ಮುಂಬೈ - ಕಾರವಾರ ರೈಲು ಮಂಗಳೂರಿಗೆ: ಶೆಟ್ಟಿ |
ಪ್ರಕಟಿಸಿದ ದಿನಾಂಕ : 2010-03-21
ಮುಂಬಯಿ, ಮಾ.೨೦ : ಮುಂಬೈ-ಕಾರವಾರ ರೈಲು ಸದ್ಯದಲ್ಲೇ ಮಂಗಳೂರು ತನಕ ವಿಸ್ತರಣೆ ಯಾಗಲಿದೆ ಎಂದು ಬಿಜೆಪಿ ಮುಂಬಯಿ ದಕ್ಷಿಣ ಭಾರತ ಘಟಕದ ಉಪಾಧ್ಯಕ್ಷ ಮೋರ್ಲ ರತ್ನಾಕರ ಶೆಟ್ಟಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ಸಂಸದ ನಳಿನ್ ಕುಮಾರ್ ಅವರಲ್ಲಿ ರೈಲಿನ ಯಾನವನ್ನು ಮಂಗಳೂರು ತನಕ ವಿಸ್ತರಿಸುವಂತೆ ಕ್ರಮ ತೆಗೆದುಕೊಳ್ಳಲು ಇತ್ತೀಚೆಗೆ ಮಾತುಕತೆ ನಡೆಸಿದಾಗ ಈ ಕುರಿತ ಪ್ರಯತ್ನ ನಡೆಯುತ್ತಿದೆ. ಶೀಘ್ರದಲ್ಲಿ ಕಾರ್‍ಯಗತವಾಗಲಿದೆ ಎಂಬುದಾಗಿ ಆಶ್ವಾಸನೆ ನೀಡಿದರು ಎಂದು ಮೋರ್ಲ ರತ್ನಾಕರ ಶೆಟ್ಟಿ ಅವರು ಹೇಳಿದ್ದಾರೆ.
ಈ ರೈಲಿನ ಯಾನ ಮಂಗಳೂರು ತನಕ ವಿಸ್ತರಣೆಯಾದರೆ, ಎಪ್ರಿಲ್-ಮೇ ಬೇಸಗೆ ರಜೆಯಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|