ಮ೦ಗಳೂರು: ಸಾಹಿತ್ಯದ ಅಪಮೌಲ್ಯ ಕಿ.ರಂ.ನಾಗರಾಜ್ ವಿಷಾದ |
ಪ್ರಕಟಿಸಿದ ದಿನಾಂಕ : 2010-03-21
ಮಂಗಳೂರು, ಮಾ.೨೦: ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಅಪಮೌಲ್ಯಕ್ಕೊಳಗಾಗುತ್ತಿದೆ. ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲೂ ಸಾಹಿತ್ಯದ ಬೆಳವಣಿಗೆಗೆ ಪೂರಕವಾದ ಅವಕಾಶ ಕಡಿಮೆಯಾಗುತ್ತಿರು ವುದಾಗಿ ಖ್ಯಾತ ಚಿಂತಕ ಕಿ.ರಂ. ನಾಗರಾಜ್ ವಿಷಾದ ವ್ಯಕ್ತಪಡಿಸಿದರು.
ಅವರು ಇಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರತಿಭಾ ತರಂಗದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸಾಹಿತ್ಯದ ಸ್ವರೂಪ ಒಂದೇ ರೀತಿಯಾಗಿರುವುದಿಲ್ಲ. ಅದರ ಗ್ರಹಿಕೆ ಭಿನ್ನವಾದುದು. ಕಾಲಕಾಲಕ್ಕೆ ಬದಲಾಗುವ ಸನ್ನಿವೇಶದ ಸಂದರ್ಭದಲ್ಲಿ ಹುಟ್ಟಿಕೊಳ್ಳುವ ಸಾಹಿತ್ಯವು ಭಿನ್ನ ಸ್ವರೂಪವನ್ನು ಪಡೆದಿ ರುತ್ತದೆ.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಭಟ್ ಹಾಗೂ ಕನ್ನಡ ವಿಭಾಗದ ಭಾರತಿ ದೇವಿ ಉಪಸ್ಥಿತರಿದ್ದರು.
ಉಪನ್ಯಾಸಕ ಪಟ್ಟಾಭಿರಾಮ ಸೋಮಯಾಜಿ ಕಿರಂ ನಾಗರಾಜ್‌ರನ್ನು ಪರಿಚಯಿಸಿದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|