ಮ೦ಗಳೂರು: ಕಾರ್ಪ್ ಬ್ಯಾಂಕಿಗೆ ಎಸ್‌ಕೆಓಸಿಎಚ್ ಚಾಲೆಂಜರ್ ಪುರಸ್ಕಾರ |
ಪ್ರಕಟಿಸಿದ ದಿನಾಂಕ : 2010-03-20
ಮಂಗಳೂರು, ಮಾ. ೧೯: ಕಾರ್ಪೊರೇಶನ್ ಬ್ಯಾಂಕಿಗೆ `ಇನ್‌ಕ್ಲೂಶನ್ ಚಾಂಪಿಯನ್ ಆಫ್ ಈಯರ್' ಸಾಧನೆಗಾಗಿ ಪ್ರತಿಷ್ಠಿತ ಎಸ್‌ಕೆಓಸಿಎಚ್ ಚಾಲೆಂಜರ್ ಪುರಸ್ಕಾರ ಲಭಿಸಿದೆ. ಎಸ್ ಕೆಓಸಿಎಚ್ ಕನ್ಸಲ್ಟೆನ್ಸಿ ಸರ್ವಿಸಸ್ ಈ ಪುರಸ್ಕಾರವನ್ನು ನೀಡುತ್ತಿದೆ.
ಹೊಸದಿಲ್ಲಿಯಲ್ಲಿ ಜರಗಿದ ಸಮಾರಂಭದಲ್ಲಿ ಕಾರ್ಪೊರೇಶನ್ ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಜೆ.ಎಂ.ಗರ್ಗ್ ಅವರು ಪುರಸ್ಕಾರವನ್ನು ಸ್ವೀಕರಿಸಿದರು.
ಎಸ್‌ಕೆಓಸಿಎಚ್ ಚಾಲೆಂಜರ್ ಪುರಸ್ಕಾರ ದೇಶದ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದಾಗಿದೆ. ವ್ಯಕ್ತಿ, ಯೋಜನೆ ಹಾಗೂ ಸಂಸ್ಥೆಗಳು ಅಪೂರ್ವ ಸಾಧ ನೆಯ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಪುರಸ್ಕಾರವನ್ನು ನೀಡಲಾಗುತ್ತಿದೆ.
ಕಾರ್ಪೊರೇಶನ್ ಬ್ಯಾಂಕ್ ತಂತ್ರಜ್ಞಾನಗಳ ಅಳವಡಿಕೆ, ಗ್ರಾಹಕರ ಸಂಬಂಧ ನಿರ್ವಹಣೆ ಸೇರಿದಂ ತೆ ವಿವಿಧ ಕ್ಷೇತ್ರಗಳಲ್ಲಿನ ವಿಶೇಷ ಸಾಧನೆಗಾಗಿ ಐಡಿಆರ್‌ಬಿಟಿ, ಐಬಿಎ, ಎಸ್‌ಕೆಓಸಿಎಚ್ ಸೇರಿ ದಂತೆ ನಿರಂತರವಾಗಿ ಪ್ರತಿಷ್ಠಿತ ಪುರಸ್ಕಾರಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುತ್ತಿದೆ.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|