ಮಯಾನಗರಿಯಲ್ಲಿ ತ್ರಿವಳಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ವಿಭಿನ್ನ ವಿಚಾರ ಸಂಕಿರಣ ಮತ್ತು ಕೃತಿ ಬಿಡುಗಡೆ: ಬರೆದವರೆಲ್ಲರೂ ಸಾಹಿತಿಗಳಾಗಲಾರರು : ಕೆ. ಸತ್ಯನಾರಾಯಣ |
ಪ್ರಕಟಿಸಿದ ದಿನಾಂಕ : 2010-03-21
(ಚಿತ್ರ/ ವರದಿ : ರೋನ್ಸ್ ಬಂಟ್ವಾಳ್)
ಸಾಂತಕ್ರೂಜ್ ಪೂರ್ವದ ಕಲೀನಾ ಕ್ಯಾಂಪಸ್‌ನಲ್ಲಿನ ತಿಲಕ್ ಭವನದ ಭೂಗೋಳ ವಿಭಾಗದ ಸಭಾಗೃಹದಲ್ಲಿ ಇಂದಿಲ್ಲಿ (೨೦.೦೩.೨೦೧೦) ಶನಿವಾರ ಅಪರಾಹ್ನ ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ, ಕರ್ನಾಟಕ ಸಾಹಿತ್ಯ ಆಕಾಡೆಮಿ ಬೆಂಗಳೂರು ಮತ್ತು ಕರ್ನಾಟಕ ಜಾನಪದ ಆಕಾಡೆಮಿ ಬೆಂಗಳೂರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಸಂಸ್ಕೃತಿ, ವಿಭಿನ್ನ ನೆಲೆಗಳು ವಿಚಾರ ಸಂಕಿರಣ ಕೃತಿ ಬಿಡುಗಡೆ ಕಾರ್ಯಕ್ರಮಗಳು ನೇರವೇರಿದವು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಕೆ. ಸತ್ಯನಾರಾಯಣ ಇವರು ಉದ್ಘಾಟಿಸಿ ದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಎಂ.ಎಸ್. ಪಾಟೀಲ, ಸಾಹಿತ್ಯ ಆಕಾಡೆ ಮಿಯ ಸದಸ್ಯ ಡಾ| ಗುರುಲಿಂಗಪ್ಪ ಧಬಾಲೆ ಅಕ್ಕಲಕೋಟೆ, ಧಾರವಾಡದ ಕಥೆಗಾರ ಮತ್ತು ಪ್ರಾಧ್ಯಾಪಕ ಡಾ| ಸಂಗಮನಾಥ ಲೋಕಾಪುರ ಇವರು ಉಪನ್ಯಾಸ ನೀಡಿದರು.
ಸ್ವಾಮಿ ಗುರುಸಿದ್ಧಯ್ಯ, ಈಶ್ವರ ಅಲೆವೂರು, ನಿರಂಜನ ಸಿ.ಎಸ್. ಉಪನ್ಯಾಸಕ್ಕೆ ಪ್ರತಿಕ್ರಿಯೆಯ ನ್ನು ನೀಡಿದರು. ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್. ಉ ಪಾಧ್ಯ ವಿರಚಿತ ಕರ್ನಾಟಕ ಸಂಸ್ಕೃತಿ ಹೆಜ್ಜೆ ಹಾದಿ ಕೃತಿಯ ಬಗ್ಗೆ ಭರತ್ ಕುಮಾರ್ ಪೊಲಿಪು ಮಾಹಿತಿ ನೀಡಿದರು. ಡಾ| ಮೃದುಲಾ ಕಿರ್ಲೋಸ್ಕರ್ ಇವರ 'ಕರ್ನಾಟಕ ಕಶಿದಾ'ದ ಸೌಂದರ್ಯ ಆಂಗ್ಲ ಭಾಷೆ ಕೃತಿಯ ಕುರಿತು ಸುಮನ್ ಚಿಪ್ಲೂಣ್‌ಕರ್ ಮಾಹಿತಿಯನ್ನು ನೀಡಿದ್ದು, ಅತಿಥಿಗಣ್ಯರು ಕೃತಿಗಳನ್ನು ಲೋಕಾರ್ಪಣೆಗೈದರು.
ಕೆ. ಸತ್ಯನಾರಾಯಣ ಇವರು ಉದ್ಘಾಟನಾ ಭಾಷಣಗೈದು ಸಾಹಿತಿಗಳಿಗೆ ಮಹತ್ತರವಾದ ಜವಾ ಬ್ದಾರಿ ಇದೆ. ಆದುದರಿಂದ ಬರೆದವರೆಲ್ಲರೂ ಸಾಹಿತಿಗಳಾಗಲಾರರು. ಕನಿಷ್ಠ ಒಂದು ತಲೆಮಾರು ಯಾ ಜನಾಂಗಕ್ಕೆ ಭಾಷೆ ಅಥವಾ ಕನಸು ನೀಡುವರೇ ಸಾಹಿತಿಗಳೆನಿಸುವರು. ಭಾಷೆ ಯಾ ಕನಸಿಗೆ ಚಿಕಿತ್ಸೆ ಕೊಡುವ ಮತ್ತು ಎದ್ದು ನಿಂತ ಕೃತಿಗಳ ಲೇಖಕರು ಮಾತ್ರ ಸಾಹಿತಿಗಳಾಗಲು ಅರ್ಹರು. ಸಾಹಿತ್ಯವು ಬದುಕಿನ ಮೌಲ್ಯಮಾಪನಕ್ಕೆ ಪೂರಕವಾಗಿದ್ದು ಅದರಂತೆ ಬದುಕುವ ರೀತಿಯೇ ಸಂಸ್ಕೃತಿ ಆಗಿದೆ.
ಪ್ರಸಕ್ತ ಜನತೆಯಲ್ಲಿ ಕೇಳುವ ಪ್ರವೃತ್ತಿ ಮಾಯವಾಗುತ್ತಿದ್ದು, ಇದರಿಂದಲೇ ತಿಳಿದುಕೊಳ್ಳುವ ಸಂ ಸ್ಕೃತಿ ನಶಿಸಿ ಹೋಗುತ್ತಿದೆ. ಅದಕ್ಕೆ ತಕ್ಕಂತೆ ಸಮೂಹಮಾಧ್ಯಮಗಳು ಸಂಸ್ಕೃತಿ ಜೀವನದಲ್ಲಿ ಪರಿಣಾಮ ಬೀರಿದೆ. ಓದು ಎನ್ನುವುದು ಪ್ರಾರ್ಥನೆಯ ರೀತಿಯಾಗಿದೆ. ಏಕಾಂತದ ಓದು ಪ್ರಭಾವಿ ತವಾಗಿದ್ದು ಓದುವಿನಿಂದ ಕೃತಿಗಳ ಪುನಃರ್ ಜನ್ಮ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಶುಭಾವಸರದಲ್ಲಿ ಡಾ| ಪ್ರಭು ಅಂಗಡಿ, ಶ್ರೀಮತಿ ದಾಕ್ಷಾಯಿಣಿ ಯಡಹಳ್ಳಿ, ನಿತ್ಯಾನಂದ ಡಿ.ಕೋಟ್ಯಾನ್, ಪತ್ರಕರ್ತ ರೋನ್ಸ್ ಬಂಟ್ವಾಳ್, ಬಾಲಚಂದ್ರ ಬಿ.ರಾವ್, ಡಾ| ವಾಣಿ ಉಚ್ಚಿಲ್ಕರ್ ಸೇರಿದಂತೆ ಕನ್ನಡ ಭವನ ಎಜ್ಯುಕೇಶನ್ ಸೊಸೈಟಿ ಮತ್ತು ಮೊಗವೀರ ಮಾಸಿಕ ಪತ್ರಕ್ಕೆ ಗೌರ ವಾರ್ಪಣೆ ನೀಡಲಾಯಿತು. ಕನ್ನಡ ಭವನದ ಗೌರವ ಪುರಸ್ಕಾರವನ್ನು ಎ.ಬಿ ಶೆಟ್ಟಿ ಮತ್ತು ಶೇಖರ್ ಅವಿನ್ ಹಾಗೂ ಮೊಗವೀರ ಮಾಸಿಕದ ಗೌರವ ಪುರಸ್ಕಾರವನ್ನು ಸಂಪಾದಕ ಅಶೋಕ್ ಸುವ ರ್ಣ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಫಿಲಂಫೇರ್ ಪ್ರಶಸ್ತಿ ವಿಜೇತ ಖ್ಯಾತ ಫಿಲ್ಮ್ ಡಿಸೈನರ್ ಬಾನು ಅತೈಯ್ಯ ಉಪಸ್ಥಿತರಿದ್ದು ಡಾ| ಮೃದುಲಾ ಕಿರ್ಲೋಸ್ಕರ್ ಇವರನ್ನು ಸನ್ಮಾನಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ sಸ್ವಾಗತಿಸಿ ಪ್ರಾಸ್ತವಿಕ ನುಡಿಗಳನ್ನಾಡಿ ಕುಸುಮಾಗ್ರಜ್ ರಾಷ್ಟ್ರೀಯ ಪ್ರಶಸ್ತಿ ವಿಜೇತ ಜಯಂತ ಕಾಯ್ಕಿಣಿ ಇವರನ್ನು ಅಭಿನಂದಿಸಿ, ಕನ್ನಡ ಭಾಷೆ-ಸಂಸ್ಕೃತಿಯನ್ನು ಕಟ್ಟಿ ಬೇಳೆಸುವಲ್ಲಿ ಗುರುತರ ಸೇವೆಗೆ ಮುಂಬಯಿ ವಿವಿಯ ಕನ್ನಡ ವಿಭಾಗವು ಶ್ರಮಿಸುತಿದೆ ಭವಿಷ್ಯತ್ತಿನಲ್ಲೂ ಮಹತ್ವದ ದೇಣಿಗೆಯನ್ನು ನೀಡುವ ಪ್ರಯತ್ನದಲ್ಲಿದೆ.
ಶ್ರೀಮತಿ ವೀಣಾ ಶಾಸ್ತ್ರಿ ಇವರು ಸುಗಮ ಸಂಗೀತವನ್ನು ಸಾದರ ಪಡಿಸಿದರು. ಶ್ಯಾಮಲಾ ಪ್ರಕಾಶ್ ಪ್ರಾರ್ಥನೆಯನ್ನಾಡಿದರು. ಈಶ್ವರ ಅಲೆವೂರು ಗೌರವ ಪುರಸ್ಕೃತರನ್ನು ಪರಿಚಯಿಸಿ ದರು. ಶ್ರೀಮತಿ ಜ್ಯೋತಿ ದೇವಾಡಿಗ, ಮರಿಯಪ್ಪ ನಾಟೇಕರ್, ಶ್ರೀಮತಿ ಪೂರ್ಣಿಮಾ ಶೆಟ್ಟಿ ಮತ್ತು ಶಿವರಾಜ್ ಕೆ. ಇವರು ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಜ್ಯೋತಿ ದೇವಾಡಿಗ ಧನ್ಯವಾದ ಸಮರ್ಪಿಸಿದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|