ಮ೦ಡ್ಯ : ರಾಜ್ಯ ಸರಕಾರದ ವಿರುದ್ಧ ತಮಟೆ ಚಳವಳಿ |
ಪ್ರಕಟಿಸಿದ ದಿನಾಂಕ : 2010-03-21
ಮಂಡ್ಯ, ಮಾ.೨೦: ಪ್ರವಾಹ ಪೀಡಿತರ ಪುನರ್ವಸತಿಗಾಗಿ ಒತ್ತಾಯಿಸಿ ಕರ್ನಾ ಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನೇತತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ತಮಟೆ ಚಳವಳಿ ನಡೆಸಲಾಯಿತು.
ಕಚೇರಿ ಆವರಣದಲ್ಲಿ ಸಮಾವೇಶ ಗೊಂಡ ಸಮಿತಿಯ ನೂರಾರು ಕಾರ್ಯಕರ್ತರು, ಪ್ರವಾಹ ಪೀಡಿತರ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷವಹಿಸಿದೆ ಎಂದು ಕಿಡಿಕಾರಿದರು.
ನೆರೆಸಂತ್ರಸ್ತರಿಗೆ ಸಾರ್ವಜನಿಕರಿಂದ ದಾನವಾಗಿ ಬಂದ ಹಣವೆಷ್ಟು, ಖಜಾನೆಯಿಂದ ಬಿಡುಗಡೆ ಯಾದುದೆಷ್ಟು, ಎಷ್ಟು ಜನರಿಗೆ ಪರಿಹಾರ ನೀಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಅವರು ದೂರಿದರು.
ಮಂಡ್ಯ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆ ಮಂದಗತಿಯಲ್ಲಿ ಸಾಗಿದೆ. ಕೂಲಿಕಾರರಿಗೆ ಅನ್ಯಾಯವಾಗಿದೆ. ಯೋಜನೆ ಬಗ್ಗೆ ಜಾಗತಿ ಮೂಡಿಸಲು ಜಿಲ್ಲಾಡಳಿತ ವಿಫಲವಾಗಿದೆ ಎಂದು ಪ್ರತಿಭಟನಕಾರರು ತರಾಟೆಗೆ ತೆಗೆದುಕೊಂಡರು.
ಬಿಪಿಎಲ್ ಕಾರ್ಡ್ ವಿತರಣೆಯಲ್ಲಿನ ಲೋಪದೋಷ ಸರಿಪಡಿಸಬೇಕು. ಶಿವಮೊಗ್ಗ ಜಿಲ್ಲೆಯ ಈಸೂ ರು ಗ್ರಾಮದ ದಲಿತರ ಸಾಗುವಳಿ ಭೂಮಿ ಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಸಮಿತಿ ಮುಖಂಡರಾದ ಕೆಂಪಯ್ಯ ಸಾಗ್ಯ, ರಮಾನಂದ ತರೀಕೆರೆ ಕಾಲನಿ, ದೇವರಾಜು ಜಕ್ಕನಹಳ್ಳಿ, ರಾಮದಾಸ್, ಜಿಲ್ಲಾ ಮಹಿಳಾ ಒಕ್ಕೂಟದ ಪಿ. ಇಂದ್ರ, ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ವರದಿಯ ವಿವರಗಳು |
 |
ಕೃಪೆ : ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21
|
|
|