ನಾಳೆ ಭಾರತ-ಅಮೆರಿಕ ಅಣು ಸಂಸ್ಕರಣ ಒಪ್ಪಂದ ಘೋಷಣೆ ಸಂಭವ |
ಪ್ರಕಟಿಸಿದ ದಿನಾಂಕ : 2010-03-21
ಮುಂಬೈ: ಅಮೆರಿಕದಿಂದ ಭಾರತಕ್ಕೆ ಆಮದಾದ ಅಣು ಇಂಧನವನ್ನು ಪುನರ್‌ಸಂಸ್ಕರಣ ಮಾಡುವ ಒಪ್ಪಂದ ಸೋಮವಾರ ಘೋಷಣೆಯಾಗುವ ಸಂಭವವಿದೆ. ಎರಡೂ ದೇಶಗಳು ಈ ಸಂಬಂಧ ಅಧಿಕೃತವಾಗಿ ಘೋಷಣೆ ಮಾಡಲಿವೆ ಎಂದು ಹೇಳಲಾಗಿದೆ.
ಭಾರತ - ಅಮೆರಿಕದ ನಡುವಿನ ನಾಗರಿಕ ಪರಮಾಣು ಒಪ್ಪಂದ ಅನುಷ್ಠಾನಕ್ಕೆ ಬರುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಇದು ಅಂತಾರಾಷ್ಟ್ರೀಯ ಸುರಕ್ಷತೆಗೆ ಅನುಗುಣವಾಗಿ ಪರಮಾಣು ಪದಾರ್ಥಗಳ ಸಂರಕ್ಷಣೆಗೆ ಅವಕಾಶ ನೀಡುತ್ತದೆ.
ಎರಡು ದೇಶಗಳು ಒಪ್ಪಂದವನ್ನು ಈ ತಿಂಗಳ ಆರಂಭದಲ್ಲಿ ಅಂತಿಮಗೊಳಿಸಿವೆ. ಮುಂದಿನ ತಿಂಗಳು ಪ್ರಧಾನಿ ಮನಮೋಹನ್ ಸಿಂಗ್ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಅಣು ಭದ್ರತಾ ಶೃಂಗದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನವೇ ಅಮೆರಿಕದ ಕಾನೂನಿನ ಪ್ರಕಾರ ಭಾರತ-ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದ ಅಂತಿಮಗೊಳ್ಳಬೇಕಿದೆ. ಅಲ್ಲದೆ ಭಾರತವೂ ಭಾರತದ ಕಂಪನಿಗಳ ಪರವಾಗಿ ಈ ಬಗ್ಗೆ ಘೋಷಣೆ ಹೊರಡಿಸಬೇಕಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|