ಬೆ೦ಗಳೂರು: ಲಗ್ಗರೆ ವಾರ್ಡ್‌ಗೆ ಗೆಲುವಿನ ಲಗ್ಗೆ ಇಡುತ್ತಿರುವ ಜೆಡಿಎಸ್ ಅಭರ್ಥಿ ಶಿ ನಾರಾಯಣ ಸ್ವಾಮಿ |
ಪ್ರಕಟಿಸಿದ ದಿನಾಂಕ : 2010-03-21
ಬೆಂಗಳೂರು, ಮಾ.೨೦: ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ೬೯ನೆ ವಾರ್ಡ್‌ನ ಅಭರ್ಥಿಯಾಗಿ, ಸಮಾಜ ಸೇವೆಯ ಮುಂಚೂಣಿಯಲ್ಲಿರುವ ಯುವನಾಯಕ ನಾರಾಯಣಸ್ವಾಮಿ ಅಪಾರ ಬೆಂಬಲದೊಂದಿಗೆ ಬಿರುಸಿನ ಪ್ರಚಾರವನ್ನು ಆರಂಭಿಸಿದ್ದಾರೆ.
ನಾರಾಯಣಸ್ವಾಮಿಯವರು ರಾಜರಾಜೇಶ್ವರಿ ವಾರ್ಡಿನ ಹಾಗೂ ಕ್ಷೇತ್ರದ ಜನತೆಯೊಂದಿಗೆ ಸದಾ ಬೆರತು, ಸಮಾಜ ಸೇವೆಯಲ್ಲಿ ತೊಡಗಿದ್ದ ಕಾರಣ ಅಲ್ಲಿನ ಜನತೆಯ ಆಕಾಂಕ್ಷೆಯ ಮೇರೆಗೆ ಚುನಾವಣಾ ಕಣದಲ್ಲಿ ಸ್ಪರ್ಧಿಸುತ್ತಿದ್ದಾರೆ. ನಾರಾಯಣ ಸ್ವಾಮಿಯವರಿಗೆ ವಿಜಯಲಕ್ಷೀ ಒಲಿಯು ವುದು ಖಚಿತವಾಗಿದೆ. ಈ ಕ್ಷೇತ್ರದಲ್ಲಿ ೩೫ ಸಾವಿರ ಜನರಿದ್ದು, ೧೫ ಸಾವಿರ ಒಕ್ಕಲಿಗ ಸಮುದಾ ಯದವರೆ ಆಗಿದ್ದು, ನಾರಾಯಣಸ್ವಾಮಿ ಕೂಡ ಇದೇ ಸಮುದಾಯದವರಾಗಿರುವುದರಿಂದ ಸಂಪೂರ್ಣ ಬೆಂಬಲ ದೊರೆಯುವ ನಿರೀಕ್ಷೆ ಇದೆ.
ಪ್ರಸ್ತುತ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಾಗಿರುವ ಇವರ ಜನಪ್ರಿಯತೆ ದಿನೇ ದಿನೇ ಬೆಳೆಯುತ್ತಿರುವುದು ಸಜ್ಜನಿಕೆ, ವಿನಯಭಾವ, ಶಿಸ್ತು, ಸಂಯಮ ಹಾಗೂ ಕಾರ್ಯ ಪರತೆಗೆ ಸಾಕ್ಷಿಯಾಗಿದೆ. ಸದಾಕಾಲ ಜನ ಸಾಮಾನ್ಯರೊಂದಿಗೆ ಬೆರೆಯುವ ಹಾಗೂ ಹಗಲಿರುಳು ಜನ ಸೇವೆಗೈಯುತ್ತಿದ್ದಾರೆ. ಇವರು ಮಾಡಿರುವ ಎಲ್ಲ ಕಾರ್ಯಗಳನ್ನು ಜನರು ಗುರುತಿಸಿದ್ದಾರೆ.
ನಾರಾಯಣಸ್ವಾಮಿಯವರು ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದ ನಾಯಕನಾಗಿ ಗುರುತಿಸಿ ಕೊಳ್ಳುತ್ತಿರುವುದು ನಿಜಕ್ಕೂ ಪ್ರಶಂಸನೀಯ. ಮೂಲತಃ ಬೆಂಗಳೂರು ತಾಃಬಂಡಿ ಕೋಡಿಗೇನ ಹಳ್ಳಿಯವರಾದ ಇವರು ಪ್ರಗತಿಪರ ರೈತ ಮುಖಂಡ ದಿ. ಮುತ್ತುರಾಯಪ್ಪರ ಪುತ್ರ. ಐಟಿಐ ತಾಂತ್ರಿಕ ಪದವಿಯನ್ನು ಪಡೆದಿರುವ ಇವರಿಗೆ ರಾಜಕೀಯದಲ್ಲಿ ಆಳವಾದ ತಿಳಿವಳಿಕೆ ಇದೆ. ಬಹುತೇಕ ಪಕ್ಷದ ವರಿಷ್ಠರೊಂದಿಗೆ ಚಲನವಲನ ಇರುವುದರಿಂದ ರಾಜಕೀಯ ತಂತ್ರಗಾರಿಕೆ ಯನ್ನು ಅರಿತಿದ್ದಾರೆ.
ವಾರ್ಡ್‌ನ ಜನತೆಯೊಂದಿಗೆ ಸದಾ ಬೆರೆತುಕೊಂಡಿರುವುದರಿಂದ ಅಲ್ಲಿನ ಜನತೆಯ ಸಮಸ್ಯೆಗಳ ಬಗ್ಗೆ ಸಂಪೂರ್ಣ ಅರಿವಿದೆ. ಈಗಾಗಲೇ ನೀರಿನ ಸಮಸ್ಯೆ ಇರುವ ಕ್ಷೇತ್ರದ ಜನತೆಗೆ ನೀರು ಪೂರೈಸುವ ವ್ಯವಸ್ಥೆಯನ್ನು ಮಾಡುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ತಮ್ಮ ವಾರ್ಡ್‌ನ್ನು ಒಂದು ಮಾದರಿ ವಾರ್ಡ್‌ನ್ನಾಗಿ ಮಾಡುವುದು ಹಾಗೂ ಜನರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವು ದು ಇವರ ಮುಖ್ಯ ಗುರಿಯಾಗಿದೆ.
ಇವರ ಧರ್ಮಪತ್ನಿಯವರು ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿದ್ದಾರೆ. ಅಪಾರ ಬೆಂಬಲಿಗ ರೊಂದಿಗೆ ಬೆಳಗ್ಗೆಯಿಂದ ಸಂಜೆಯತನಕ ಬಿರುಸಿನ ಪ್ರಚಾರವನ್ನು ನಡೆಸುತ್ತಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಅದೇ ರೀತಿ ಆ ವಾರ್ಡ್‌ನ ಎಲ್ಲಾ ಜನತೆಯ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಗೆಲುವು ನಾರಾಯಣ ಸ್ವಾಮಿಯವರದ್ದೆ ಎಂಬುದರಲ್ಲಿ ಸಂಶಯವಿಲ್ಲ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|