ಮು೦ಬೈ: ಸೆಟ್‌ನಲ್ಲಿ ಕುಸಿದು ಬಿದ್ದ ಕತ್ರಿನಾ ಕೈಫ್ |
ಪ್ರಕಟಿಸಿದ ದಿನಾಂಕ : 2010-03-20
ಮುಂಬಯಿ, ಮಾ. ೧೯: ಸಿನೆಮಾ ನಟಿ ಕತ್ರಿನಾ ಕೈಫ್ ಬುಧವಾರ ಮುಂಬಯಿಯಿಂದ ೧೦೦ ಕಿ. ಮೀ. ದೂರವಿರುವ ಮಾಲ್ಶೇಜ್ ಘಾಟ್‌ನಲ್ಲಿ ತೀಸ್ ಮಾರ್ ಖಾನ್ ಸಿನೆಮಾ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ನಿಶ್ಶಕ್ತಿಯಿಂದ ಕುಸಿದು ಬಿದ್ದಿದ್ದಾರೆ.
ಕತ್ರಿನಾ ಅಸ್ವಸ್ಥರಾದಾಗ ಸಿನೆಮಾ ಸೆಟ್‌ನಲ್ಲಿದ್ದವರು ಗಾಬರಿಯಾದರು. ನಾಯಕ ನಟ ಅಕ್ಷಯ್ ಕುಮಾರ್ ತನ್ನ ಹೆಲಿಕಾಪ್ಟರ್‌ನಲ್ಲಿ ಕೂಡಲೇ ಮುಂಬಯಿಯ ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಿಂದ ವೈದ್ಯರನ್ನು ಕರೆದೊಯ್ದು ಕತ್ರಿನಾಗೆ ಚಿಕಿತ್ಸೆ ಕೊಡಿಸಿದರು.
ಬಿಡುವಿಲ್ಲದ ದುಡಿತ, ನಿದ್ರಾ ಹೀನತೆ ಹಾಗೂ ಕಡಿಮೆ ರಕ್ತದೊತ್ತಡ ಕತ್ರಿನಾ ನಿಶ್ಶಕ್ತಿಗೆ ಕಾರಣ ಎಂದು ವೈದ್ಯರು ಹೇಳಿದ್ದಾರೆ. ಬುಧವಾರ ಬೆಳಗ್ಗಿನಿಂದಲೇ ಕತ್ರಿನಾ ಆರೋಗ್ಯ ಚೆನ್ನಾಗಿರಲಿಲ್ಲ. ಪ್ರಯಾಣ , ಶೂಟಿಂಗ್‌ನಿಂದ ಅವರು ಬಹಳ ದಣಿದಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00
|
|
| ಪೆದ್ರು , ಬಜ್ಪೆ | 2010-03-23 | | ಇದು ಪ್ರಮೋದ್ ಮುತಾಲಿಕ್ ಕೆಲಸ. |
| hassanmukka, mangalore/ksa | 2010-03-22 | | ಬೇರೆ ಏನು ಕಾರಣ ಇಲ್ಲವಲ್ಲ ! |
|