ದಾವಣಗೆರೆ: ತೆಪ್ಪ ಮಗುಚಿ ಮೂವರ ಸಾವು |
ಪ್ರಕಟಿಸಿದ ದಿನಾಂಕ : 2010-03-21
ದಾವಣಗೆರೆ, ಮಾ.೨೦: ಜಿಲ್ಲೆಯ ಚೆನ್ನಗಿರಿ ತಾಲೂಕಿನ ಸೂಳೆಕೆರೆಯಲ್ಲಿ ವಿಹಾರಕ್ಕೆ ತೆರಳಿದ್ದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸೇರಿದಂತೆ ಮೂವರು ತೆಪ್ಪ ಪಲ್ಟಿಯಾಗಿ ಮೃತಪಟ್ಟ ದಾರುಣ ಘಟನೆ ಶನಿವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು ದಾವಣಗೆರೆ ಚಿಗಟೇರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ದೀಪಾ (೨೨) ಮತ್ತು ಅನಿತಾ (೨೧) ಹಾಗೂ ಕಾಲೇಜಿನ ಸಹಾಯಕ ಸಿಬ್ಬಂದಿ ಜಗದೀಶ್ (೨೫) ಎಂದು ಗುರುತಿಸಲಾಗಿದೆ.
ಶನಿವಾರ ಚಿಗಟೇರಿ ನರ್ಸಿಂಗ್ ಕಾಲೇಜಿನ ಒಟ್ಟು ೨೯ ವಿದ್ಯಾರ್ಥಿಗಳು ಚೆನ್ನಗಿರಿ ಬಳಿಯ ಸೂಳೆಕೆ ರೆಗೆ ವಿಹಾರಕ್ಕೆ ತೆರಳಿದ್ದರು. ಸಂಜೆ ೪:೩೦ರ ಸುಮಾರಿಗೆ ತೆಪ್ಪವೊಂದರಲ್ಲಿ ಏಳು ಕೆರೆಯಲ್ಲಿ ವಿಹಾರಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ತೆಪ್ಪ ಏಕಾಏಕಿ ಪಲ್ಟಿಯಾಗಿದೆ. ಇದರ ಪರಿಣಾಮ ಇಬ್ಬರು ನರ್ಸಿಂಗ್ ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಸಿಬ್ಬಂದಿ ನೀರಿನಲ್ಲಿ ಮುಳುಗಿ ಸಾವ ನ್ನಪ್ಪಿದ್ದಾರೆ.
ಉಳಿದ ನಾಲ್ವರು ನೀರಿನಲ್ಲಿ ಈಜಿ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಮೃತ ದೀಪಾ ದಾವಣಗೆರೆಯ ಸಂತೆಬೆನ್ನೂರಿನ ನಿವಾಸಿಯಾಗಿದ್ದು, ಅನಿತಾ ಹರಪ್ಪನಹಳ್ಳಿಯ ನಿವಾಸಿ. ಕಾಲೇಜಿನ ಸಿಬ್ಬಂದಿ ಜಗದೀಶ್ ದಾವಣಗೆರೆ ಪಟ್ಟಣದ ನಿವಾಸಿ ಎಂದು ಪೊಲೀಸರು ಹೇಳಿದ್ದಾರೆ. ತಕ್ಷಣವೇ ಸುದ್ದಿ ತಿಳಿದ ಚೆನ್ನಗಿರಿ ಠಾಣಾ ಪೊಲೀಸರು ಅಗ್ನಿ ಶಾಮಕ ಸಿಬ್ಬಂದಿಗಳ ಸಹಾಯದಿಂದ ದೀಪಾ ಮತ್ತು ಅನಿತಾರ ಮೃತದೇಹಗಳನ್ನು ಹೊರತೆಗೆದರು. ಜಗದೀಶ್ ಮೃತದೇಹ ಶೋಧ ಕಾರ್ಯ ಕೈಗೊಳ್ಳಲಾಗಿದೆ.
ಸಂಬಂಧಿಸಿದಂತೆ ಚೆನ್ನಗಿರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|