ನವದೆಹಲಿ: ವಿಮಾನ ಅಪಹರಣ ನಿಗ್ರಹ ಕಾನೂನು ಮತಷ್ಟು ಕಠಿನಗೊಳಿಸಿದ ಸರಕಾರ |
ಪ್ರಕಟಿಸಿದ ದಿನಾಂಕ : 2010-03-20
ಹೊಸದಿಲ್ಲಿ,ಮಾ.೧೯: ವಿಮಾನ ಅಪಹರಣಕಾರರಿಗೆ ಮರಣದಂಡನೆ ಹಾಗೂ ಪ್ರಮುಖ ಸ್ಥಾವ ರಗಳ ಮೇಲೆ ದಾಳಿ ನಡೆಸಲು ಕ್ಷಿಪಣಿಯಾಗಿ ಬಳಸಲ್ಪಡುವ ಅಪಹೃತ ವಿಮಾನವನ್ನು ಹೊಡೆದು ರುಳಿಸುವ ಅಧಿಕಾರ ಸೇರಿದಂತೆ ಕೆಲವೊಂದು ತಿದ್ದುಪಡಿಗಳನ್ನು ತರುವ ಮೂಲಕ ವಿಮಾನ ಅಪಹರಣ ನಿಗ್ರಹ ಕಾನೂನನ್ನು ಮತ್ತಷ್ಟು ಕಠಿನಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಈ ಬದಲಾವಣೆಗಳನ್ನು ಒಳಗೊಂಡ ೧೯೮೨ರ ವಿಮಾನ ಅಪಹರಣ ನಿಗ್ರಹ ತಿದ್ದುಪಡಿ ಕಾಯ್ದೆಗೆ ಶುಕ್ರವಾರ ಪ್ರಧಾನಿ ಮನಮೋಹನ್‌ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ತನ್ನ ಸಮ್ಮತಿ ನೀಡಿದೆ.
ತಿದ್ದುಪಡಿಗೊಂಡಿರುವ ನೂತನ ಕಾಯ್ದೆಯು, ೨೦೦೧ರ ಸೆಪ್ಟಂಬರ್ ೧೧ ರಂದು ನ್ಯೂಯಾರ್ಕ್ ನಲ್ಲಿ ನಡೆಸಿದ ಭಯೋತ್ಪಾದಕ ದಾಳಿ ಮಾದರಿಯಲ್ಲಿ ಪ್ರಮುಖ ಸ್ಥಾವರಗಳ ಮೇಲೆ ಅಪಹೃತ ವಿಮಾನವನ್ನು ಕ್ಷಿಪಣಿಯಾಗಿ ಬಳಸಿ ದಾಳಿ ನಡೆಸದಂತೆ ತಡೆಯಲು ಅಂಥ ವಿಮಾನಗಳನ್ನು ಹೊಡೆದುರುಳಿಸಲು ಅವಕಾಶ ಮಾಡಿಕೊಟ್ಟಿದೆ.
ಭಾರತೀಯ ನೆಲದಲ್ಲಿ ವಿಮಾನ ಅಪಹರಣ ನಡೆದಲ್ಲಿ ವಿಮಾನದ ಆರೋಹಣಕ್ಕೆ ಅವಕಾಶ ನೀಡ ದಿರುವುದು ಹಾಗೂ ವಿಮಾನ ನಿಷ್ಕ್ರಿಯಗೊಳಿಸುವುದಕ್ಕೆ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾ ಗಿದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|