ಉಡುಪಿ: ಇ.ಎಂ.ಎಸ್. ನಂಬೂದರಿಪಾಡ್ ಜನ್ಮಶತಾಬ್ದ ವಿಚಾರಸಂಕಿರಣ |
ಪ್ರಕಟಿಸಿದ ದಿನಾಂಕ : 2010-03-21
ಉಡುಪಿ, ಮಾ.೨೦: ಇಂದಿನ ರಾಜಕೀಯದಲ್ಲಿ ಪ್ರಾಮಾಣಿಕತೆ ಎಂಬುದು ಸಂಪೂರ್ಣ ಮರೆಯಾ ಗಿದೆ. ಅದು ಕಾಡಿನಲ್ಲಿರುವ ಸಸ್ಯಹಾರಿ ಹುಲಿಯನ್ನು ಹುಡುಕುವಷ್ಟೆ ಕಷ್ಟಕರವಾಗಿದೆ. ಆದರೆ ಇದಕ್ಕೆಲ್ಲ ಅಪವಾದ ಎಂಬಂತೆ ಇ.ಎಂ.ಎಸ್. ನಂಬೂದರಿಪಾಡ್ ಅವರು ಕೇರಳದಲ್ಲಿ ಆಡಳಿತ ನಡೆಸಿದ್ದರು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ನಿವೃತ್ತ ಅಧ್ಯಕ್ಷ ಪ್ರೊ.ಡಾ.ಸುರೇಂದ್ರ ರಾವ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಸಮುದಾಯ ಸಂಘಟನೆಯ ಆಶ್ರಯದಲ್ಲಿ ಶನಿವಾರ ಬನ್ನಂಜೆ ಶಿವಗಿರಿ ಸಭಾ ಭವನದಲ್ಲಿ ಆಯೋಜಿಸಲಾದ ಇ.ಎಂ.ಎಸ್. ನಂಬೂದರಿಪಾಡ್ ಜನ್ಮಶತಾಬ್ದ ವಿಚಾರಸಂಕಿರ ಣದಲ್ಲಿ ಅವರು ಮಾತನಾಡುತ್ತಿದ್ದರು.
ದೇಶದ ಕಮ್ಯುನಿಸ್ಟ್ ಪಕ್ಷದ ಮೊದಲ ಮುಖ್ಯಮಂತ್ರಿಯಾಗಿದ್ದ ಇ.ಎಂ.ಎಸ್. ಜಾರಿಗೆ ತಂದಿದ್ದ ಭೂಸುಧಾರಣಾ ಕಾನೂನು ಇಂದಿಗೂ ಮಾದರಿಯಾಗಿದೆ. ಜನಪರ ಹಾಗೂ ಸಾಮಾಜಿಕ ಹೋರಾಟಗಳಿಂದ ಮುಂಚೂಣಿಗೆ ಬಂದ ಇವರ ಸೈದ್ಧಾಂತಿಕ ನಿಷ್ಠೆ ಅಪರೂಪ ಎಂದರು.
ಬದಲಾವಣೆಗಳಿಗಾಗಿ ಹೋರಾಟ, ಚಳವಳಿಗಳನ್ನು ನಡೆಸಿದ ಹೆಚ್ಚಿನ ನಾಯಕರು ತಮಗೆ ಅಧಿಕಾರ ದೊರೆತಾಗ ತಮ್ಮ ಧೋರಣೆಗಳನ್ನು ಸಡಿಲಿಸಿ ಕೊಂಡು ಅವನ್ನೆಲ್ಲ ಮರೆತುಬಿಟ್ಟಿದ್ದಾರೆ. ಆದರೆ ಇ.ಎಂ.ಎಸ್. ಅಧಿಕಾರ ಇರುವಾಗ, ಇಲ್ಲದಿರುವಾಗಲೂ ತಮ್ಮ ಸೈದ್ಧಾಂತಿಕ ನೆಲೆಯ ಲ್ಲಿಯೇ ಸಾಗಿದವರು. ಇವರು ತಮ್ಮ ಸಿದ್ಧಾಂತದೊಂದಿಗೆ ಎಂದಿಗೂ ರಾಜಿ ಮಾಡಿ ಕೊಂಡಿರಲಿಲ್ಲ ಎಂದು ಅವರು ಹೇಳಿದರು. ಇತಿಹಾಸವನ್ನು ಓದುವ ಹವ್ಯಾಸ ಇಂದು ಸಾಮಾನ್ಯ ಜನರು, ವಿದ್ಯಾರ್ಥಿಗಳಲ್ಲಿ ಬಹಳಷ್ಟು ಕಡಿಮೆಯಾಗಿದೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಮೂಲ್ಕಿ ವಿಜಯ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಹಯವದನ ಮೂಡುಸಗ್ರಿ ವಹಿಸಿದ್ದರು. ಮುಖ್ಯಅತಿಥಿಯಾಗಿ ಕುಂದಾಪುರ ಭಂಡಾರ್‌ಕರ್‍ಸ್ ಕಾಲೇಜಿನ ಹಿಂದಿ ವಿಭಾಗ ಮುಖ್ಯಸ್ಥ ಡಾ.ಜಿ.ಭಾಸ್ಕರ ಮಯ್ಯ ಮಾತನಾಡಿದರು. ಸಂಘಟನೆಯ ಸಂಚಾಲಕ ಅದಮಾರು ಶ್ರೀಪತಿ ಆಚಾರ್ಯ ಸ್ವಾಗತಿಸಿದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|