ಮ೦ಗಳೂರು: ಬರವಣಿಗೆ ಅಭಿವ್ಯಕ್ತಿಯ ಮಾಧ್ಯಮ: ಪ್ರೊ. ಇಂದಿರಾ |
ಪ್ರಕಟಿಸಿದ ದಿನಾಂಕ : 2010-03-21
ಮಂಗಳೂರು, ಮಾ.೨೦: ಮಹಿಳೆಯರ ಬರವಣಿಗೆ ಆಕೆಯ ಜೀವನದ ಸೋಲು ಗೆಲುವಿನ ಸಮಗ್ರ ಚಿಂತನೆಯಾಗಿದ್ದು, ಬರವಣಿಗೆ ಅಭಿವ್ಯಕ್ತಿಯ ಮಾಧ್ಯಮ ವಾಗಿದೆ. ಕಳೆದ ಸುಮಾರು ೨೦ ವರ್ಷ ಗಳಿಂದೀಚೆಗೆ ಮಹಿಳಾ ಸಾಹಿತ್ಯ ಕ್ಷೇತ್ರ ಉತ್ತಮ ಬೆಳವಣಿಗೆಯನ್ನು ಕಂಡಿದೆ ಎಂದು ಮೈಸೂರು ವಿವಿಯ ಅಂತಾ ರಾಷ್ಟ್ರೀಯ ಕೇಂದ್ರದ ನಿರ್ದೇಶಕಿ ಹಾಗೂ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಪ್ರೊ. ಆರ್. ಇಂದಿರಾ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರ ಮತ್ತು ಕರಾವಳಿ ಲೇಖಕಿಯರ ಮತ್ತು ವಾಚ ಕಿಯರ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಮಹಿಳಾ ಸಾಹಿತ್ಯೋತ್ಸ ವವನ್ನು ಮಂಗಳ ಗಂಗೋತ್ರಿಯ ಹಳೆಯ ಸೆನೆಟ್ ಸಭಾಂಗಣದಲ್ಲಿ ಅವರಿಂದು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿ ಮಹಿಳೆಯರ ಬರವಣಿಗೆಗಳನ್ನು ತಳ್ಳಿಹಾಕಲಾಗುತ್ತಿದ್ದು, ಮಹಿಳೆಯರ ಬರವಣಿಗೆ ಗಳೆಂಬ ವಿಭಾಗಿಕರಣ ಸರಿಯಲ್ಲ. ಮಹಿಳೆಯರ ಬರವಣಿಗೆ ಕೇವಲ ಮಹಿಳೆಯರಿಗೆ ಮಾತ್ರ ಸೀಮಿತವಾದುದಲ್ಲ ಎಂದು ಅವರು ತಿಳಿಸಿದರು.
ಮಹಿಳೆಯರಿಗೆ ಸಂಬಂಧಪಟ್ಟ ಸಮಸ್ಯೆಗಳ ಕುರಿತಂತೆ ಸಂಘಟಿತ ಹೋರಾಟ ಅಗತ್ಯ. ಈ ನಿಟ್ಟಿ ನಲ್ಲಿ ಮಹಿಳೆಯರಿಗೆ ಮುಕ್ತವಾಗಿ ತಮಗನಿಸಿದ್ದನ್ನು ಹೇಳಿ ಕೊಳ್ಳುವ ಅವಕಾಶ ದೊರಕಬೇಕೆಂದು ಪ್ರೊ. ಇಂದಿರಾ ಅಭಿಪ್ರಾಯಪಟ್ಟರು.
ಪರೀಕ್ಷಾಂಗ ಕುಲಸಚಿವ ಡಾ. ಪಿ.ಎಸ್. ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮಂಗಳೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಕಿಶೋರಿ ನಾಯಕ್ ಕೆ., ಲೇಖಕಿಯರ ಮತ್ತು ವಾಚಕಿಯರ ಸಂಘದ ಅಧ್ಯಕ್ಷೆ ಎ.ಪಿ. ಮಾಲತಿ ಉಪಸ್ಥಿತರಿದ್ದರು.
ಈ ಸಂದರ್ಭ ಮಹಿಳಾ ಅಧ್ಯಯನ ಕೇಂದ್ರದಿಂದ ಹೊರತರಲಾದ `ಮೇನ್‌ಸ್ಟ್ರೀಮಿಂಗ್ ಜೆಂಡರ್ ಇನ್ ದಿ ಕರಿಕುಲಂ', `ಪರ್‌ಸ್ಪೆಕ್ಟಿವ್ಸ್ ಆನ್ ವುಮೆನ್ಸ್ ಇಶ್ಯೂಸ್- ವಾಲ್ಯೂಮ್ ೧-೨' ಎಂಬ ಪುಸ್ತಕಗಳನ್ನು ಪ್ರೊ. ಇಂದಿರಾ ಬಿಡುಗಡೆಗೊಳಿಸಿದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21
|
|
|