ಮಂಗಳೂರು: ಮಾರ್ಚ್ 24 ರಂದು ’ವಿಶ್ವ ಕ್ಷಯರೋಗ ದಿನ - 2010' ಆಚರಣೆ. |
ಪ್ರಕಟಿಸಿದ ದಿನಾಂಕ : 2010-03-20
ಮಂಗಳೂರು, ಮಾ. 20: "ವಿಶ್ವ ಕ್ಷಯರೋಗ ದಿನ -೨೦೧೦" ಕಾರ್ಯಕ್ರಮವನ್ನು ಮಾ.24 ರಂದು ಬೆ.10.30ಕ್ಕೆ ಇನ್ಫೊಸಿಸ್ ಅತ್ಯಾಧುನಿಕ ಮಕ್ಕಳ ಆರೋಗ್ಯ ರಕ್ಷಣಾ ಕೇಂದ್ರ ವೆನ್ ಲಾಕ್ ಆಸ್ಪತ್ರೆ ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿವಾರಣಾ ಸಂಘ, ದ.ಕ. ವೆನ್ ಲಾಕ್ ಆಸ್ಪತ್ರೆ, ಮಂಗಳೂರು ಮತ್ತು ರೋಟರ್‍ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಇವರ ಸಂಯುಕ್ತಾಶ್ರಯದಲಿ ಹಮ್ಮಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಶಾಸಕ ಶ್ರೀ ಎನ್. ಯೋಗೀಶ್ ಭಟ್ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಶ್ರೀ ಸಂತೋಷ್ ಕುಮಾರ್ ಭಂಡಾರಿ, ಉಪಾಧ್ಯಕ್ಷ ಶ್ರೀ ಜಗನ್ನಾಥ್ ಸಾಲಿಯಾನ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗಡೆ, ರೋಟರಿ ಅಧ್ಯಕ್ಷ ಡಾ. ಬಿ.ದೇವದಾಸ್ ರೈ ಅವರು ಪಾಲ್ಗೊಳ್ಳುವರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-20
|
|
|