ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಶಿಕ್ಷಣ, ಗ್ರಾಮೀಣ ಅಭಿವೃದ್ಧಿಗೆ ಪ್ರೋತ್ಸಾಹ: ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಶ್ರೀರಾಮ ನಾಮ ತಾರಕ ಮಂತ್ರ, ಜಪ-ಯಜ್ಞದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ, ಸಚಿವ ಪಾಲೆಮಾರ್ ಪಾಲ್ಗೊಂಡರು.   

ಬಂಟ್ವಾಳ, ಮಾ. ೨೦: ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿಗೆ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು.

ಅವರು ಕಲ್ಲಡ್ಕ ಶ್ರೀರಾಮ ನಾಮ ತಾರಕ ಮಂತ್ರ, ಜಪ-ಯಜ್ಞದ ಅಂಗವಾಗಿ ಶ್ರೀರಾಮ ವಿದ್ಯಾಕೇಂದ್ರದ ಮುಖ್ಯಪ್ರಾಣ ವೇದಿಕೆಯಲ್ಲಿ ಶನಿವಾರ ಸಂಜೆ ನಡೆದ ಧರ್ಮ ಜಿಜ್ಞಾಸೆ ಸಭೆಯಲ್ಲಿ ಮಾತನಾಡಿದರು.

ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ವಿದ್ಯುತ್ ಸಹಿತ ಮೂಲ ಸೌಲಭ್ಯಗಳ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದರು.

ಗೋಹತ್ಯೆ ನಿಷೇಧ ಮಸೂದೆ ಮಂಡನೆ ಅತ್ಯಂತ ಕಠಿನ ಸಂದರ್ಭವಾಗಿತ್ತು. ಅದರ ಜೊತೆಗೆ ಸಂಸ್ಕೃತ ವಿದ್ಯಾಲಯ ಸ್ಥಾಪನೆಯ ದಿಟ್ಟ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ. ಸರಕಾರದ ಮೇಲೆ ಜನ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕೆ ಧಕ್ಕೆ ಆಗದಂತೆ ಆಡಳಿತ ನಡೆಸುತ್ತೇವೆ ಎಂದು ಯಡಿಯೂರಪ್ಪ ನುಡಿದರು.

ಸಮಾಜದಲ್ಲಿ ಸಾಮರಸ್ಯ ಉಳಿಸಿಕೊಳ್ಳುವ ಕೆಲಸ ಆಗಬೇಕು. ಸಂತರ ಸಂದೇಶ ನಮಗೆ ಶ್ರೀರಕ್ಷೆ. ಭವಿಷ್ಯದಲ್ಲಿ ಭಾರತ ಜಗತ್ತಿಗೆ ಮಾರ್ಗದರ್ಶಕವಾಗಲಿರುವುದು ಎಂದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ, ರಾಜ್ಯ ಬಿಜೆಪಿ ಸರಕಾರ ಕೃಷಿ -ಋಷಿ ಪರಂಪರೆಯ ರಕ್ಷಣೆಗೆ ಬದ್ಧವಾಗಿ ನಡೆದುಕೊಳ್ಳುವುದು ಎಂದರು.

ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಕೊಲ್ಯದ ಶ್ರೀ ಜಗದ್ಗುರು ರಮಾನಂದ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಬೊಲ್ಯೊಟ್ಟು ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಆದಿಚುಂಚನಗಿರಿ ಕಾವೂರು ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಒಡಿಯೂರು ಶ್ರೀ ಮಾತಾನಂದಮಯಿ, ಮರಕಡದ ಶ್ರೀ ಯೋಗೇಶ್ವರೇಶ್ವರ ನರೇಂದ್ರನಾಥ ಸ್ವಾಮೀಜಿ, ಶ್ರೀ ಉಮಾಮಹೇಶ್ವರ ಸ್ವಾಮೀಜಿ ಬಾಯಾರು, ಶ್ರೀ ಮುಕ್ತಾನಂದ ಸ್ವಾಮಿ ಕರಿಂಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧರ್ಮ ಜಿಜ್ಞಾಸೆ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಎಂ.ಬಿ. ಪುರಾಣಿಕ್ ಪ್ರಸ್ತಾವನೆ ನೀಡಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹಿಂದೂ ಧರ್ಮ, ಸಂಸ್ಕೃತಿ ಮರು ಸಂಸ್ಥಾಪಿಸುವಲ್ಲಿ ಸಂತರು ಸಮಾಜಕ್ಕೆ ದಾರಿ ತೋರಿಸಬೇಕು ಎಂದರು.

ಧರ್ಮದ ಮೂಲಕ ಜಗತ್ತಿನಲ್ಲಿ ಶಾಂತಿ ನೀಡಬಹುದು. ಧರ್ಮವೇ ನಮ್ಮ ಗೊಂದಲಗಳನ್ನು ನಿವಾರಿಸಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಸ್ವಾಗತ ಸಮಿತಿ ಗೌರವಾಧ್ಯಕ್ಷ ಉದ್ಯಮಿ ದಯಾನಂದ ಪೈ ಬೆಂಗಳೂರು, ಸಂಚಾಲಕರಾದ ಎ. ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಯಾಗಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಚಿವ ಕೃಷ್ಣ ಜೆ. ಪಾಲೆಮಾರ್ ಮುಂತಾದವರು ಉಪಸ್ಥಿತರಿದ್ದರು.

ಯಜ್ಞ ಸಮಿತಿ ಪ್ರಧಾನ ಡಾ| ಪ್ರಭಾಕರ ಭಟ್ ಕಲ್ಲಡ್ಕ ಸ್ವಾಗತಿಸಿ, ಕಲ್ಲಡ್ಕ ಶ್ರೀರಾಮ ಭಜನಾ ಮಂದಿರ ಒಳ್ಳೆಯ ಕೆಲಸಕ್ಕೆ ಪ್ರೇರಣಾ ಕೇಂದ್ರವಾಗಿದೆ. ರಾಮ ಎಂದರೆ ಒಳ್ಳೆಯದನ್ನು ಪ್ರೇರೇಪಿಸಿ ಕೆಟ್ಟದ್ದನ್ನು ತೊಲಗಿಸುವುದಾಗಿದೆ. ಜಾತಿ-ಮತ, ಸ್ತ್ರೀ-ಪುರುಷ ಎನ್ನದೆ ಎಲ್ಲರೂ ಯಜ್ಞದಲ್ಲಿ ಪಾಲ್ಗೊಳ್ಳುತ್ತಿರುವುದು ವೈಶಿಷ್ಟ್ಯವಾಗಿದೆ. ಇದು ತಪಸ್ಸಿನ ಕಾರ್‍ಯ, ಸಾಮರಸ್ಯದ ಸಮಾಜ ನಿರ್ಮಾಣ ಯಾಗದ ಉದ್ದೇಶ ಎಂದು ಸ್ಪಷ್ಟಪಡಿಸಿದರು.

ಸಂಚಾಲಕ ಸಮಿತಿ ಕಾರ್‍ಯದರ್ಶಿ ಡಾ| ಸೋಂದಾ ಭಾಸ್ಕರ ಭಟ್ ಕಾರ್‍ಯಕ್ರಮ ನಿರ್ವಹಿಸಿದರು. ಯಜ್ಞ ಸಮಿತಿ ಪ್ರ. ಕಾರ್‍ಯದರ್ಶಿ ಜಿತೇಂದ್ರ ಎಸ್. ಕೊಟ್ಟಾರಿ ವಂದಿಸಿದರು.

ಕಲ್ಲಡ್ಕ: ಶ್ರೀರಾಮನಾಮ ತಾರಕ ಯಜ್ಞಕ್ಕೆ ಚಾಲನೆ

ಯಾಗಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಅವರು ಯಾಗಭೂಮಿಕೆಯಲ್ಲಿ ದೀಪ ಪ್ರಜ್ವಲನ ಮಾಡಿದರು.   

ಬಂಟ್ವಾಳ, ಮಾ. ೨೦: ಕಲ್ಲಡ್ಕ ಶ್ರೀ ರಾಮ ಭಜನಾ ಮಂದಿರದಲ್ಲಿ ಶ್ರೀರಾಮ ನಾಮ ತಾರಕ ಮಂತ್ರ ಜಪ ಯಜ್ಞಕ್ಕೆ ಯಾಗ ಪ್ರಧಾನ ಡಾ| ಪ್ರಭಾಕರ ಭಟ್ ಅವರು ತುಪ್ಪದ ದೀಪ ಹಚ್ಚುವ ಮೂಲಕ ಮಾ. ೨೦ರ ಮುಂಜಾನೆ ೮.೧೫ಕ್ಕೆ ಚಾಲನೆ ನೀಡಿದರು.

ಪ್ರಭಾಕರ ಭಟ್ ಮತ್ತು ಡಾ| ಕಮಲಾ ಭಟ್ ದಂಪತಿ ನಾಂದಿ ಪುಣ್ಯಾಹ ಗಂಗಾಹರಣ ಪ್ರಾರ್ಥನೆ ಮಾಡುವ ಮೂಲಕ ಬಾವಿಯಿಂದ ಶುದ್ಧ ಜಲವನ್ನು ಸೇದಿ ಜಲಪೂರಣ ವಿಧಿ ನೆರವೇರಿಸಿದರು. ಬಳಿಕ ಶ್ರೀರಾಮ ನಾಮ ತಾರಕ ಮಂತ್ರ ಘೋಷದೊಂದಿಗೆ ಯಾಗ ಪ್ರಧಾನರ ನಿವಾಸದಿಂದ ಮಂದಿರಕ್ಕೆ ನೂರಾರು ಜನ ಮೆರವಣಿಗೆಯಲ್ಲಿ ತೆರಳಿದರು.

ಅಲ್ಲಿ ದೇವರಿಗೆ ಪ್ರಾರ್ಥನೆ ಮಾಡುವ ಮೂಲಕ ಅರಣಿ ಮಥನ ಮಾಡಿ ನಾಲ್ಕು ಯಜ್ಞ ಕುಂಡಗಳಲ್ಲಿ ಅಗ್ನಿಯನ್ನು ಪ್ರಜ್ವಲನ ಮಾಡಲಾಯಿತು. ಯಾಗಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಅವರು ಯಾಗ ಭೂಮಿಕೆಯಲ್ಲಿ ದೀಪ ಪ್ರಜ್ವಲನ ಮಾಡಿದರು. ಯಾಗ ಮೀಮಾಂಸಕ ಕೆ.ಎಸ್. ನಿತ್ಯಾನಂದ ಅವರ ನಿರ್ದೇಶನದಲ್ಲಿ ನಿರಂತರ ಯಜ್ಞಕ್ಕೆ ಚಾಲನೆ ದೊರೆಯಿತು.
ನೂರಕ್ಕೂ ಮಿಕ್ಕಿದ ಋತ್ವಿಜರ ಪಾಲ್ಗೊಳ್ಳುವಿಕೆಯಲ್ಲಿ ಯಜ್ಞ ನಡೆಯುತ್ತಿದೆ. ಸರತಿ ಸಾಲಿನಲ್ಲಿ ಸಾರ್ವಜನಿಕರಿಗೆ ಯಜ್ಞ ಕುಂಡಕ್ಕೆ ಹವಿಸ್ಸು ಸಮರ್ಪಣೆಗೆ ನಿರಂತರ ಅವಕಾಶ ಮಾಡಿಕೊಡಲಾಗಿದೆ. ಅಹೋರಾತ್ರಿ ಹವಿಸ್ಸು ಸಮರ್ಪಣೆ, ಅನ್ನದಾನ, ಭಜನೆ, ಹೋಮ ಹವನ, ಮಂತ್ರಪಠಣ ನಡೆದಿದೆ.

ಕಲ್ಲಡ್ಕವಿಂದು ಸಹಸ್ರಾರು ಸಂಖ್ಯೆಯ ಶ್ರೀರಾಮ ಭಕ್ತರಿಂದ ತುಂಬಿದ್ದು ಅಚ್ಚುಕಟ್ಟಾದ ಯಾವುದೇ ಗೊಂದಲಕ್ಕೆ ಎಡೆಯಾಗದ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ.

ಬಂದ ಭಕ್ತರೆಲ್ಲರಿಗೂ ಇಲ್ಲಿ ಉತ್ತಮ ಊಟೋಪಚಾರ ನೀಡಲಾಗುತ್ತಿದೆ. ಹಲವು ಸಾವಿರ ಜನರು ಇಲ್ಲಿ ಸೇರಿದ್ದರೂ ಸ್ವಚ್ಚತೆಯತ್ತ ವಿಶೇಷ ಗಮನ ನೀಡಲಾಗುತ್ತಿದೆ.

ಮಾ. ೨೧ರಂದು ಸಂಜೆ ಮೂರು ಗಂಟೆಗೆ ಪೂರ್ಣಾಹುತಿ ನಡೆಯಲಿದೆ. ಸಂಜೆ ೫.೩೦ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಪೇಜಾವರ ಮಠಾಧೀಶರ ಭಾಗವಹಿಸುವಿಕೆಯಲ್ಲಿ ಧರ್ಮಸಭೆ ನಡೆಯಲಿದೆ.

‘ನೈಸ್’ ತಂದೆ ಮಕ್ಕಳ ವೃಥಾ ಆರೋಪ: ಯಡಿಯೂರಪ್ಪ

ಮಂಗಳೂರು, ಮಾ.೨೦: ನೈಸ್ ಬಗ್ಗೆ ಈಗಾಗಲೆ ಸಾಕಷ್ಟು ಚರ್ಚೆಯಾಗಿದೆ. ಈ ಬಗ್ಗೆ ತಂದೆ ಮಕ್ಕಳನ್ನು ಮಾತುಕತೆಗೆ ಆಹ್ವಾನಿಸಲಾಗಿದ್ದರೂ ಅವರು ಮಾತು ಕತೆಗೆ ಬಂದಿಲ್ಲ. ಆದರೆ ತಂದೆ ಮಕ್ಕಳು ವೃಥಾ ಆರೋಪವನ್ನು ಮಾತ್ರ ಮುಂದು ವರಿಸಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ಕಲ್ಲಡ್ಕದಲ್ಲಿ ಶ್ರೀರಾಮ ಯಜ್ಞದಲ್ಲಿ ಭಾಗವಹಿಸುವ ಸಲುವಾಗಿ ಇಂದು ಸಂಜೆ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭ ನೈಸ್ ಬಗ್ಗೆ ದೇವೇಗೌಡರು ತಮ್ಮನ್ನು ವಚನ ಭ್ರಷ್ಟರು ಎಂದು ಟೀಕಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಯಡಿಯೂರಪ್ಪ ಉತ್ತರಿಸಿದರು.

ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುವುದು ಎಂದು ಅವರು ಹೇಳಿದರು.

ಬಜ್ಪೆ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮೇಯರ್ ರಜನಿ ದುಗ್ಗಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ ಪಾಲೆಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಶಾಸಕ ಯೋಗೀಶ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಬ್ರಹ್ಮಣ್ಯೇಶ್ವರ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ್ ಶರ್ಮಾ ಮೊದಲಾದವರು ಸ್ವಾಗತಿಸಿದರು.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-21 00:00:00

Tell a Friend
ಇತರ ಸಂಭಂದಪಟ್ಟ ವರದಿಗಳು
»ಮಂಗಳೂರು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಅದ್ದೂರಿ ಸ್ವಾಗತ.

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಕರಾವಳಿ]

»ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಮಂತ್ರಿಗಳನ್ನು ಹಾಗೂ ಮಲ್ಪೆಯಲ್ಲಿ ರೇವು ಪಾರ್ಟಿಗೆ ಕಾರಣಕರ್ತರಾದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಜಮಾತೆ ಇಸ್ಲಾಮಿ ಹಿಂದ್ ಸಂಘಟನೆ ಪ್ರತಿಭಟನೆ
»ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
»ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
»ರೇವ್ ಪಾರ್ಟಿ, ಅಶ್ಲೀಲ ಬ್ಲೂಫಿಲಂ ಪ್ರಕರಣ : ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ
»ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
»ಬಿಸಿಯೂಟ: 30ಕ್ಕೂ ಅಧಿಕ ಮಕ್ಕಳು ಅಸ್ವಸ್ಥ
»‘ಬಡಗುತಿಟ್ಟು ಯಕ್ಷಗಾನದ ಮುಂದಿನ ನಡೆಗಳು’ ಕಾರ್ಯಾಗಾರ
»ಕಾರ್ಮಿಕ ಸೇವಾ ಸೌಲಭ್ಯ ಕೇಂದ್ರದ ಲಾಂಛನ ಬಿಡುಗಡೆ
»ಯಡಿಯೂರಪ್ಪತಂಡದ ಧರ್ಮಯಾತ್ರೆ
»ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ಮುಂದುವರಿದ ಪ್ರತಿಭಟನೆ; ‘ಸಿಕ್ಕಿಬಿದ್ದವರ’ ಶಾಸಕತ್ವ ರದ್ದುಗೊಳಿಸಲು ಕಾಂಗ್ರೆಸ್ ಆಗ್ರಹ
»ಭಟ್ಕಳ: ಒಂದು ಲಕ್ಷಕ್ಕೂ ಅಧಿಕ ವೌಲ್ಯದ ಅಕ್ರಮ ಸಾರಾಯಿ ನಾಶ
»ಭಟ್ಕಳ: ಗುಲ್ಮಿ ಕ್ರಾಸ್ ಬಳಿ ರಸ್ತೆ ಅಪಘಾತ; ಇಬ್ಬರು ಗಂಭೀರ
»ಸದನದಲ್ಲಿ ನೀಲಿಚಿತ್ರ ವೀಕ್ಷಣೆ : ಬಿಜೆಪಿಗೆ ಮುಜುಗರವಿಲ್ಲ: ಯಡಿಯೂರಪ್ಪ
»ವಿದ್ಯಾರ್ಥಿಗಳು ಸಾಂಸ್ಕೃತಿಕವಾಗಿ ಬೆಳೆದಾಗ ಮಾತ್ರ ಸಮಾಜದಲ್ಲಿ ಪ್ರಗತಿ ಪಡೆಯಲು ಸಾಧ್ಯ
»ಫೆ.12ರಿಂದ ಆಕಾಶವಾಣಿ ಹಬ್ಬ : ಅವಿಭಜಿತ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ವೈಭವ
»ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: ನೈತಿಕತೆ ಇದ್ದಲ್ಲಿ ಪಕ್ಷದಿಂದ ತೆಗೆದುಹಾಕಿ: ಗಡ್ಕರಿಗೆ ಪೂಜಾರಿ ಸವಾಲು
»ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
»ಫೆ.11 : ಕಾಂಗ್ರೆಸ್ ಭವನದಲ್ಲಿ ಯುಪಿ‌ಎ ಸರ್ಕಾರದ ಯೋಜನೆಯ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ : ಸಿ.ಎಂ. ಧನಂಜಯ
»ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
»ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
»ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: ರಾಜ್ಯ ತಲೆ ತಗ್ಗಿಸುವ ಘಟನೆ: ಗೋಪಾಲ ಭಂಡಾರಿ
»‘ಭಾರತ್ ಬೀಡಿ’ಯ ಸಂಸ್ಥಾಪಕರ ದಿನಾಚರಣೆ
»ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್
»ಬ್ಲೂಫಿಲಂ ಪ್ರಕರಣ: ಕಾಂಗ್ರೆಸ್‌ನಿಂದ ವಿಧಾನಸಭೆ ಶುಚಿತ್ವ!
»ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
»ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ವಿಕಲಚೇತನರ ಕುಟುಂಬಗಳಿಗೆ ಚೈತನ್ಯ ತುಂಬಿದ ಖಾಝಿ ಭೇಟಿ
»ಫೆ.10: ಕೋಮುದೌರ್ಜನ್ಯ ಖಂಡಿಸಿ ಪ್ರತಿಭಟನೆ
»ಸಿಸಿಬಿ ಪೊಲೀಸರಿಂದ ಗುಲಾಂ ಮುಹಮ್ಮದ್ ವಿಚಾರಣೆ: ಬಿಡುಗಡೆ
»13ರಂದು ರಫ್ತುದಾರರ ಸಮಾವೇಶ: ವೀರಪ್ಪ ಮೊಯ್ಲಿ
»ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
»ಕಾಸರಗೋಡಿನಲ್ಲಿ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ; 200ಮಂದಿಯ ವಿರುದ್ಧ ಪ್ರಕರಣ ದಾಖಲು
»ಸದನದಲ್ಲಿ ಸಚಿವರ ಸೆಕ್ಸ್ ಫಿಲಂ ವೀಕ್ಷಣೆಯ ರದ್ದಾಂತ : ಉಡುಪಿಯಲ್ಲಿ ಎಸ್.ಡಿ.ಪಿ.ಐ ಪ್ರತಿಭಟನೆ
»ಫೆ.10 ರಿಂದ ರಾಷ್ಟ್ರೀಯ ಮಟ್ಟದ ಮ್ಯಾನೇಜ್‌ಮೆಂಟ್ ಉತ್ಸವ
»ಫೆ.25ರಂದು ಭಾರತೀಯ ಮಜ್ದೂರ್ ಸಂಘದ 18ನೇ ತ್ರೈವಾರ್ಷಿಕ ಪ್ರದೇಶ ಅಧಿವೇಶನ
»ಯುಪಿಸಿ‌ಎಲ್ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲು ಸಿದ್ದ : ಪತ್ರಿಕಾಗೋಷ್ಠಿಯಲ್ಲಿ ಜಯಶ್ರೀ ಕೃಷ್ಣ ಶೆಟ್ಟಿ
»ಹೋಟೆಲ್ ಕಿದಿಯೂರಿನ ರಜತ ಸಂಭ್ರಮ : ಪೇಜಾವರ ಶ್ರೀಗಳಿಗೆ ತುಲಾಭಾರ
»ತಣ್ಣೀರುಪಂಥದ ಖತೀಜಮ್ಮ ಕೊಲೆ ಪ್ರಕರಣ: ಮೂವರ ಬಂಧನ
»ಏತಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಆರಂಭೋತ್ಸವ
»ರೇವ್ ಪಾರ್ಟಿ ಕುರಿತು ಗ್ರಾ.ಪಂ.ಗೆ ಗೊತ್ತೇ ಇಲ್ಲ! ಇನ್ನೊಂದು ವಿವಾದದತ್ತ ಜಿಲ್ಲಾಡಳಿತ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ: ರಾಜ್ಯಾದ್ಯಂತ ಪ್ರತಿಭಟನೆ
»ಸದನದಲ್ಲಿ ಸಚಿವತ್ರಯರ ‘ಕಾಮಹರಣ’ : ರಾಜ್ಯದಾದ್ಯಂತ ಆಕ್ರೋಶ : ಉಡುಪಿಯಲ್ಲಿ ನಾಗರೀಕರ ಸಮಿತಿಯ ವಿಶಿಷ್ಟ ಪ್ರತಿಭಟನೆ
»ಶ್ರೀ ಅಶೋಕ್ ಸಿಂಘಾಲ್ ಅವರಿಗೆ ಗೌರವಪೂರ್ವಕ ಸ್ವಾಗತ
»ಮಂಗಳೂರು: ಕ್ರೈಸ್ತ ಸಂಘಟನೆ ಮೇಲೆ ತೆರಿಗೆ ವಂಚನೆ ಆರೋಪ
»ವಿಧಾನಸಭೆಯಲ್ಲಿ ಸಚಿವರಿಂದ ಬ್ಲೂಫಿಲಂ ವೀಕ್ಷಣೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
»ರೇವ್ ಪಾರ್ಟಿ: ಗ್ರಾಪಂಗೆ ಮಾಹಿತಿಯೇ ಇಲ್ಲ!...
»ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ: ಎರಡು ದಿನಗಳಿಂದ ಹೊಗೆಯಲ್ಲಿ ದಿನಗಳೆದ ಸ್ಥಳೀಯರು
»ಮಂಗಳೂರು: ಗೋದ್ರೆಜ್ ಅಲ್‌ಪೈನ್‌ಗೆ ಚಾಲನೆ
»ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಪ್ರತಿಭಟನೆ
»ಉಳ್ಳಾಲ ಪುರಸಭೆಗೆ ಸ್ಪೆಷಲ್ ರೆಕೊಗ್ನಿಷನ್ ಅವಾರ್ಡ್-2012

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri