ನವದೆಹಲಿ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ನಾಲ್ವರು ನೂತನ ಮಹಿಳಾ ಸದಸ್ಯರು |
ಪ್ರಕಟಿಸಿದ ದಿನಾಂಕ : 2010-03-21
ಹೊಸದಿಲ್ಲಿ, ಮಾ.೨೦: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂ ಪಿಎಲ್‌ಬಿ) ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯ ನೀಡಲು ನಿರ್ದರಿಸಿದ್ದು, ದೇಶದ ಮುಸ್ಲಿಮರ ಅತ್ಯುನ್ನತ ಪ್ರತಿನಿಧಿ ಸಂಘಟನೆಯ ೫೧ ಸದಸ್ಯರ ಕಾರ್ಯಕಾರಿ ಮಂಡಳಿಯಲ್ಲಿ ನಾಲ್ವರು ಹೊಸ ಮಹಿಳೆಯರಿಗೆ ಸ್ಥಾನ ನೀಡಿದೆ.
ಇದರೊಂದಿಗೆ ಕಾರ್ಯಕಾರಿ ಸಮಿತಿಯಲ್ಲಿ ಮಹಿಳೆಯರ ಸಂಖ್ಯೆ ೫ಕ್ಕೇರಿದೆ. ಮುಸ್ಲಿಂ ಕಾನೂನು ಮಂಡಳಿಯ ೨೧ನೆ ಮಹಾ ಸಭೆಯ ಎರಡನೆಯ ದಿನವಾದ ಶನಿವಾರ ಚುನಾವಣೆಗಳನ್ನು ನಡೆ ಸಲಾಯಿತು.
ರುಕ್ಸಾನಾ ಲಾರಿ, ಸಫಿಯಾ ನಸೀಂ (ಇಬ್ಬರೂ ಲಕ್ನೊದವರು) ನೂರ್ ಜಹಾನ್ ಶಕೀಲ್ (ಕೋಲ್ಕತಾ) ಹಾಗೂ ಅಸ್ಮಾ ಝೆಹ್ರಾ (ಹೈದರಾಬಾದ್) ನಾಲ್ಕು ಹೊಸ ಮಹಿಳಾ ಮುಖಗ ಳಾಗಿವೆ. ನಸೀಂ ಇಕ್ತಿದಾರ ಅಲಿಖಾನ್ ಕಾರ್ಯಕಾರಿಣಿಯಲ್ಲಿದ್ದ ಏಕೈಕ ಮಹಿಳೆಯಾಗಿದ್ದರು. ಅವರು ಸದಸ್ಯೆಯಾಗಿ ಮುಂದುವರಿಯಲಿದ್ದಾರೆ.
ಮೌಲಾನಾ ರಾಬೇ ಹಸನಿ ನದ್ವಿ ಸತತ ಮೂರನೆ ಬಾರಿಗೆ ಕಾನೂನು ಮಂಡಳಿಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮೊದಲು ಹೈದರಾಬಾದ್‌ನ ಮಹಾ ಸಭೆಯಲ್ಲಿ ಹಾಗೂ ಎರಡನೆ ಬಾರಿ ಚೆನ್ನೈಯಲ್ಲಿ ನಡೆದ ಮಹಾಸಭೆಯಲ್ಲಿ ಅವರು ಅಧ್ಯಕ್ಷರಾಗಿ ಆಯ್ಕೆಯಾ ಗಿದ್ದರು.
ಮೌಲಾನಾ ನದ್ವಿಯವರ ಹೆಸರನ್ನು ಎಐಎಂಪಿಎಲ್‌ಬಿ ಯ ಉಪಾಧ್ಯಕ್ಷ ಮೌಲಾನಾ ಸೈಯದ್ ಕಲ್ಬೆ ಸಾದಿಕ್ ಸೂಚಿಸಿದರು. ಬೇರಾರೂ ಈ ಹುದ್ದೆಗೆ ಉಮೇದುವಾರರಿಲ್ಲದ ಕಾರಣ ಮೌಲಾನಾ ರಾಜೀ ನದ್ವಿ ಅವಿರೋಧವಾಗಿ ಆಯ್ಕೆಯಾದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|