ಸ್ಪ್ಯಾನಿಷ್ ಲೇಖಕ ಬರೆದ ಸೋನಿಯಾ ಗಾಂಧಿ ಪುಸ್ತಕಕ್ಕೆ ಕಾಂಗ್ರೆಸ್ ಆಕ್ಷೇಪ |
ಪ್ರಕಟಿಸಿದ ದಿನಾಂಕ : 2010-03-21
ನವದೆಹಲಿ: ಸೋನಿ ಯಾ ಗಾಂಧಿ ಜೀವನವನ್ನು ಆಧರಿಸಿ ಸ್ಪ್ಯಾನಿಷ್ ಲೇಖಕ ಪತ್ರಕರ್ತ ಜೇವಿಯರ್ ಮೋರೋ ಬರೆದ ‘ದಿ ರೆಡ್ ಸಾರಿ’ ಪುಸ್ತಕ ಪ್ರಪಂಚದಾದ್ಯಂತ ಭಾರೀ ಬೇಡಿಕೆ ಸೃಷ್ಟಿಸಿದ್ದು, ಕಾಂಗ್ರೆಸ್ ವಲಯದಿಂದ ಕೃತಿಯ ಕುರಿತು ಆಕ್ಷೇಪ ವ್ಯಕ್ತವಾಗಿದೆ.
ಈ ಕೃತಿಯು ಕೇವಲ ಕಲ್ಪಿತವಾಗಿದ್ದು, ವಾಸ್ತವತೆಗಿಂತ ತುಂಬಾ ದೂರದಲ್ಲಿದೆ. ಅಲ್ಲದೇ ಪುಸ್ತಕ ಬರೆಯುವ ವೇಳೆ ಮೋರೋ ಸೋನಿಯಾ ಅವರನ್ನಾಗಲೀ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರನ್ನಾಗಲೀ ಸಂಪರ್ಕಿಸಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಮೋರೋ ವಿರುದ್ಧ ಕ್ರಮ ಕೈಗೊಳ್ಳುವ ಮಾತುಗಳನ್ನಾಡುತ್ತಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|