ಶನಿವಾರ, 11-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಕಾಂಗ್ರೆಸ್ಸಿಗರಿಂದ ವಿನಾ ಕಾರಣ ನನ್ನ ಟಾರ್ಗೆಟ್ : ರಾಜೀನಾಮೆ ನೀಡಲು ನಾನೇನು ಅಶ್ಲೀಲತೆಯಲ್ಲಿ ತೊಡಗಿಲ್ಲ : ಕಾಂಗ್ರೆಸ್ ಆರೋಪಕ್ಕೆ ರಘುಪತಿಭಟ್ ಅಸಮಾಧಾನ
Latest news item ಅಶುದ್ದವಾದ ಸೇಂಟ್ ಮೇರಿಸ್ ದ್ವೀಪಕ್ಕೆ ಕಾಂಗ್ರೇಸ್ ನಿಂದ ಗಣಹೋಮ
Latest news item ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ'
Latest news item ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು?
Latest news item ವಿಜೃಂಬಣೆಯಿಂದ ಸಂಪನ್ನಗೊಂಡ ಹೆರ್ಗ ಶ್ರೀ ದುರ್ಗಾಪರಮೇಶ್ವರಿ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವ
Latest news item `ಹಾಲ್ ಆಫ್ ಫೇಮ್'ಗೆ ಗಾವಸ್ಕರ್
Latest news item ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ
Latest news item ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ
Latest news item ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ಕಬ್ಬನ್ ಪಾರ್ಕ್‌ನಲ್ಲಿ ಮಳೆ ನೀರ ಮೇಳ

ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಕಬ್ಬನ್ ಪಾರ್ಕ್ ಬಾಲಭವನದಲ್ಲಿ ಮಳೆ ನೀರು ಸಂಗ್ರಹ ಮೇಳ ನಡೆಯುತ್ತಿದೆ. ಬೆಂಗಳೂರೆಂಬ  ಮಹಾನಗರಿಯ ಮೇಲೆ ವಾರ್ಷಿಕ ಸರಾಸರಿ 900 ಮಿಲಿಮೀಟರ್ ಮಳೆ ಸುರಿಯುತ್ತದೆ.

ಹೆಬ್ಬಾಳ ಕೃಷಿ ವಿಶ್ವ ವಿದ್ಯಾಲಯದ ಭಾಗದಲ್ಲಿ ಇನ್ನೂ ತುಸು ಹೆಚ್ಚು. ವರ್ಷದಲ್ಲಿ ಒಟ್ಟು ನೂರ ರಿಂದ ನೂರೈವತ್ತು ದಿನಗಳ ಕಾಲ ಮಳೆ ಸುರಿಯುತ್ತದೆ.ಇಲ್ಲಿ ಒಂದು ಗಂಟೆ ಗಟ್ಟಿಯಾಗಿ ಮಳೆ  ಸುರಿದರೆ ಬಡಾವಣೆಗಳು ಸಮುದ್ರವಾಗುತ್ತವೆ. ರಸ್ತೆಗಳು ಹೊಂಡಗಳಾಗುತ್ತವೆ. ಬಸ್ ನಿಲ್ದಾಣ ಗಳು, ತಗ್ಗು ಪ್ರದೇಶಗಳು ಕೆರೆಗಳಾಗುತ್ತವೆ.

ಇಷ್ಟೆಲ್ಲ  ಭರ್ಜರಿ ಮಳೆ ಸುರಿದರೂ ಮಾರ್ಚ್-  ಏಪ್ರಿಲ್ ತಿಂಗಳೊತ್ತಿಗೆ ಅನೇಕ ಬಡಾವಣೆಗಳು ನೀರಿಲ್ಲದೆ ಬಿಕ್ಕಳಿಸುತ್ತವೆ. ಮಾಗಡಿ ರಸ್ತೆಯಲ್ಲಿರುವ ಸುಂಕದಕಟ್ಟೆ, ಭಾರತ್ ನಗರದಂತಹ ಪ್ರದೇ ಶಗಳಲ್ಲಿ ನೀರಿದ್ದರೂ ಕಲುಷಿತವಾಗಿರುತ್ತವೆ. ಕುಡಿಯುವ ನೀರು ಸರಬರಾಜಾಗುವ ಕೊಳವೆ ಗಳಲ್ಲಿ ಹಾವಿನ ಮರಿ, ಕಪ್ಪೆ, ಚೇಳುಗಳು ಇಣುಕುತ್ತವೆ. ಪರಿಣಾಮ ನೀರಿಗಾಗಿ ಸಾರ್ವಜನಿಕರ ಪ್ರತಿಭಟನೆ, ಧರಣಿ, ಜಾಥಾ...

 ಅಭಿವೃದ್ಧಿಯೆಂಬ ಅಂಧಯುಗದೊಂದಿಗೆ ನಗರದಲ್ಲಿ ಕುಡಿವ ನೀರಿನ ಹಾಹಾಕಾರ ಆರಂಭವಾ ಯಿತು. ವಾಡಿಕೆಯ ಮಳೆ ಪ್ರಮಾಣ ಇಳಿಕೆಯಾಗದಿದ್ದರೂ ಸುರಿವ ಮಳೆ ನೀರನ್ನು ಹಿಡಿದಿಟ್ಟು ಕೊಳ್ಳುವ, ಭೂಮಿಗೆ ಇಂಗಿಸುವ ಕೆರೆ, ಕಟ್ಟೆ, ಕಲ್ಯಾಣಿಗಳು ಕಳೆದು ಹೋದವು. ಮರ-ಗಿಡಗಳ ನಾಪತ್ತೆಯಾದವು. ನಗರದ ಜೀವನಾಡಿಯಾಗಿದ್ದ ವೃಷಭಾವತಿ ಎಂಬ ನೈದಿಲೆಯ ಹಾದಿ ಬೆಂಗಳೂರಿನ ಹೊಲಸು ಸಾಗಿಸುವ ಕೊಳವೆಯಾಯಿತು. ಪರಿಮಳ ಸೂಸುತ್ತಿದ್ದ ನದಿ ಪಾತ್ರ ದುರ್ನಾತ ಬೀರುವ ಕೊಳೆಗೇರಿಯಾಯಿತು. ಇದು ಬೆಂಗಳೂರಿನ ನೀರಿನ ಸಮಸ್ಯೆಯ ಕಥೆ.

ಮಳೆ ನೀರು ಸಂಗ್ರಹ ಕಡ್ಡಾಯ

ಪ್ರತಿ ವರ್ಷ ಎದುರಿಸುತ್ತಿರುವ ಈ ನೀರಿನ ಸಮಸ್ಯೆಗೆ  ಬೆಂಗಳೂರು ಜಲ ಮಂಡಳಿ ಶಾಶ್ವತ ಪರಿಹಾರ ಕಂಡು ಹಿಡಿಯಲು ಹರಸಾಹಸ ಪಟ್ಟಿದೆ. ಅದಕ್ಕಾಗಿ ದೂರದ ಕಾವೇರಿಯನ್ನು ತಂದು ಬೆಂಗಳೂರಿನಾದ್ಯಂತ ಹಂಚುವ ಪ್ರಯತ್ನ ಮಾಡಿದೆ. ನಾಗಾಲೋಟದಲ್ಲಿ ಬೆಳೆಯುತ್ತಿರುವ ಮಹಾ ನಗರಿಗೆ ಈ  ಸೌಲಭ್ಯ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ.

ಆದರೆ ಈ ಸಮಸ್ಯೆಗೆ ಮಳೆ ನೀರು ಸಂಗ್ರಹವೊಂದೇ ಪರಿಹಾರ ಎನ್ನುತ್ತದೆ ಜಲಮಂಡಳಿ. ನಗರ ದಲ್ಲಿ ಸ್ವಂತ ಕಟ್ಟಡವುಳ್ಳ ಪ್ರತಿಯೊಬ್ಬರೂ ತಮ್ಮ ಸೂರಿನ ಮೇಲೆ ಸುರಿಯುವ ಮಳೆ ನೀರನ್ನು ಸಂಗ್ರಹಿಸುವುದನ್ನು ಕಡ್ಡಾಯ ಮಾಡುತ್ತಿದೆ. ಈಗಾಗಲೇ 2400 ಚದರ ಅಡಿ ನಿವೇಶನದಲ್ಲಿ (6040) ಮನೆ ನಿರ್ಮಿಸಿಕೊಂಡಿರುವವರು ಹಾಗೂ ಹೊಸದಾಗಿ 1200 ಚದರ ಅಡಿ ವಿಸ್ತೀರ್ಣ ದಲ್ಲಿ (30 40) ಮನೆ ಕಟ್ಟುವವರು ಕಡ್ಡಾಯವಾಗಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಿ ಕೊಳ್ಳಬೇಕು ಎಂಬ ಕಾನೂನು ಅಂಗೀಕಾರವಾಗಿದೆ. ಈ ವರ್ಷದ ಮೇ 27ರಿಂದ ಇದು  ಜಾರಿಗೆ ಬರಲಿದೆ.

ಮೇಳದಲ್ಲಿ ಯಾರಿರುತ್ತಾರೆ

ಫ್ಲಂಬರ್‌ಗಳು, ಗುತ್ತಿಗೆದಾರರು, ಜಲಸಂರಕ್ಷಣೆಯಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಜೊತೆಗೆ ಗ್ರಾಹಕರು ಮಳೆ ನೀರ ಮೇಳದಲ್ಲಿ ಭಾಗವಹಿಸುತ್ತಾರೆ. ಇವರನ್ನೆಲ್ಲ ಒಂದೇ ಸೂರಿನಡಿ ಸೇರಿಸಿ ಮಳೆ ನೀರ ಮಾಹಿತಿ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು ಈ ಮೇಳದ ಉದ್ದೇಶ ಎನ್ನುತ್ತಾರೆ ಜಲ ಮಂಡಳಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅ.ನಾ. ಪ್ರಹ್ಲಾದ ರಾವ್.

ಅದಕ್ಕಾಗಿ ಜಲ ಮಂಡಳಿ ಮಳೆ ನೀರ ಮಾಹಿತಿ ವಿಭಾಗವನ್ನೇ ತೆರೆದಿದೆ. ಜೊತೆಗೆ ಮಳೆ ನೀರು ಸಂಗ್ರಹ ವಿಧಾನವನ್ನು ಅಳವಡಿಸಲು ಬೇಕಾಗುವ ಫಿಲ್ಟರ್‌ಗಳು, ಅವುಗಳ ಜೋಡಣೆ, ಮಾದರಿ ಗಳು ಪ್ರದರ್ಶನ್ನೊಳಗೊಂಡ ವಿಭಿನ್ನ ಮಳಿಗೆಗಳು ಇಲ್ಲಿರುತ್ತವೆ.

ಮಳೆ ನೀರು ಸಂಗ್ರಹ ಅಳವಡಿಸುವವರಲ್ಲದೇ, ಅದರ ಬಗ್ಗೆ ಮಾಹಿತಿ ಪಡೆಯುವವರಿಗೂ ಈ ಮೇಳ ವೇದಿಕೆಯಾಗಲಿದ್ದು, ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ.

 ಹಾಗಾದರೆ ಇನ್ನೇಕೆ ತಡ, ಬನ್ನಿ ಕಬ್ಬನ್ ಉದ್ಯಾನದ ಬಾಲಭವನಕ್ಕೆ. ಅಲ್ಲಿ ಮಳೆ ನೀರ ಮಾಹಿತಿ ನೀಡಲು ತಜ್ಞರ ತಂಡ ನಿಮಗಾಗಿ ಕಾಯುತ್ತಿದೆ. ಬರುವಾಗ ಮಳೆ ನೀರ ಸಂಗ್ರಹದ ಬಗ್ಗೆ ನಿಮ್ಮ ಮನದಲ್ಲಿ ಬಿಡಿ ಬಿಡಿಯಾಗಿರುವ ಪ್ರಶ್ನೆಗಳನ್ನು ಒಪ್ಪಮಾಡಿಕೊಂಡು ಬನ್ನಿ!

ಸಂಪರ್ಕ ಸಂಖ್ಯೆ: ಜಲ ಮಂಡಳಿಯ ಮಂಜುನಾಥ್ 98454 44015, ಸಹಾಯ ಕೇಂದ್ರ 2334 1652/ 2334 8848/49, ಅರ್ಘ್ಯಂ: 4169 8941.

ಮಾಹಿತಿ ವಿನಿಮಯ

ಮಳೆ ನೀರು ಸಂಗ್ರಹಣೆ ಕಡ್ಡಾಯ ಕುರಿತ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲವಿದೆ. ಮಳೆ ನೀರು ಸಂಗ್ರಹ  ವಿಧಾನ ಅಳವಡಿಸುವ ಪರಿಣಿತರು ಯಾರಿದ್ದಾರೆ? ಅವರನ್ನು ಗುರುತಿಸು ವುದು ಹೇಗೆ ? ಅವರಿಗೆ ಜಲಮಂಡಳಿಯಿಂದ ಅನುಮತಿ ದೊರೆತಿದೆಯೇ? ನೀರು ಶೋಧಿಸಲು ಯಾವ ಫಿಲ್ಟರ್ ಅಳವಡಿಸಬೇಕು? ವಿಧಾನ ಅಳವಡಿಸಲು ಎಷ್ಟು ಹಣ ಖರ್ಚಾಗುತ್ತದೆ? ಇಂಥ ಹಲವು ಮಾಹಿತಿಗಳ ಕೊರತೆ ಸಾರ್ವಜನಿಕರನ್ನು ಕಾಡುತ್ತಿದೆ.

ಈ ಗೊಂದಲ ನಿವಾರಣೆ ಹಾಗೂ ಮಳೆ ನೀರು ಸಂಗ್ರಹದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ವಿವಿಧ ಸಂಘಟನೆಗಳು ಕಬ್ಬನ್ ಪಾರ್ಕ್ ಬಾಲಭವನದಲ್ಲಿ ಶನಿವಾರ ಮಳೆ ನೀರು ಸಂಗ್ರಹ ಮೇಳವನ್ನು ಆಯೋಜಿಸಿವೆ.

ಮಾರ್ಚ್ 22ರ ವಿಶ್ವ ಜಲ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಜಲಮಂಡಳಿ ಎಂಜಿನಿಯರ್‌ಗಳ ಸಂಘ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಸಹಯೋಗದಲ್ಲಿ ‘ಅರ್ಘ್ಯಂ’ ಸಂಸ್ಥೆ ಈ ಕಾರ್ಯಕ್ರಮ ರೂಪಿಸಿದೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ಕೃಪೆ : ಪ್ರಜಾವಾಣಿ
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ವಿಶಿಷ್ಟ ಬರಹ]

»ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
»ಈ ಗುಲಾಬಿ ಇರುವುದು ನಿನಗಾಗಿ...
»ನಿಮ್ಮ ಪ್ರೇಮ ಚಿರಾಯುವಾಗಲಿ...
»ಶಂಕರ್ ಸಾವಿಗೆ ಕಾರಣಳಾದ ಆ ಮಾಯಾವಿ ಯಾರು?
»ಮನಃಶಾಸ್ತ್ರಕ್ಕೆ ವೇದಾಂತದ ಅಡಿಗಲ್ಲು...
»ಪಳೆಯುಳಿಕೆಗಳಾಗುತ್ತಿರುವ ಗ್ರಾಮೀಣ ಪರಿಕರಗಳು: ಸಾಂಪ್ರದಾಯಿಕ ಪರಿಕರಗಳು ಆಧುನಿಕತೆಯ ಸೋಗಿನಲ್ಲಿ ಕಣ್ಮರೆ
»ಕೋಮುವಾದದತ್ತ ಜಾರುತ್ತಿದೆಯೇ ಭಾರತ?...
»ವಿದೇಶದಲ್ಲಿದ್ದವನ ಭಾರತದ ಮೆಲುಕುಗಳು..!
»ಮಾತು ಬೇರೆ ಬೇಕೆ ಗೆಳೆಯ ...
»ಕೋಡಗನ ಕೋಳಿ ನುಂಗಿತ್ತಾ....
»ರಾಜಕೀಯ ನನಗೆ ಆಶ್ರಯ ತಾಣ ಅಲ್ಲ!
» ಜರ್ಮನಿಯಲ್ಲಿ ದೇವುಪೂಂಜ, ಜುಮಾದಿ : ಕಟ್ಟ್ ನಿಘಂಟುಗಳ ಕೋಲ ನೇಮಗಳಲ್ಲಿ ಪದಭೂತಗಳ ನಲಿಕೆ
»ಮನೆಯ ಪರಿಸರ ಚೆನ್ನಾಗಿರ್ಬೇಕಂದ್ರೆ ಕುಡಿತ ಬಿಡಬೇಕು:ಸಾಲುಮರದ ತಿಮ್ಮಕ್ಕ
» ಸುಗ್ಗಿಯ ಕಾಲದ ಹಬ್ಬ: ಉತ್ತರಾಯಣದ ಪುಣ್ಯಕಾಲ ಮಕರ ಸಂಕ್ರಾಂತಿ
»ಪ್ರಕೃತಿ-ಚಾರಣ ಪ್ರಿಯರ ಸ್ವರ್ಗ ಕುಮಾರಪರ್ವತ...
»ಫ್ರೀಲಾನ್ಸ್ ಪತ್ರಕರ್ತನಾಗುವುದು ಹೇಗೆ?...
»ಹೊಸವರ್ಷದಲ್ಲಿ ನಾವೂ ಹೊಸಬರಾಗೋಣ...
»ಕನ್ನಡಪ್ರೇಮಿ ಕರ್ನಾಟಕ ಕ್ರೈಸ್ತರಿಗೆ ಜಯಹೆ
»ಸುತ್ತೂರಿನಲ್ಲೊಂದು ಕೃಷಿ ಬ್ರಹ್ಮಾಂಡ...
»ಆತನೂ ಅನಿವಾರ್ಯ. . .
»ಜವರಾಯನ ಲೋಕಕ್ಕೆ `ಪತ್ತೇದಾರ'ನ ಪಯಣ ( ಪರಿಷ್ಕ್ತತ ವರದಿ )
»ಸುರೇಶ್ ಗೌಡ ಮಾತ್ರ ಯಾಕೆ ಉಡುಗೊರೆಗೆ ಯೋಗ್ಯ!
»ಅಟಲ್‌ಜೀ ಒಡನಾಟದ ಝಲಕು-ಮೆಲುಕು
»ಶೂನ್ಯ ಬಂಡವಾಳ ಪ್ರತಿಪಾದಕ ಬಡಗರ ಸಿದ್ದಾಶ್ರಮದ ಶ್ರೀ. ಮೋಹನಕುಮಾರ್ ಸ್ವಾಮೀಜಿ
»ಮದ್ಯಪಾನದ ಮೋಜಲ್ಲಿ ಆರೋಗ್ಯ ಮರೆಯದಿರಿ
»ಮಡಿಕೇರಿಯಲ್ಲಿ ಮಂಜಿನ ಚಿತ್ತಾರ...
»ಮಲೇರಿಯಾ ತಡೆಯೋದಕ್ಕೆ ಕೆರೆ ಮುಚ್ಚಿದ್ರು, ಗೊತ್ತಾ?
»ಕರ್ಮವೀರ ಪುರಸ್ಕಾರ ಪ್ರಶಸ್ತಿ ವಿಜೇತ ಕೊಡಕ್ಕಲ್ ಶಿವಪ್ರಸಾದ್
» ಕoದ....
»ಸರ್ಕಾರವೇ ಭೂ ದಲ್ಲಾಳಿಯಾದರೆ ಜನರ ಗತಿ ಏನು?
»ಸುಳ್ಯದ ಸಮ್ಮೇಳನದಲ್ಲಿ ಕನ್ನಡ ನಾಡಗೀತೆ ಹಾಡಿದ ಸ್ವೀಡನ್ನಿನ ಸಿಸಿಲಿಯಾ
»ಗೋಬಿ ಮಂಚೂರಿ : ಎಚ್ಚರ !
»ಶಾಲೆ ಮುಚ್ಚುವ ನಿರ್ಧಾರದಲ್ಲಿ ಗೊಂದಲಗಳಿವೆ : ಮುಖ್ಯಮ೦ತ್ರಿ ಚ೦ದ್ರು ಅವರೊ೦ದಿಗೆ ಸ೦ದರ್ಶನ
»ಮೈಕ್ರೋ ವೇವ್ ಕುಕ್ಕಿಂಗ್
»ಹೆಣ್ಣೇ ನಿನಗೆ ನಮೋ ನಮಃ...
»ಮಡೆಸ್ನಾನ: ತಿಳಿಹೇಳುವುದನ್ನು ಬಿಟ್ಟು ನಂಬಿಕೆ ನೆಪವೇಕೆ? ...
»ಸಾಮಾಜಿಕ ತಾಣಗಳಲ್ಲೂ ಬೇಕಲ್ಲವೇ ಸ್ವಾಸ್ಥ್ಯದ ಪರಿಕಲ್ಪನೆ?...
»ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ರೆಡ್‌ಕ್ರಾಸ್ ಶಾಲಾ ವಿದ್ಯಾರ್ಥಿಗಳು: 17 ತಿಂಗಳಿನಿಂದ ಸಂಬಳವಿಲ್ಲದೆ ಕಂಗಾಲಾದ ಸಿಬ್ಬಂದಿ
»ಹಾಲಿ - ಮಾಜಿ ಮುಖ್ಯ ಮಂತ್ರಿಗಳಿಗೊಂದು ಬಹಿರಂಗ ಪತ್ರ...
»ನೂರೆಂಟು ನೋಟ: ಪ್ರೇಮ ಚಲನೆಯ ಸಂಕೇತ, ಮದುವೆ ನಿಶ್ಚಲದ ಪ್ರತೀಕ!
»ಎಲ್ಲಕ್ಕೂ ಒಂದು ಕೊನೆಯಿದೆ, ಮಡೆಸ್ನಾನಕ್ಕೂ ಇರಲಿ
»ಪುಣ್ಯಕೋಟಿಯ ಹಾಡು....
» ಪೌರಾಣಿಕ ಹಿನ್ನಲೆಯಲ್ಲೂ ಪ್ರಸಿದ್ದ: ಅದ್ಬುತ ಪ್ರವಾಸಿ ತಾಣ; ಶಿರಸಿಯ ಯಾಣ
»ಒಂದು ಕ್ಷಣದ ಆತುರದಿಂದ ತನ್ನ ಜೀವವನ್ನೇ ತೆತ್ತ ಆ ಚಿಕ್ಕ ಹುಡುಗ.
»ಭಾಷಾ ದುರಾಭಿಮಾನಿಗಳನ್ನು ಕನ್ನಡದ ನೆಲದಿಂದ ದೂರವಿಡಿ..!
»ಪರಮಾತ್ಮ ಸ್ವರೂಪ ...
»ಕಣ್ಣಾಲಿಗಳು ತೇವವಾಗುತ್ತದೆ...
»ಕನಕದಾಸರ ಜನ್ಮದಿನದ ಜಿಜ್ಞಾಸೆ : ಆಧ್ಯಾತ್ಮ ಕ್ಷೇತ್ರ: ಕನಕದಾಸರ ಕೊಡುಗೆ ಅಪಾರ
»ಕುಂಬಾರರೀಗ ಕುಲಕಸುಬು ನೆಚ್ಚಿಕೊಳ್ಳುವಂತಿಲ್ಲ...
»ಕಳಪೆ ರಸ್ತೆ ಕಾಮಗಾರಿ ಮತ್ತು ಮಾಹಿತಿ ಹಕ್ಕು ಕಾನೂನು............

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri