಯಾಣಿಸುತ್ತಿದ್ದ ಐಟಿ-4731 ಸಂಖ್ಯೆಯ ಕಿಂಗ್‌ಫಿಶರ್ ವಿಮಾನದ ಸಿಬ್ಬಂದಿ ಸ್ವಚ್ಚಗೊಳಿಸುತ್ತಿರುವ ಸಂದರ್ಭದಲ್ಲಿ, ಚೆಂಡಿನ ಆಕಾರದ ಶಂಕಿತ ವಸ್ತು ವೊಂದು ಪತ್ತೆಯಾಗಿದ್ದರಿಂದ, ತುರ್ತುನಿಲುಗಡೆ ಘೋಷಿಸಿ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತ ವಾಗಿ ವಿಮಾನದಿಂದ ಹೊರತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಶಂಕಿತ ವಸ್ತುವಿನ ತನಿಖೆಯನ್ನು ನಡೆಸಿದಾಗ, ಕಚ್ಚಾ ಬಾಂಬ್ ಎ ನ್ನುವುದು ಖಚಿತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಮಾನದಲ್ಲಿ ಕಚ್ಚಾ ಬಾಂಬ್ ಪತ್ತೆಯಾದ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವೆಬ್ ದುನಿಯ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|