ನಕ್ಸಲರು ಅಪಹರಿಸಿದ್ದ ಬಂದೂಕು ಪತ್ತೆ: ತಿಂಗಳೆಯಲ್ಲಿ ನಕ್ಸಲ್ ಪ್ರತ್ಯಕ್ಷ: ಬಿರುಸಿನ ಶೋಧ |
ಪ್ರಕಟಿಸಿದ ದಿನಾಂಕ : 2010-03-20
ಚಿಕ್ಕಮಗಳೂರು, ಮಾ. ೧೯: ಐದು ವರ್ಷದ ಹಿಂದೆ ನಕ್ಸಲರು ಪೊಲೀಸ್ ಮುಖ್ಯಪೇದೆಯೊಬ್ಬ ರಿಂದ ಅಪಹರಿಸಿದ್ದ ಅತ್ಯಾಧುನಿಕ ಬಂದೂಕು ಕೊನೆಗೂ ಪೋಲಿಸರಿಗೆ ಸಿಕ್ಕಿದೆ. ಹೆಬ್ರಿ ಸಮೀಪ ಪೊಲೀಸ್ ಎನ್‌ಕೌಂಟರ್‌ಗೆ ಬಲಿಯಾದ ನಕ್ಸಲ್ ನಾಯಕ ಕುತ್ಲೂರಿನ ವಸಂತನಿಂದ ಲಭಿಸಿದ ಬಂದೂಕು ಇದು ಎಂದು ಪೊಲೀಸ್ ಮೂಲಗಳು ದೃಢಪಡಿಸಿವೆ.
೨೦೦೪ರ ಅ. ೭ರಂದು ಶೃಂಗೇರಿ ತಾಲೂಕು ಮಗೇಬೈಲಿನ ಚಂದ್ರಶೇಖರ್ ಅವರ ಮನೆಗೆ ಹಾಡಹಗಲೇ ನುಗ್ಗಿದ ನಕ್ಸಲರ ತಂಡ ಮನೆ ಕಾವಲಿಗೆ ಇದ್ದ ಪೊಲೀಸ್ ಮುಖ್ಯಪೇದೆ ಅವರಿಗೆ ಥಳಿಸಿ ಅವರ ಕೈಯಲ್ಲಿದ್ದ ಅತ್ಯಾಧುನಿಕ ಎಸ್‌ಎಲ್‌ಆರ್ ಬಂದೂಕನ್ನು ಅಪಹರಿಸಿತ್ತು. ಈ ಘಟನೆ ಯ ಬಳಿಕ ಹಲವು ನಕ್ಸಲರು ಎನ್‌ಕೌಂಟರ್‌ನಲ್ಲಿ ಹತ್ಯೆಯಾದರೂ ಅವರು ಅಪಹರಿಸಿದ್ದ ಬಂದೂ ಕು ಈವರೆಗೂ ಪತ್ತೆಯಾಗಿರಲಿಲ್ಲ. ಆರಂಭದಲ್ಲಿ ತಲೆಕೆಡಿಸಿಕೊಂಡಿದ್ದ ಪೊಲೀಸರು ಕ್ರಮೇಣ ಆ ವಿಷಯವನ್ನೂ ಮರೆತಿದ್ದರು.
ಇತ್ತೀಚೆಗೆ ಹೆಬ್ರಿ ಸಮೀಪ ನಡೆದ ಎನ್‌ಕೌಂಟರ್‌ನಲ್ಲಿ ಸಾವಿಗೀಡಾದ ನಕ್ಸಲ್ ವಸಂತನ ಕೈಯಲ್ಲಿ ಈ ಬಂದೂಕು ಇತ್ತು. ಆದುದರಿಂದ ವಸಂತ್ ನೇತೃತ್ವದ ತಂಡವೇ ಅಂದು ಪೊಲೀಸರಿಂದ ಬಂದೂಕು ಅಪಹರಿಸಿತ್ತು ಎಂಬುದು ಈಗ ಸಾಬೀತಾಗಿದೆ. ವಸಂತನ ಕೈಯಲ್ಲಿದ್ದ ಬಂದೂಕು ಸೇನೆಯದೆಂದು ಈ ಹಿಂದೆ ಭಾವಿಸಲಾಗಿತ್ತು.
ತಿಂಗಳೆಯಲ್ಲಿ ನಕ್ಸಲ್ ಪ್ರತ್ಯಕ್ಷ: ಬಿರುಸಿನ ಶೋಧ
ಹೆಬ್ರಿ, ಮಾ. ೧೯: ನಕ್ಸಲರು ಮತ್ತೆ ಸಕ್ರಿಯರಾಗಿರುವ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆಯು ಹೆಬ್ರಿ ಪರಿಸರದಲ್ಲಿ ತೀವ್ರ ಕಾರ್ಯಾಚರಣೆ ನಡೆಸತೊಡಗಿದೆ.
ಹೆಬ್ರಿ ಠಾಣಾ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶಗಳಾದ ನಾಡ್ಪಾಲಿನ ಕೂಡ್ಲು, ಮೇಗದ್ದೆ, ತಣ್ಣೀ ರು ಮತ್ತು ಮುದ್ರಾಡಿಯ ಕಬ್ಬಿನಾಲೆ, ಮತ್ತಾವು, ತಿಂಗಳ ಮಕ್ಕಿ ಪರಿಸರದಲ್ಲಿ ಎಎನ್‌ಎಫ್ ಎರ ಡು ಪ್ರತ್ಯೇಕ ತಂಡಗಳಲ್ಲಿ ಚುರುಕಿನ ಶೋಧ ನಡೆಯುತ್ತಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ.
ನಕ್ಸಲರ ತಂಡವೊಂದು ಕಳೆದ ಮಂಗಳವಾರ ಬಿಜೆಪಿಯ ಹಿರಿಯ ಮುಖಂಡ ತಿಂಗಳೆ ವಿಕ್ರ ಮಾರ್ಜುನ ಹೆಗ್ಡೆ ಅವರ ತಿಂಗಳೆಯ ಮನೆಗೆ ನುಗ್ಗಿ ಮನೆಯಿಂದ ಅಡುಗೆ ಸಾಮಗ್ರಿಗಳನ್ನು ಹೊರತಂದು ಅಡುಗೆ ಮಾಡಿ ಊಟ ಮಾಡಿ ಹೋಗಿತ್ತು ಹಾಗೂ ತಿಂಗಳೆ ವಿಕ್ರಮಾರ್ಜುನ ಹೆಗ್ಗಡ ಅವರಿಗೆ ಜೀವ ಬೆದರಿಕೆಯನ್ನೂ ಹಾಕಿತ್ತು.
ವರದಿಯ ವಿವರಗಳು |
 |
ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|