ಭವ್ಯ ಮೆರವಣಿಗೆಯೊ೦ದಿಗೆ ಇ೦ದು ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನೆ: ಸಾಹಿತ್ಯದಿಂದ ಬೆಳೆಯಬೇಕಾದುದು ದ್ವೇಷವಲ್ಲ, ಪ್ರೀತಿ, ಮಾನಯತೆ : ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಉಪಾಧ್ಯಾಯ |
ಪ್ರಕಟಿಸಿದ ದಿನಾಂಕ : 2010-03-20
ಭವ್ಯ ಮೆರವಭಿಗೆಯೊ೦ದಿಗೆ ಇ೦ದು (ಶನಿವಾರ) ಬೆಳಗ್ಗೆ ಉಡುಪಿ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೊ೦ಡಿದೆ. ಲಯನ್ಸ್ ಸರ್ಕಲ್ ಬಳಿಯಿಂದ ಶೋಭಾಯಾತ್ರೆ ಪ್ರಾರ೦ಭವಾಗಿದೆ. ಈ ಎರಡು ದಿನಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ.


ಉಡುಪಿ, ಮಾ.೨೦: ಸಾಹಿತ್ಯ ಬೆಳೆಸಬೇಕಾಗಿರುವುದು ಪ್ರೀತಿ ಮತ್ತು ಮಾನಯತೆಯನ್ನು. ನಮಗೆ ಬೇಕಾಗಿರುವುದು ಮಾನವತಾವಾದ ಹಾಗೂ ಪ್ರೇಮವಾದ. ಬೇರೆ ಯಾವುದೇ ಇಸಂಗಳು, ವಾದ ಗಳು ನಮಗೆ ಬೇಕಾಗಿಲ್ಲ ಎಂದು ಉಡುಪಿಯ ಬಹುಭಾಷಾ ವಿದ್ವಾಂಸ, ಲೇಖಕ ಡಾ.ಯು.ಪಿ. ಉಪಾಧ್ಯಾಯ ಹೇಳಿದ್ದಾರೆ.
ಅಂಬಲಪಾಡಿಯ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ನಿ.ಬೀ.ಅಣ್ಣಾಜಿ ಬಲ್ಲಾಳ ವೇದಿಕೆ ಯಲ್ಲಿ ನಡೆದಿರುವ ಉಡುಪಿ ಜಿಲ್ಲಾ ಆರನೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಉತ್ತಮ ಸಾಹಿತ್ಯದಿಂದ ಶೋಷಣೆ ಮಾಡುವವರಲ್ಲಿ ಮಾನಯತೆ ಬೆಳೆಯುವಂತೆ ಮಾಡಬೇಕು ಎಂದು ಹೇಳಿದ ಅವರು, ಪ್ರಪಂಚದ ಮಹಾನ್ ಕೃತಿಗಳಲ್ಲಿ ಶೋಷಣೆಯ ಚಿತ್ರಣವಿದ್ದರೂ, ಹೊಂದಾಣಿಕೆಯೂ ಇದೆ. ರಾಮಾಯಣ ದಲ್ಲೂ ಮಹಿಳಾ ಶೋಷಣೆ ಇದ್ದರೂ, ಸೀತೆ ಎಲ್ಲೂ ನೇರವಾಗಿ ಘರ್ಷಣೆಗಿಳಿಯಲಿಲ್ಲ ಎಂದವರು ನುಡಿದರು.


ಸಾಹಿತ್ಯದ ಉದ್ದೇಶದ ಸಮಾಜಕ್ಕೆ ಸಚ್ಚಾರಿತ್ರದ ಪಾಠ ಕಲಿಸುವುದಾದರೆ ಅದಕ್ಕಿಂತ ಶ್ರೇಷ್ಠ ವಾದ ಪ್ರಯೋಜನ ಇನ್ನೊಂದಿಲ್ಲ. ಘರ್ಷಣೆಯ ಸಾಹಿತ್ಯ ಬಹುಕಾಲ ಬಾಳುವುದಿಲ್ಲ. ಸಾಹಿತ್ಯದಲ್ಲಿ ರುವುದು ಎರಡೇ ವಿಧ. ಒಂದು ಉತ್ತಮ ಸಾಹಿತ್ಯ, ಇನ್ನೊಂದು ಕೆಟ್ಟ ಸಾಹಿತ್ಯ. ಪ್ರೀತಿ-ವಿಶ್ವಾಸಗಳನ್ನು ಬೆಳೆಸುವ ಸಾಹಿತ್ಯ ಸಮಾಜವನ್ನು ಒಂದುಗೂಡಿಸಿ ಬಹುಕಾಲ ಬಾಳುತ್ತದೆ ಎಂಬುದನ್ನು ನಾವು ವಿಶ್ವದ ಸಾಹಿತ್ಯ ಚರಿತ್ರೆಯಿಂದ ಕಾಣಬ ಹುದು. ದ್ವೇಷವನ್ನು ಬೆಳೆಸುವ ಸಾಹಿತ್ಯ ಬೇಗ ನಶಿಸಿಹೋಗುತ್ತದೆ ಎಂದರು.
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಬಂದಿದೆ. ಈ ಸಂದರ್ಭದಲ್ಲಿ ನಾವು ಈ ಭಾಷೆಯ ಚಾರಿತ್ರಿಕ ಬೆಳವಣಿಗೆಯ ಬಗ್ಗೆ ಯಾವ ರೀತಿ ಕಾರ್ಯಪ್ರವೃತ್ತರಾಗಬೇಕು, ಯಾವ ರೀತಿ ಈ ಭಾಷೆಯ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಕುರಿತು ಭಾಷಾ ವಿದ್ವಾಂಸರೂ, ಸೃಜನಶೀಲ ಲೇಖಕರೂ ಚರ್ಚಿಸಿ ಕಾರ್ಯಕ್ರಮ ರೂಪಿಸಬೇಕು ಎಂದವರು ಸಲಹೆ ನೀಡಿದರು.


ಇದರೊಂದಿಗೆ ಕರ್ನಾಟಕದ ಅಲ್ಪಸಂಖ್ಯಾತ ಭಾಷೆಗಳಾದ ತುಳು,ಕೊಂಕಣಿ, ಕೊಡವ, ಮರಾಠಿ, ಬ್ಯಾರಿ, ಮಲಯಾಳ- ಸೇರಿಸಿಕೊಂಡು ಎಲ್ಲರ ಸಹಕಾರ ಸೌಹಾರ್ದದಿಂದ ನಮ್ಮ ಯೋಜನೆಗಳ ನ್ನು, ಯೋಚನೆಗಳನ್ನು ರೂಪಿಸಿಕೊಳ್ಳಬೇಕು ಎಂದವರು ನುಡಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ `ಕನ್ನಡ ಸಾಹಿತ್ಯ ಚರಿತ್ರೆ' ಎಂಬ ಗ್ರಂಥದ ರಚನೆಯಾಗ ಬೇಕಾಗಿದೆ. ಅದೇ ರೀತಿ ತುಳುವಿನಲ್ಲಿ ಕೆಲವು ಉತ್ತಮ ಕತೆ,ಕಾದಂಬರಿ, ಕಾವ್ಯವನ್ನು ಕನ್ನಡಕ್ಕೆ ಅನುವಾದಿಸಬೇಕು. ಕನ್ನಡದಿಂದ ತುಳು, ಕೊಂಕಣಿ, ಬ್ಯಾರಿ ಭಾಷೆಗಳಿಗೆ ಅನುವಾದಿಸಬೇಕು. ಅವುಗಳಿಂದ ಕನ್ನಡಕ್ಕೆ ಅನುವಾದಗಳು ಬರಬೇಕಾಗಿದೆ. ಇದರಿಂದ ಸಾಹಿತ್ಯ ಹಾಗೂ ಭಾಷೆ ಬೆಳೆಯಲು ಸಾಧ್ಯ ಎಂದು ಡಾ.ಉಪಾಧ್ಯಾಯ ಹೇಳಿದರು.

`ಸಾಹಿತಿಗಳ ಆಶ್ರಮ ಸ್ಥಾಪಿಸಿ'
ಕರಾವಳಿ ಜಿಲ್ಲೆಗಳಲ್ಲಿ ಸಾಹಿತಿಗಳ ಆಶ್ರಮಗಳನ್ನು ಸ್ಥಾಪಿಸಬೇಕು ಎಂದು ಸಮ್ಮೇಳನಾಧ್ಯಕ್ಷ ಡಾ.ಯು.ಪಿ. ಉಪಾಧ್ಯಾಯ ಸಲಹೆ ನೀಡಿದರು. ಅಲ್ಲಿ ಎಲ್ಲ ಹಿನ್ನೆಲೆ ಗಳಿಂದ ಬಂದ ಲೇಖಕರು ಕುಳಿತು ತಮ್ಮ ಮೇರುಕೃತಿ ಗಳನ್ನು ರಚಿಸಬೇಕು. ಪರಸ್ಪರ ಹೊಂದಾಣಿಕೆಯಿಂದ ಸಾಹಿತ್ಯ ರಚಿಸಿದಾಗ ನಮ್ಮಿಂದ ಇನ್ನಷ್ಟು ಉತ್ತಮ ಸಾಹಿತ್ಯ ಬೆಳೆಯಲು ಸಾಧ್ಯ ಎಂದರು.
ಮೈಸೂರಿನಲ್ಲಿರುವ ಧ್ವನ್ಯಾಲೋಕದಂಥ ಸಾಹಿತಿಗಳ ಕೂಟ ಕೇಂದ್ರವೊಂದು ನಮ್ಮಲ್ಲಿರಬೇಕು. ನಮ್ಮ ಜಿಲ್ಲೆಯ ಪ್ರಕೃತಿ ರಮಣೀಯವಾದ ಸ್ಥಳಗಳಲ್ಲಿ ಬರಹಗಾರರ ಕ್ಯಾಂಪ್ ಮಾಡುವ ಅವ ಕಾಶವಿರಬೇಕು. ಅಲ್ಲಿ ಎಲ್ಲ ಭಾಷೆ ಗಳ ಲೇಖಕರು ಸೇರಿದರೆ ಅದೊಂದು ಭಾವೈಕ್ಯದ ಬೀಡಾ ಗಬಹುದು. ಅಲ್ಲಿಯೇ ಒಂದು ವೃದ್ಧಾಶ್ರಮ ಅಥವಾ ವಾನಪ್ರಸ್ಥಾಶ್ರಮ ನಿರ್ಮಾಣವೂ ಒಳ್ಳೆಯದು ಎಂದರು.

ಪರಭಾಷಾ ಪ್ರೇಮಿಗಳು
ನಾವು ಸ್ವಭಾಷಾ ಪ್ರೇಮಿಗಳಲ್ಲ, ಪರಭಾಷಾ ಪ್ರೇಮಿಗಳು, ನಾವು ಹೊರಗಿನಿಂದ ಬಂದವರಿಗೆ ಕನ್ನಡ ಕಲಿಸುವುದು ಬಿಡಿ, ನಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಕನ್ನಡ ಕಲಿಸುವುದಿಲ್ಲ. ನಮಗೆ ಕನ್ನಡ ಮಾಧ್ಯಮ ಶಾಲೆಗಳು ಬೇಡ, ಆಂಗ್ಲ ಮಾಧ್ಯಮ ಶಾಲೆಗಳೇ ಬೇಕು ಎಂದು ಡಾ.ಉಪಾಧ್ಯಾಯ ವ್ಯಂಗ್ಯವಾಡಿದರು.
ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಕೊಡಬೇಕು ಎಂಬ ಮಾತನ್ನು ಕಂಠಪಾಠ ಮಾಡಿಕೊಂ ಡಂತೆ ಪ್ರಚಾರ ಮಾಡುತ್ತೇವೆ. ಮಾತೃಭಾಷೆ ಶಿಕ್ಷಣ ಬೇಕು ಎಂದರೆ ಆಂಗ್ಲ ಭಾಷೆ ಬೇಡವೆಂದಲ್ಲ. ಆಂಗ್ಲ ಭಾಷೆಯನ್ನು ಕಲಿಯಬೇಕು, ಅದರ ಸಾಹಿತ್ಯ ಓದಬೇಕು ಎಂದವರು ಹೇಳಿದರು.
ಯುವ ಪೀಳಿಗೆಗೆ ಸಾಹಿತ್ಯದಲ್ಲಿ ಅಭಿರುಚಿ ಹುಟ್ಟಿಸು ವಂತಹ ಕಾರ್ಯಕ್ರಮಗಳನ್ನು ಕೈಗೊಳ್ಳು ವುದು ಹಿರಿಯ ರಾದ ನಮ್ಮಂಥವರ ಕರ್ತವ್ಯ. ಸಾಹಿತ್ಯ ರಸಗ್ರಹಣ ಶಿಬಿರ ಗಳನ್ನು ಏರ್ಪಡಿಸಿ, ಪ್ರಮುಖ ಸಾಹಿತ್ಯ ಕೃತಿಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು ಎಂದವರು ಸಲಹೆ ನೀಡಿದರು.
ವರದಿಯ ವಿವರಗಳು |
 |
ಕೃಪೆ : ವಾಭಾ/ದುರ್ಗಪ್ರಸಾದ್ ಕೆ. ವರದಿಗಾರರು : ಪ್ರವೀಣ್ ಪ್ರಭಾಕರ್
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|