ಆನೆಕಲ್ : ನೀರಿಗಾಗಿ ಮಹಿಳಾ ಸಂಘಟನೆಗಳಿಂದ ಧರಣಿ |
ಪ್ರಕಟಿಸಿದ ದಿನಾಂಕ : 2010-03-21
ಆನೇಕಲ್, ಮಾ.೨೦: ತಾಲೂಕಿನ ವಣಕನಹಳ್ಳಿ ಗ್ರಾಮ ಪಂಚಾಯತ್ ಮುಂಭಾಗ ಸೋಲೂರು ಗ್ರಾಮದ ಸ್ತ್ರೀಶಕ್ತಿ ಗುಂಪು, ಅಂಬೇಡ್ಕರ್ ಯುವಕ ಸಂಘ, ಆನೇಕಲ್ ಸಂಚಯನೆಲೆ, ಕರ್ನಾಟಕ ದಲಿತ ಮಹಿಳಾ ವೇದಿಕೆ ಇವುಗಳ ಸಹಕಾರದೊಂದಿಗೆ ಖಾಲಿ ಕೊಡಗಳನ್ನಿಟ್ಟು ಮಹಿಳೆಯರು ಶಾಶ್ವತ ನೀರಿನ ಪೂರೈಕೆಗಾಗಿ ಒತ್ತಾಯಿಸಿ ಇಂದು ಬೆಳಗ್ಗೆ ಧರಣಿ ನಡೆಸಿದರು.
ಎರಡು ತಿಂಗಳಿನಿಂದ ಕೊಳವೆ ಬಾವಿ ಕೆಟ್ಟಿದ್ದು, ತಾತ್ಕಾಲಿಕವಾಗಿ ದಿನ ಕ್ಕೊಂದು ಟ್ರಾಕ್ಟರ್ ಕುಡಿಯುವ ನೀರನ್ನು ಗ್ರಾ.ಪಂ.ವತಿಯಿಂದ ಸೋಲೂರಿಗೆ ಒದಗಿಸಲಾಗುತ್ತಿತ್ತು. ಸಮರ್ಪಕ ವಿದ್ಯುತ್ ಇಲ್ಲ ಎಂಬ ನೆಪ ಒಡ್ಡಿ ಎರಡು ತಿಂಗಳಿನಿಂದ ಕುಡಿಯುವ ನೀರು ಪೂರೈಕೆಯಾಗಿಲ್ಲ. ಇದರಿಂದಾಗಿ ಗ್ರಾಮದ ವ್ಯಕ್ತಿಯ ತೋಟದಿಂದ ಗ್ರಾಮಸ್ಥರ ಮನವಿ ಮೇರೆಗೆ ನೀರನ್ನು ಉಚಿತ ವಾಗಿ ಸರಬರಾಜು ಮಾಡಲಾಗುತ್ತಿತ್ತು. ಇಂದು ತಕ್ಷಣ ನೀರನ್ನು ನಿಲ್ಲಿಸಿದ್ದು, ಧರಣಿ ನಡೆಸಲು ಕಾರಣವಾಯಿತು.
ಗ್ರಾಮ ಪಂಚಾಯತ್‌ನ ತಟಸ್ಥ ಧೋರಣೆಯನ್ನು ಖಂಡಿಸಿ ಗ್ರಾಮಸ್ಥರು ನೀರಿಗಾಗಿ ಒತ್ತಾಯಿಸು ತ್ತಿದ್ದರೆ ಪಂಚಾ ಯತ್‌ನಲ್ಲಿ ಸಿಬ್ಬಂದಿಗಳೇ ಇರಲಿಲ್ಲ. ಅಲ್ಲದೇ ಅಧ್ಯಕ್ಷರು ಮಧ್ಯಾಹ್ನದ ನಂತರ ಪಂಚಾಯತ್‌ಗೆ ಆಗಮಿಸಿದ್ದು, ಧರಣಿ ನಿರತ ಮಹಿಳೆಯರ ಆಕ್ರೋಶಕ್ಕೆ ಕಾರಣವಾಯಿತು.
ನಂತರ ಮಾಜಿ ಅಧ್ಯಕ್ಷ ಆರ್.ದೇವ ರಾಜು, ಸಂಚಯನೆಲೆಯ ಜಯ್, ಗ್ರಾ.ಪಂ. ಅಧ್ಯಕ್ಷ ಶ್ರೀನಿ ವಾಸ್ ಮುಂತಾದವರ ಸಮ್ಮುಖದಲ್ಲಿ ಧರಣಿ ನಿರತರ ಮನವಿಯನ್ನು ಸ್ವೀಕರಿಸಿ, ದಿನಕ್ಕೆ ನಾಲ್ಕು ಟ್ರಾಕ್ಟರ್ ನೀರನ್ನು ಪೂರೈಸಲಾ ಗುವುದು ಹಾಗೂ ಕೊಳವೆ ಬಾವಿ ಯನ್ನು ದುರಸ್ತಿಗೊಳಿಸಿ ಶಾಶ್ವತ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಧರಣಿನಿರತ ರಿಂದ ಸೋಲೂರು ಗ್ರಾಮದಲ್ಲಿ ರಸ್ತೆ, ಚರಂಡಿ, ಬೀದಿ ದೀಪಗಳಿಲ್ಲ ಎಂಬ ದೂರುಗಳು ಕೇಳಿ ಬಂದವು. ಜನಪ್ರತಿ ನಿಧಿಗಳು ಧರಣಿನಿರತರಿಗೆ ಆಶ್ವಾಸನೆ ನೀಡಿದ ಬಳಿಕ ಧರಣಿ ಹಿಂದೆಗೆದು ಕೊಳ್ಳಲಾಯಿತು.
ಧರಣಿಯಲ್ಲಿ ಯಲ್ಲೇಶ್, ದೊರೆಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾಭ್ಹಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|