ಬೆಳ್ತ೦ಗಡಿ: `ಪ್ರಸಾದ' ನೀಡಿ ಒಲ್ಲೆನೆಂದವನಿಗೆ ಮದುವೆ |
ಪ್ರಕಟಿಸಿದ ದಿನಾಂಕ : 2010-03-20
ಬೆಳ್ತಂಗಡಿ, ಮಾ. ೧೯: ಯುವತಿಯನ್ನು ಪ್ರೇಮಿಸಿ ಮದುವೆಗೆ ನಿರಾಕರಿಸಿದ ಯುವಕನಿಗೆ ಸಂಘಟ ನೆಯೊಂದು ಗುರುವಾರ ರಾತ್ರಿ ಮದುವೆ ಮಾಡಿಸಿದೆ.
ಸುಬ್ರಹ್ಮಣ್ಯದ ಕುಮಾರಧಾರಾ ಸಮೀಪದ ಪ್ರಸಾದ್ ಕೆ. (೨೫) ವರ. ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಗಾಂಧಿ ನಗರದ ಜಲಜಾಕ್ಷಿ ವಧು. ಜಲಜಾಕ್ಷಿ ಹಾಗೂ ಪ್ರಸಾದ್‌ನ ಅಕ್ಕ ಬೆಂಗಳೂರಿನಲ್ಲಿ ಜತೆಯಾಗಿ ಕೆಲಸ ಮಾಡುತ್ತಿದ್ದರು. ಅಕ್ಕನ ಜತೆ ಮಾತನಾಡುವಾಗ ಆಕೆಯ ಸ್ನೇಹಿತೆ ಜಲಜಾಕ್ಷಿ ಯ ಪರಿಚಯವಾಯಿತು. ಪರಿಚಯ ಸ್ನೇಹವಾಗಿ ಮಾರ್ಪಾಡಾಗಿ ಪ್ರೇಮವಾಯಿತು. ಪ್ರೇಮ `ಉತ್ಕಟ'ವಾಯಿತು. ಪರಿಸ್ಥಿತಿ ಕೈಕೊಟ್ಟಾಗ ಯುವತಿ ಮದುವೆಗೆ ಒತ್ತಾಯಿಸಿದಳು. ಯುವಕ ನಿರಾಕರಿಸಿದ.
ಯುವತಿ ಜನವಾದಿ ಮಹಿಳಾ ಸಂಘಟನೆಗೆ ದೂರು ನೀಡಿ ಪೊಲೀಸರಿಗೆ ದೂರು ನೀಡಿದಳು. ಸಂಘಟನೆ ಹಾಗೂ ಪೊಲೀಸರ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಯಂತೆ ಗುರುವಾರ ರಾತ್ರಿ ಕುತ್ರೊಟ್ಟು ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿ ಇಬ್ಬರ ವಿವಾಹ ನಡೆಯಿತು. ಕೊನೆ ಕ್ಷಣದ ವರೆಗೂ ಯುವಕ ಮಾತ್ರ ಮದುವೆಯಾಗಲು ನಿರಾಕರಿಸುತ್ತಲೇ ಇದ್ದು, ತಾಳಿ ಕಟ್ಟಲು ಹಿಂಜರಿದ ಪ್ರಸಂಗವೂ ನಡೆದಿದೆ ಎಂದು ಸಂಘಟನೆಯವರು ತಿಳಿಸಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|