ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ’ತ್ವಾಖಾ ಅಹ್ಮದ್ ಮುಸ್ಲಿಯಾರ್’ ಅಧಿಕಾರ ಸ್ವೀಕಾರ. |
ಪ್ರಕಟಿಸಿದ ದಿನಾಂಕ : 2010-03-20
(ವಿಶೇಷ ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್)
ಮಂಗಳೂರು,ಮಾ.20 : ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿಯವರಾಗಿ ನೇಮಕಗೊಂಡ "ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್" ಅವರ ಅಧಿಕಾರ ಸ್ವೀಕಾರ ಸಮಾರಂಭವು ನಗರದಲ್ಲಿಂದು ಜರಗಿತು.
ಕಾಸರಗೋಡು ಜಿಲ್ಲೆಯ ಸನ್ಮಾನ್ಯ ಸಂಯುಕ್ತ ಖಾಝಿ, ಅಲ್‌ಹಾಜ್ ಟಿ.ಕೆ.ಎಂ. ಬಾವಾ ಮುಸ್ಲಿಯಾರ್ ಇವರ ಅಧ್ಯಕ್ಷತೆಯಲ್ಲಿ ನಗರದ ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಇಂದು ನಡೆದ ವಿಶೇಷ ಸಮಾರಂಭದಲ್ಲಿ ಪಟ್ಟಿಕ್ಕಾಡ್ ಜಾಮಿಯಾ ನೂರಿಯಾ ಇಲ್ಲಿನ ಖಾಝಿ ಮತ್ತು ಅಧ್ಯಕ್ಷರಾದ ಅಲ್‌ಹಾಜ್ ಸಯ್ಯಿದ್ ಹೈದರಲಿ ಶಿಹಾಬ್ ತಂಜ್ನಳ್ ಪಾಣಕ್ಕಾಡ್ ಇವರು ಅಲ್‌ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್‌ರವರಿಗೆ ಗೌರವಾನ್ವಿತ ಅತಿಥಿಗಳ ಸಮಕ್ಷಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಖಾಝಿ ಪಟ್ಟ ನೀಡಿದರು.
ಅಧಿಕಾರ ಸ್ವೀಕಾರಿಸಿದ ಬಳಿಕ ಖಾಝಿಯವರ ಸಂದೇಶ:
ಭಾರತ ದೇಶ ಜ್ಯಾತತೀತ ರಾಷ್ಟ್ರ, ಇಲ್ಲಿ ಎಲ್ಲರೂ ಜ್ಯಾತತೀತ ಸಿದ್ದಾಂತವನ್ನು ಪಾಲಿಸಬೇಕು. ಸುಮಾರು 900 ವರುಷಗಳ ಹಿಂದೆ ಧರ್ಮ ಪ್ರಚಾರಕ್ಕಾಗಿ ವಿದೇಶದಿಂದ ಭಾರತದ ಕೇರಳ ರಾಜ್ಯಕ್ಕೆ ಬಂದ ಮಾಲಿಕ್-ಉದ್-ದಿನಾರ್ ಅವರು ಜ್ಯಾತಾತೀತ ಸಿದ್ದಾಂತವನ್ನು ಪಾಲಿಸುವಂತೆ ಬೋಧಿಸಿದ್ದಾರೆ. ಅನಂತರ ಬಂದ ಧರ್ಮ ಪ್ರಚಾರಕರು ಕೂಡ ಈ ಸಿದ್ದಾಂತವನ್ನೇ ಪಾಲಿಸುವಂತೆ ತಿಳಿಸಿದ್ದಾರೆ. ಹಾಗಾಗಿ ನಾವು ಕೂಡ ಜ್ಯಾತತೀತ ಸಿದ್ದಾಂತಕ್ಕೆ ಅಡ್ಡಿಯಾಗದಂತೇ ಎಲ್ಲರೂ ಸೌರ್ಹದತೆಯಿಂದ ದೇಶದ ಹಾಗೂ ಜಿಲ್ಲೆಯ ಸರ್ಮತ್ತೋಮುಖ ಅಭಿವ್ರದ್ಧಿಗಾಗಿ ಶ್ರಮಿಸಬೇಕು ಎಂದು ದ.ಕ ಜಿಲ್ಲಾ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಈ ಸಂಧರ್ಭದಲ್ಲಿ ಕರೆ ನೀಡಿದರು.
ಅಲ್ಹಾಜ್ ಕೆ.ಪಿ.ಅಬ್ದುಲ್ ಜಬ್ಬಾರ್ ಮುಸ್ಲಿಯಾರ್(ಸಮಸ್ತ ಮುಶಾವರ ಸದಸ್ಯರು), ಅಲ್ಹಾಜ್ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ( ಸಂಯುಕ್ತ ಖಾಝಿ, ಉಡುಪಿ), ಅಲ್ಹಾಜ್ ಸಯ್ಯಿದ್ ಎನ್.ಪಿ.ಎಂ.ಝೈನುಲ್ ಆಬಿದೀನ್ ತಂಜ್ನಳ್, (ಮೂಡಿಗೆರೆ ಖಾಝಿ), ಅಲ್ಹಾಜ್ ವಿ.ಕೆ ಅಬೂಬಕರ್ ಮುಸ್ಲಿಯಾರ್, (ಅತ್ರಾಡಿ ಖಾಝಿ), ಅಲ್ಹಾಜ್ ಇಬ್ರಾಹಿಂ ದಾರಿಮಿ,(ಖತೀಬರು ಕೇಂದ್ರ ಜುಮಾ ಮಸೀದಿ,ಮಂಗಳೂರು ), ಮೌಲಾನಾ ಅಬ್ದುಲ್ ಖಾದಿರ್ ಸಾಹೇಬ್,(ಖತೀಬರು ಶಾಮೀರ್ ಜುಮಾ ಮಸ್ಜಿದ್,ಡೊಂಗ್ರಕೇರಿ),ಅಲ್ಹಾಜ್ ಅಬ್ದುಲ್ ಖಾದರ್ ಮುಸ್ಲಿಯಾರ್(ಮದರ್ರಿಸ್,ಬಂಬ್ರಾಣ) , ಬಿ.ಅಹ್ಮದ್ ಹಾಜಿ ಮೊಯಿದಿನ್(ಅಧ್ಯಕ್ಷರು, ಸೀರತ್ ಕಮಿಟಿ ಮಂಗಳೂರು, ದ.ಕ), ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್(ಅಧ್ಯಕ್ಷರು,ಮುಸ್ಲಿಂ ಸೆಂಟ್ರಲ್ ಕಮಿಟಿ, ದ.ಕ ಉಡುಪಿ), ಅಲ್ಹಾಜ್ ವೈ ಮುಹಮ್ಮದ್ ಕುಂಜ್ನಿ(ವಕ್ಫ್ ಚೇರ್‍ಮೇನ್, ದ.ಕ ಜಿಲ್ಲೆ), ಜ|ಯು.ಟಿ.ಖಾದರ್(ಶಾಸಕರು ಮಂಗಳೂರು), ಅಲ್ಹಾಜ್ ಸಿ.ಎ.ಮುಹಮ್ಮದ್ ಶಾಫಿ, ಚೆಂಬರಿಕ(ಇಬ್ನ್ ಸಿ.ಎಂ.ಅಬ್ದುಲ್ಲಾಃ ಮುಸ್ಲಿಯಾರ್ ಖಾಝಿ), ಜ| ಕೆ.ಅಶ್ರಫ್ (ಮಾಜಿ ಮೆಯರ್ ಮಂಗಳೂರು) ಮುಂತಾದವರು ಗೌರವಾನ್ವಿತ ಅಥಿತಿಗಳಾಗಿದ್ದರು.
ಮಂಗಳೂರಿನ ಮಸ್ಜಿದ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಅಲ್ಹಾಜ್ ವೈ ಅಬ್ದುಲ್ಲಾ ಕುಂಜ್ನಿ ಸ್ವಾಗತಿಸಿದರು. ಮುಹಮ್ಮದ್ ಹನೀಫ್ ಕಾರ್ಯಕ್ರಮ ನಿರೂಪಿಸಿದರು.
ನೂತನ ಅರಬೀಕ್ ಕಾಲೇಜು ಕಟ್ಟಡಕ್ಕೆ ಶಿಲಾನ್ಯಾಸ:
ಮಂಗಳೂರಿನ ಝೀನತ್ ಬಕ್ಸ್ ಕೇಂದ್ರ ಜುಮಾ ಮಸೀದಿ ಇದರ ವತಿಯಿಂದ ನೂತನವಾಗಿ ನಿರ್ಮಿಸಲಾಗುತ್ತಿರುವ ಹಿಫ್‍ಲುಲ್ ಬುರ್‌ಆನ್ ಹಾಗೂ ಅಫ್‍ಲಲುಲ್ ಉಲೂಂ ಅರಬಿಕ್ ಕಾಲೇಜಿನ ಶಂಕುಸ್ಥಾಪನಾ ಸಮಾರಂಭವು ಇಂದು ನಡೆಯಿತು.
ಪಟ್ಟಿಕ್ಕಾಡ್ ಜಾಮಿಯಾ ನೂರಿಯಾ ಇಲ್ಲಿನ ಖಾಝಿ ಮತ್ತು ಅಧ್ಯಕ್ಷರಾದ ಅಲ್‌ಹಾಜ್ ಸಯ್ಯಿದ್ ಹೈದರಲಿ ಶಿಹಾಬ್ ತಂಜ್ನಳ್ ಪಾಣಕ್ಕಾಡ್ ಅವರು ಶಿಲಾನ್ಯಾಸ ನೇರವೇರಿಸಿದರು. ದ.ಕ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಅರ್ಶೀವಚನ ಗೈದರು.
ಮಂಗಳೂರಿನ ಮಸ್ಜಿದ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಅಲ್ಹಾಜ್ ವೈ ಅಬ್ದುಲ್ಲಾ ಕುಂಜ್ನಿ , ಕೋಶಾಧಿಕಾರಿ ಎಸ್.ಎಂ.ಅಬ್ದುರ್ರಶೀದ್, ಟ್ರಸ್ಟಿಗಳಾದ ಮುಹಮ್ಮದ್ ಹನೀಫ್, ಹಾಜಿ ಅಹ್ಮದ್ ಭಾಷಾ ತಂಜ್ನಳ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|