40 ಸಾವಿರ ರು.ಗೆ ಪತ್ನಿಯನ್ನೇ ಮಾರಿದ ಬಿಹಾರದ ಧೂರ್ತ ಪತಿ! |
ಪ್ರಕಟಿಸಿದ ದಿನಾಂಕ : 2010-03-20
ಔರಂಗಾಬಾದ್: ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸ್ಥಿತಿ ಹೇಗಿದೆ ಎಂಬುದಕ್ಕೆ ಉದಾಹರಣೆ ಯೊಂದು ಇಲ್ಲಿದೆ. ಬಿಹಾರದ ಔರಂಗಾಬಾದ್ ಜಿಲ್ಲೆಯ ಪತಿ ಮಹಾಶಯನೊಬ್ಬ ತನ್ನ ಎಳೆಯ ವಯಸ್ಸಿನ ಪತ್ನಿಯನ್ನೇ ೪೦,೦೦೦ ರು.ಗಳಿಗೆ ಮಾರಿಬಿಟ್ಟಿದ್ದಾನೆ.
ಇರ್ಫಾನ್ ಮಿಯಾನ್ ಎಂಬ ದಿನಗೂಲಿ ಕಾರ್ಮಿಕನೇ ೨೨ ವರ್ಷದ ತನ್ನ ಪತ್ನಿ ರೆಹನಾಳನ್ನು ಮಾರಾಟ ಮಾಡಿದವನು. ಉದ್ಯೋಗದ ನೆಪ ಹೇಳಿ ಹೆಂಡತಿಯನ್ನು ಮುಂಬೈಗೆ ಕರೆದೊಯ್ದ ಇರ್ಫಾನ್ ನಂತರ ಅವಳನ್ನು ಮನೆಯೊಂದರಲ್ಲಿ ಕೂಡಿ ಹಾಕಿದ್ದನು. ರೆಹನಾ ಕೊನೆಗೆ ತನ್ನ ಪೋಷಕರನ್ನು ಸಂಪರ್ಕಿಸಿ ವಿಷಯ ತಿಳಿಸಿದ ನಂತರ, ಪೋಷಕರು ಆಕೆಯನ್ನು ಬಿಡುಗಡೆ ಮಾಡಿದ್ದಾರೆ. ಪೊಲೀಸರು ಇರ್ಫಾನ್ ಮತ್ತು ೩ ಕುಟುಂಬ ಸದಸ್ಯರ ವಿರುದ್ಧ ಕೇಸು ದಾಖಲಿಸಿ ಕೊಂಡಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|