ಕಾಸರಗೋಡು: ಬೇಡುಡುಕ್ಕೆ-ಕುಟ್ಟಿಕೋಲು ಖಾಝಿಯಾಗಿ ಸಯ್ಯದ್ ಉಮರುಲ್ ಫಾರೂಕ್ |
ಪ್ರಕಟಿಸಿದ ದಿನಾಂಕ : 2010-03-21
ಕಾಸರಗೋಡು, ಮಾ.೨೦: ಬೇಡುಡುಕ್ಕೆ- ಕುಟ್ಟಿಕೋಲು ಸಂಯುಕ್ತ ಜಮಾಅತಿನ ನೂತನ ಖಾಝಿಯಾಗಿ ಮಂಜೇಶ್ವರ ಮಳ್‌ಹರಿನ ಚೇರ್‌ಮೇನ್ ಸಯ್ಯದ್ ಉಮರುಲ್ ಫಾರೂಕ್ ಅಲ್ ಬುಖಾರಿ ಅಧಿಕಾರ ವಹಿಸಿಕೊಂಡರು.
ಸಂಜೆ ೪ ಗಂಟೆಗೆ ನಡೆದ ಕಾರ್ಯಕ್ರಮದಲ್ಲಿ ಕೂರ ತಂಙಳ್ ದುವಾ ನೆರವೇರಿಸಿದರು. ಉಡುಪಿ ಖಾಝಿ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಉದ್ಘಾಟಿಸಿದರು. ಪಾಣಕ್ಕಾಡ್ ಸಯ್ಯದ್ ಶಿಹಾಬ್ ಆಟಕೋಯ ತಂಙಳ್ ಶಿರವಸ್ತ್ರ ತೊಡಿಸಿ ದರು. ಆಲಂಪಾಡಿ ಎ.ಎಂ.ಕುಂಞಬ್ದುಲ್ಲ ಮುಸ್ಲಿಯಾರ್ ಶಾಲು ಹೊದಿಸಿ ಸನ್ಮಾನಿಸಿದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಲಿಕುಂಞಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು.
ಪೊಸೋಟು ತಂಙಳ್ ಎಂದೇ ಖ್ಯಾತರಾದ ಸಯ್ಯದರು ಕಲ್ಲಿಕೋಟೆಯ ಕಡಲುಂಡಿಯಲ್ಲಿ ಜನಿಸಿದರು. ಪ್ರಸ್ತುತ ಕಲ್ಲಿಕೋಟೆಯ ಕಡಲುಂಡಿಯಲ್ಲಿ ಖಾಝಿಯಾಗಿ, ಕಾಸರಗೋಡು ಜಿಲ್ಲಾ ಸುನ್ನೀ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿ, ಎಸ್.ವೈ.ಎಸ್. ಕಾಸರ ಗೋಡು ಜಿಲ್ಲಾಧ್ಯಕ್ಷರಾಗಿ, ಸಮಸ್ತ ಕೇರಳ ಸುನ್ನೀ ಜಂಇಯ್ಯತುಲ್ ಉಲಮಾ ಕೇಂದ್ರ ಸಮಿತಿಯ ಸದಸ್ಯರಾಗಿ, ಕಳೆದ ಹತ್ತು ವರ್ಷಗಳಿಂದ ಮಂಜೇಶ್ವರದ ಮಳ್‌ಹರು ನೂರಿಲ್ ಇಸ್ಲಾಮಿಯದ ಅಧ್ಯಕ್ಷರಾಗಿ, ಜಮಿಅಃ ಸಅದಿಯ್ಯಃ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೂ ಮಳಹರಿನ ಕರ್ನಾಟಕದಲ್ಲಿರುವ ವಿವಿಧ ಅಂಗ ಸಂಸ್ಥೆಗಳ ಸಾರಥ್ಯವನ್ನು ವಹಿಸುತ್ತಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|