| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಸುಳ್ಯ: ಕೆಎಫ್‌ಡಿಸಿ ಕಾರ್ಮಿಕರ ಪ್ರತಿಭಟನೆ 6ನೆ ದಿನಕ್ಕೆ: ಪ್ರತಿಭಟನೆಗೆ ರಾಜಕೀಯ ಬೆಂಬಲ |
ಪ್ರಕಟಿಸಿದ ದಿನಾಂಕ : 2010-03-21
ಸುಳ್ಯ, ಮಾ.೨೦: ಕಾರ್ಮಿಕರ ವೇತನ ಹೆಚ್ಚಳವೂ ಸೇರಿದಂತೆ ವಿವಿಧ ಬೇಡಿಕೆ ಗಳನ್ನು ಮುಂದಿರಿಸಿ ಕರ್ನಾಟಕ ಪ್ಲಾಂಟೇಶನ್ ಆಂಡ್ ಇಂಡಸ್ಟ್ರೀಯಲ್ ವರ್ಕರ‍್ಸ್ ಟ್ರೇಡ್ ಯೂನಿಯನ್‌ನ ನೇತೃತ್ವದಲ್ಲಿ ಕೆಎಫ್‌ಡಿಸಿ (ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ)ಯ ಸುಳ್ಯ ವಿಭಾಗೀಯ ಕಚೇರಿಯ ಎದುರು ನಡೆಯುತ್ತಿರುವ ಪ್ರತಿಭಟನೆ ೬ನೆ ದಿನಕ್ಕೆ ಕಾಲಿರಿಸಿದೆ.
ಕಾರ್ಮಿಕರ ಈ ಪ್ರತಿಭಟನೆಗೆ ರಾಜಕೀಯ ಬೆಂಬಲ ವ್ಯಕ್ತವಾಗಿದ್ದು, ಶನಿವಾರ ಕಾಂಗ್ರೆಸ್ ನಾಯಕರ ದಂಡು ಹರಿದು ಬಂತು. ಇದೇ ವೇಳೆ ನಗರದಲ್ಲಿ ಸಾವಿರಾರು ಕಾರ್ಮಿಕರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ವೇತನ ಹೆಚ್ಚಳ, ವಾರೀಸುದಾರರಿಗೆ ಕೆಲಸ, ಜಾತಿ ಸರ್ಟಿಫಿಕೆಟ್ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಿ ಮಾ.೧೫ರಿಂದ ಈ ಪ್ರತಿಭಟನೆ ನಡೆಯುತ್ತಿದೆ.
ಶನಿವಾರ ಇಲ್ಲಿಗೆ ಭೇಟಿ ನೀಡಿದ ಮಾಜಿ ಸಚಿವ, ಶಾಸಕ ಬಿ.ರಮಾನಾಥ ರೈ ಮಾತನಾಡಿ, ಕಾರ್ಮಿಕರ ಬೇಡಿಕೆಗ ಳನ್ನು ನಿರಾಕರಿಸುತ್ತಿರುವ ಸರಕಾರ ಮತ್ತು ಕೆಎಫ್‌ಡಿಸಿಯ ಧೋರಣೆ ಖಂಡನೀಯ. ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ತಿಳಿಸಿದರು.
ಕೆಲವು ನಿಗಮಗಳು ಅಧಿಕಾರಿಗಳ ಮೋಜಿನ ಕೇಂದ್ರಗಳಾಗಿವೆ. ಬಿಜೆಪಿ ಸರಕಾರದಲ್ಲಿ ತಾವು ಏನು ಮಾಡಿದರೂ ನಡೆಯುತ್ತದೆ ಎಂದು ಅಧಿಕಾರಿಗಳು ಭಾವಿಸಿದ್ದರೆ ಅದು ತಪ್ಪು ಎಂದು ಜಿಲ್ಲಾ ಕಾಂಗ್ರೆಸ್ ಧುರೀಣ ಎಂ.ಜಿ.ಹೆಗಡೆ ಹೇಳಿದರು.
ಮಾಜಿ ಸಂಸದ ವಿನಯಕುಮಾರ್ ಸೊರಕೆ, ಶಾಸಕ ಯು.ಟಿ. ಖಾದರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಸುಳ್ಯ ನಗರ ಪಂಚಾಯತ್ ವಿಪಕ್ಷ ನಾಯಕ ಎಂ. ವೆಂಕಪ್ಪ ಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಗೋಕುಲ್‌ದಾಸ್ ಮಾತನಾಡಿದರು.
ಯೂನಿಯನ್ ಮುಖಂಡರಾದ ಶಿವಕುಮಾರ್, ದಯಾಳನ್, ಪೆರುಮಾಳ್, ರಾಮಸ್ವಾಮಿ, ಪ್ರಣ್ ಕುಮಾರ್ ಮೊದಲಾದವರು ಪ್ರತಿಭಟ ನೆಯ ನೇತೃತ್ವ ವಹಿಸಿದ್ದರು.
ಪ್ರತಿಭಟನೆ ನಾಟಕ: ಪ್ರತಿಭಟನಕಾರರನ್ನು ಕೆಎಫ್‌ಡಿಸಿಯು ಮಾತುಕತೆಗೆ ಕರೆದರೂ ಭಾಗವಹಿಸದೆ ಅದೇ ದಿನ ಪ್ರತಿಭಟನೆ ಆರಂಭಿಸಿ ರುವ ಶಿವಕುಮಾರ್ ನೇತೃತ್ವದ ತಂಡ ಪ್ರತಿಭಟ ನೆಯ ನಾಟಕ ಮಾಡುತ್ತಿದೆ ಎಂದು ತೋಟ ತೊಳಿಲಾಲರ್ ಸಂಘದ ಅಧ್ಯಕ್ಷ ಎ.ಆರ್. ಚಂದ್ರಲಿಂಗಂ ಆರೋಪಿಸಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂಘವು ತನ್ನ ಸ್ವಹಿತಾಸಕ್ತಿ ಗಾಗಿ ಕಾರ್ಮಿಕರ ಮಧ್ಯೆ ಗೊಂದಲ ಉಂಟು ಮಾಡುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ. ರಬ್ಬರ್ ಇಂಡಸ್ಟ್ರೀಸ್ ಎಂಪ್ಲಾಯಿಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಎ.ಗೋವಿಂದ ಸ್ವಾಮಿ, ಜನರಲ್ ಎಂಪ್ಲಾಯಿಸ್ ಯೂನಿಯನ್‌ನ ಅಧ್ಯಕ್ಷ ಎಸ್.ಷಣ್ಮುಗಂ ಮತ್ತಿತರರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-21 00:00:00
|
|
|
|
|