ವಾಸ್ವಾನಿಗೆ ಎಫ್‌ಬಿಐ ನಿರ್ದೇಶಕರ ಪ್ರಶಸ್ತಿ |
ಪ್ರಕಟಿಸಿದ ದಿನಾಂಕ : 2010-03-21
ವಾಷಿಂಗ್ಟನ್, ಮಾ.೨೦: ಏಶ್ಯನ್ ಸಮುದಾಯದವರನ್ನು ಒಗ್ಗೂಡಿಸಿ ಪ್ರಬಲ ಏಕತೆಯನ್ನು ಸಾಧಿಸುವಲ್ಲಿ ಮುಖ್ಯ ಪಾತ್ರ ವಹಿಸಿರುವ ಭಾರತೀಯ ಅಮೆರಿಕನ್ ‘ಮೈಕ್’ ವಾಸ್ವಾನಿ ಅವರಿಗೆ ಫೆಡರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಶನ್ (ಎಫ್‌ಬಿಐ) ನಿರ್ದೇಶಕರ ಸಮುದಾಯದ ನಾಯ ಕತ್ವ ೨೦೦೯ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಭಾರತ ಸಂಜಾತ ವಾಸ್ವಾನಿ ಅವರು ಎಫ್‌ಬಿಐ ಪ್ರಧಾನ ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಎಫ್‌ಬಿಐ ನಿರ್ದೇಶಕ ರಾಬರ್ಟ್ ಎಸ್. ಮುಲ್ಲರ್ ಅವರಿಂದ ಗೌರವಿಸಲ್ಪಟ್ಟಿರುವ ೫೧ ಸಮುದಾಯ ನಾಯಕರಲ್ಲಿ ಓರ್ವರಾಗಿದ್ದಾರೆ.
ವಾಸ್ವಾನಿ ಅವರನ್ನು ಈ ಪ್ರಶಸ್ತಿಗೆ ಲಾಸ್ ವೇಗಾಸ್‌ನ ಎಫ್‌ಬಿಐ ಘಟಕ ಆಯ್ಕೆ ಮಾಡಿತ್ತು. ವಾಸ್ವಾನಿ ಅವರು ಲಾಸ್ ವೇಗಾಸ್‌ನಲ್ಲಿರುವ ಏಶ್ಯನ್ ಅಮೆರಿಕನ್ ಗ್ರೂಪ್ (ಎಎಜಿ) ಮತ್ತು ಏಶ್ಯನ್ ಅಮೆರಿಕನ್ ಕೂಟದ ಅಧ್ಯಕ್ಷರಾಗಿದ್ದಾರೆ. ವಾಸ್ವಾನಿ ೧೯೭೦ರಲ್ಲಿ ಅಮೆರಿಕಕ್ಕೆ ಬಂದಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-21
|
|
|