ಕ್ರೈಸ್ತ ಧರ್ಮ ಗುರುಗಳು ಕಾಂಗ್ರೆಸ್ ಕಾರ್ಯಕರ್ತರಾಗುವುದು ಬೇಡ |
ಪ್ರಕಟಿಸಿದ ದಿನಾಂಕ : 2010-03-20
ಮಂಗಳೂರು: ಕಂಕನಾಡಿ ವೆಲೆನ್ಸಿಯಾದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಆಗ್ರಹಿಸಿ ಕಳೆದ ವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕ್ರೈಸ್ತ ಧರ್ಮಗುರುಗಳು ಹಾಗೂ ಭಗಿನಿಯರು ಭಾಗವಹಿಸಿದ್ದಕ್ಕೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಆಕ್ಷೇಪ ವ್ಯಕ್ತಪಡಿಸಿದ್ದು, ಕ್ರೈಸ್ತ ಧರ್ಮಗುರುಗಳು ಕಾಂಗ್ರೆಸ್ ಕಾರ್ಯಕರ್ತರಾಗುವದು ಬೇಡ ಎಂದು ಲೇವಡಿ ಮಾಡಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾ ಅಲ್ಪ ಸಂಖ್ಯಾತ ಮೋರ್ಚಾದ ಸಂಚಾಲಕ ಫ್ರಾಂಕ್ಲಿನ್ ಮೊಂತೆರೊ ಓರ್ವ ವ್ಯಕ್ತಿಯ ಸ್ವ ಹಿತಾಸಕ್ತಿಗಾಗಿ ಸಮಾಜವನ್ನು ಬಲಿಕೊಟ್ಟು ತಪ್ಪು ಸಂದೇಶ ನೀಡುವಂತಹ ಕಾರ್ಯಕ್ರಮದಲ್ಲಿ ಧರ್ಮಗುರುಗಳು ಭಾಗವಹಿಸಿ 2008ಸೆ14ಘಟನೆ ಮರುಕಳಿಸಲು ಆಸ್ಪದ ನೀಡಬೇಡಿ ಎಂದು ಎಚ್ಚರಿಸಿದ್ದಾರೆ.
ರಸ್ತೆಗೆ ಕಾಂಕ್ರಿಟ್ ಹಾಕುವ ಕಾಮಗಾರಿ ವಿಳಂಬವಾಗಲು ಸ್ಥಳೀಯ ನಿವಾಸಿಗಳು ಕಾರಣವೇ ಹೊರತು ಮಹಾನಗರ ಪಾಲಿಕೆಯಲ್ಲ. ಒಂದು ವೇಳೆ ಕಾಂಕ್ರೀಟ್ ಕಾಮಗಾರಿಯ ವಿಳಂಬದಿಂದ ಕ್ರೈಸ್ತರಿಗೆ ತೊಂದರೆಯಾಗುತ್ತಿದ್ದರೆ ಪ್ರತ್ಯೇಕವಾಗಿಯೇ ಅಹವಾಲು ಸಲ್ಲಿಸಲು ಅವಕಾಶ ಇರುವಾ ಗ, ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇಕೆ ಎಂದು ಪ್ರಶ್ನಿಸಿರುವ ಮೊಂತೆ ರೊ, ಇದು ಮರುಕಳಿಸಿದ್ದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಸೂಕ್ತ ಉತ್ತರ ನೀಡುತ್ತದೆ ಎಂದು ಎಚ್ಚರಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|