ಬಿಬಿಎಂಪಿ ಚುನಾವಣೆ: ಬೆಂಗಳೂರಿನ ಪೌರಾಡಳಿತಕ್ಕೆ ಇತಿಹಾಸ |
ಪ್ರಕಟಿಸಿದ ದಿನಾಂಕ : 2010-03-21
ಕೇಂಪೇಗೌಡ ನಿರ್ಮಿಸಿದ ಬೆಂಗಳೂರು ನಗರಕ್ಕೆ ಪೌರಡಳಿತ ವ್ಯವಸ್ಥೆಯ ಇತಿಹಾಸ ತುಂಬಾ ಪುರಾತನವಾದದ್ದು. ಮಾರ್ಚ್ ೨೭, ೧೮೬೨ಕ್ಕೆ ಇಲ್ಲಿ ಪೌರಾಡಳಿತ ವ್ಯವಸ್ಥೆ ಜಾರಿ ಬಂತು. ಅಂದು `ಪಟ್ಟಣ ಅಭಿವೃದ್ಧಿ ಕಾಯ್ದೆ ೧೮೫೦' ಅಡಿಯಲ್ಲಿ ಒಂಬತ್ತು ಜನ ಉನ್ನತ ಪ್ರಜೆಗಳ `ಪೌರ ಮಂಡಳಿ ರಚಿಸಲಾಗುತ್ತಿತ್ತು. ನಂತರದಲ್ಲಿ ನಗರದ `ದಂಡು ಪ್ರದೇಶದಲ್ಲಿ' ಇದೇ ಮಾದರಿಯ ಮತ್ತೊಂದು ಪೌರ ಮಂಡಳಿ ರಚಿಸಲಾಯಿತು. ೧೮೮೧ರಲ್ಲಿ ಎರಡೂ ಮಂಡಳಿಗಳು ಕಾನೂನಿನ ಮಾನ್ಯತೆ ಪಡೆದುಕೊಂಡವು. ಈ ಎರಡು ಮಂಡಳಿಗಳು ಬೆಂಗಳೂರು ನಗರ ಪುರಸಭೆ ಹಾಗೂ ಬೆಂಗಳೂ ರು ನಾಗರಿಕ ಮತ್ತು ಸೈನಿಕ ಕೇಂದ್ರ ಪುರಸಭೆ ಎಂಬ ಹೆಸರಲ್ಲಿ ಪ್ರತ್ಯೇಕ ಸ್ವತಂತ್ರ ಮಂಡಳಿ ಗಳಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು.
ಸ್ವಾತಂತ್ರದ ನಂತರ ೧೯೪೯ರಲ್ಲಿ ಎರಡು ಮಂಡಳಿಗಳನ್ನು ಸೇರಿಸಿ ಬೆಂಗಳೂರು ನಗರ ಪಾಲಿಕೆಯನ್ನಾಗಿ ಮಾಡಲಾಯಿತು. ಆ ಸಂದರ್ಭದಲ್ಲಿ ೫೦ ಚುನಾವಣಾ ವಿಭಾಗಗಳಿಂದ ೭೦ ಚುನಾಯಿತ ಪ್ರತಿನಿಧಿಗಳನ್ನು ಪಾಲಿಕೆ ಹೊಂದಿತ್ತು. ಮೊದಲು ಬೆಂಗಳೂರು ನಗರ ಪಾಲಿಕೆ (ಬಿಸಿಸಿ) ಆಗಿದ್ದು, ನಂತರದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ (ಬಿಎಂಪಿ) ಆಗಿ ಮಾರ್ಪಟ್ಟಿತ್ತು. ೨೦೦೭ರಲ್ಲಿ ೭ ನಗರ ಸಭೆ, ೧ ಪಟ್ಟಣ ಪಂಚಾಯತ್ ಹಾಗೂ ೧೧೧ ಗ್ರಾಮಗಳು, ೮೦೦ ಚದರ ಕಿಲೋ ಮೀಟರ್ ವಿಸ್ತೀರ್ಣದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ ರಚನೆಯಾ ಯಿತು.
ಬಿಬಿಎಂಪಿ ಗಾತ್ರ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧಾನಸಭೆಯಷ್ಟು ಮಹತ್ವ ಪಡೆದುಕೊಂಡಿದೆ. ೧೯೮ ಚುನಾಯಿತ ಪ್ರತಿನಿಧಿಗಳ ಹೊರತಾಗಿ, ೨೦ ನಾಮ ನಿರ್ದೇಶಿತ ಸದಸ್ಯರು. ೨೮ ವಿಧಾನಸಭಾ ಸದಸ್ಯರು. ೧೧ ವಿಧಾನ ಪರಿಷತ್ ಸದಸ್ಯರು. ಕೆಲವು ಲೋಕ ಸಭಾ ಸದಸ್ಯರು ಸೇರಿ ಒಟ್ಟು ೨೬೮ ಸದಸ್ಯ ಬಲ ಬಿಬಿಎಂಪಿ ಹೊಂದಿದೆ. ಎಲ್ಲ ಸದಸ್ಯರು ಮತದಾನದ ಹಕ್ಕು ಪಡೆದಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21
|
|
|