ಮ೦ಗಳೂರು: ಕ೦ದಾಯ ಇಲಾಖೆಯಡಿಯಲ್ಲಿರುವ ಭೂಮಿಯನ್ನು ಗೋಮಾಳಕ್ಕೆ ಮೀಸಲು: `ನೈಸ್' ತಂದೆ ಮಕ್ಕಳ ವೃಥಾ ಆರೋಪ : ಯಡಿಯೂರಪ್ಪ |
ಪ್ರಕಟಿಸಿದ ದಿನಾಂಕ : 2010-03-21
ಮಂಗಳೂರು, ಮಾ. ೨೦: ರಾಜ್ಯದಲ್ಲಿ ಕಂದಾಯ ಇಲಾಖೆಯಡಿಯಲ್ಲಿ ಸಾಕಷ್ಟು ಜಮೀನು ಇದ್ದು, ಅದನ್ನು ಗುರುತಿಸಿ ಸರಕಾರದ ವಶಕ್ಕೆ ಪಡೆದು ಸ್ವಲ್ಪ ಭಾಗವನ್ನು ಗೋಮಾಳಕ್ಕೆ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಹೇಳಿದರು.
ಕಲ್ಲಡ್ಕದಲ್ಲಿ ಶ್ರೀ ರಾಮನಾಮ ತಾರಕ ಮಂತ್ರ ಜಪ ಯಜ್ಞದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯಮಂತ್ರಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಮಸೂದೆಗೆ ಒಪ್ಪಿಗೆ ನೀಡಲಾಗಿದೆ.
ಅದೇ ರೀತಿ ಗೋಮಾಳ ಸಂರಕ್ಷಣೆಗೆ ಏನಾದರೂ ಕ್ರಮ ಜರಗಿಸುವಿರಾ ಎಂಬ ಪ್ರಶ್ನೆಗೆ ಮುಖ್ಯ ಮಂತ್ರಿಗಳು ಹೇಳಿದ್ದು, ರಾಜ್ಯದಲ್ಲಿ ಹಿಂದಿನಿಂದಲೂ ಗೋಮಾಳಗಳನ್ನು ರಕ್ಷಿಸಿಕೊಂಡು ಬಂದಿದ್ದ ರು. ಆದರೆ ನಮ್ಮವರ ಕೆಲವೊಂದು ತಪ್ಪು ನೀತಿಯಿಂದಾಗಿ ಈಗಾಗಲೇ ಸಾಕಷ್ಟು ಗೋಮಾಳ ಭೂಮಿ ಪರಭಾರೆಯಾಗಿದೆ. ಉಳಿದಿರುವ ಸ್ವಲ್ಪ ಗೋಮಾಳವನ್ನು ಪರಬಾರೆಗೆ ಮಾಡುವುದಿಲ್ಲ. ಅದನ್ನು ರಕ್ಷಿಸಲಾಗುವುದು. ಕಂದಾಯ ಇಲಾಖೆ ಬಳಿ ಸಾಕಷ್ಟು ಜಮೀನು ಇದ್ದು, ಅದನ್ನು ಸರ ಕಾರ ವಶಕ್ಕೆ ಪಡೆದು, ಅಗತ್ಯವಾದಷ್ಟು ಜಮೀನನ್ನು ಅಭಿವೃದ್ಧಿಗೆ ಬಳಸಿ ಉಳಿದನ್ನು ಗೋಮಾಳ ವಾಗಿ ಬಳಸಲು ಸರಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಈ ಬಾರಿಯ ಬಜೆಟ್ ನಲ್ಲಿ ಪ್ರಕಟಿಸಿದ ಯೋಜನೆ , ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ತ್ವರಿತವಾಗಿ ಜಾರಿ ಮಾಡಲಾಗುವುದು. ಮುಂದಿನ ೩ ದಿನಗಳ ಕಾಲ ಬೆಂಗಳೂರಿನಲ್ಲಿ ಅಧಿಕಾರಿ ಗಳ ಸಭೆಯನ್ನು ನಡೆಸಿ ಎಲ್ಲ ಕಾರ್ಯಕ್ರಮಗಳನ್ನು ನಿಗದಿ ಅವಧಿಯೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು ಎಂದರು.
ನೈಸ್ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಅಧಿವೇಶನಕ್ಕಿಂತ ಮೊದಲೇ ಚರ್ಚೆಗೆ ಸಿದ್ದ ಎಂದು ಹೇಳಿದ್ದೆವು. ಸಮಯ ತೆಗೆದುಕೊಂಡು ಚರ್ಚೆಗೆ ಮುಂದಾಗುವುದು ವಿಪಕ್ಷಗಳ ಕೆಲಸ. ಚರ್ಚೆಗೆ ಬಾರದೆ, ಹೊರಗೆ ಆರೋಪ ಮಾಡುವುದು ಗೌಡ ಹಾಗೂ ಅವರ ಮಕ್ಕಳ ಗುಣ ಎಂದರು.
`ನೈಸ್' ತಂದೆ ಮಕ್ಕಳ ವೃಥಾ ಆರೋಪ: ಯಡಿಯೂರಪ್ಪ
ಮಂಗಳೂರು, ಮಾ.೨೦: ನೈಸ್ ಬಗ್ಗೆ ಈಗಾಗಲೆ ಸಾಕಷ್ಟು ಚರ್ಚೆಯಾಗಿದೆ. ಈ ಬಗ್ಗೆ ತಂದೆ ಮಕ್ಕಳನ್ನು ಮಾತುಕತೆಗೆ ಆಹ್ವಾನಿಸಲಾಗಿದ್ದರೂ ಅವರು ಮಾತು ಕತೆಗೆ ಬಂದಿಲ್ಲ. ಆದರೆ ತಂದೆ ಮಕ್ಕಳು ವೃಥಾ ಆರೋಪವನ್ನು ಮಾತ್ರ ಮುಂದು ವರಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿ ಯೂರಪ್ಪ ತಿಳಿಸಿದ್ದಾರೆ.
ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸುವ ಸಲುವಾಗಿ ಇಂದು ಸಂಜೆ ಬಜ್ಪೆ ಅಂತಾರಾ ಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭ ನೈಸ್ ಬಗ್ಗೆ ದೇವೇಗೌಡರು ತಮ್ಮನ್ನು ವಚನ ಭ್ರಷ್ಟರು ಎಂದು ಟೀಕಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಿದರು.
ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿರುವ ಯೋಜನೆಗಳನ್ನು ಕಾರ್ಯಗತಗೊಳಿ ಸಲಾಗುವುದು ಎಂದು ಅವರು ಹೇಳಿದರು.
ಬಜ್ಪೆ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮೇಯರ್ ರಜನಿ ದುಗ್ಗಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೆಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಶಾಸಕ ಯೋUಶ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಬ್ರಹ್ಮಣ್ಯೇಶ್ವರ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ್ ಶರ್ಮಾ ಮೊದಲಾದವರು ಸ್ವಾಗತಿಸಿದರು.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ/ವಾಭಾ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-21 00:00:00
|
|
| nazeem golden dubai, mangalore puttur | 2010-03-21 | | R S S, AGENDA THIS IS ONLY ...!!!NOT FOR EVERYBODY, WHEN I AM CHILD I START TO EAT BEEF NOW ALSO AM EATING BEEF,I NEVER STOP TO EAT BEEF,YESTER DAY WE WILL CELEBRATE TO EAT BEEF |
|