ಮೀನ-ಮೇಷ ಎಣಿಸುತ್ತಿರುವ ಮ೦ಗಳೂರು-ಮಣಿಪಾಲ ವೋಲ್ವೋ ಬಸ್: ಇಲ್ಲಿ ಯಾರ ಮಾತನ್ನು ನ೦ಬಬಹುದು? |
ಪ್ರಕಟಿಸಿದ ದಿನಾಂಕ : 2010-03-20
ಮಂಗಳೂರು, ಮಾ. ೧೯: ಇಲ್ಲಿ ಯಾರ ಮಾತು ನಂಬಬೇಕು ?
ಮಾ. ೮. ವಿಧಾನ ಪರಿಷತ್‌ನಲ್ಲಿ ಸಾರಿಗೆ ಸಚಿವ ಆರ್. ಅಶೋಕ್: ಇನ್ನೆರಡು ದಿನಗಳಲ್ಲಿ ಮಂಗ ಳೂರು - ಮಣಿಪಾಲದ ನಡುವೆ ವೋಲ್ವೊ ಬಸ್ ಸಂಚಾರ ಆರಂಭಗೊಳ್ಳಲಿದೆ. ತೀವ್ರ ವಿರೋ ಧದ ನಡುವೆಯೂ ಯಾವುದೇ ಒತ್ತಡಕ್ಕೆ ಮಣಿಯದೆ ಬಸ್ಸು ಸಂಚಾರ ಆರಂಭಿಸಲು ನಿರ್ಧರಿಸಿ ದ್ದೇವೆ.
ಮಾ. ೧೩. ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ಅಧಿಕಾರಿಗಳು ಪತ್ರಿಕೆಗೆ ಹೇಳಿದ್ದು: ನಾವು ಸಿದ್ಧರಿದ್ದೇವೆ. ಸಚಿವರ ದಿನಕ್ಕಾಗಿ ಕಾಯುತ್ತಿದ್ದೇವೆ. ಬಹುತೇಕ ಮಾ. ೧೬ ಅಥವಾ ೧೭ರಂದು ಬಸ್ ಸಂಚಾರ ಆರಂಭಗೊಳ್ಳಬಹುದು.
ಮಾ. ೧೯. ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳ ವಿವರಣೆ: ಸಾರಿಗೆ ಸಚಿವರು ತಾನೇ ಬಂದು ಬಸ್ ಸೇವೆಯನ್ನು ಉದ್ಘಾಟಿಸುವುದಾಗಿ ಹೇಳಿದ್ದಾರೆ. ಅವರ ಮಾತನ್ನು ಉಲ್ಲಂಘಿಸಿ, ಬಸ್ ಸಂಚಾರ ಆರಂಭಿಸುವುದಾದರೂ ಹೇಗೆ ?
ಸಚಿವರು ವಿಧಾನ ಪರಿಷತ್‌ನಲ್ಲಿ ಭರವಸೆ ನೀಡಿ ಇಂದಿಗೆ ೧೧ ದಿನಗಳು ಕಳೆದಿವೆ. ಆದರೆ ವೋ ಲ್ವೊ ಬಸ್ಸುಗಳು ಇನ್ನೂ ಕೆಎಸ್‌ಆರ್‌ಟಿಸಿ ಡಿಪೋ ಬಿಟ್ಟು ರಸ್ತೆಗೆ ಇಳಿದಿಲ್ಲ. ಇಲ್ಲಿ ಅಧಿಕಾರಿಗಳಿಗೆ ಸಚಿವರ ಮಾತನ್ನು ತಳ್ಳಿ ಹಾಕಿ ಬಸ್ಸು ಓಡಿಸಲು ಸಾಧ್ಯವಾಗುತ್ತಿಲ್ಲ.
ಸದ್ಯದ ರಾಜಕೀಯ ಪರಿಸ್ಥಿತಿ ಗಮನಿಸಿದರೆ, ಮಾ. ೨೮ರ ವರೆಗೆ ಮಂಗಳೂರು-ಮಣಿಪಾಲ ನಡುವಿನ ವೋಲ್ವೊ ಬಸ್ಸು ಸಂಚಾರ ಆರಂಭಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಕಾರಣ ಮಾ. ೨೮ಕ್ಕೆ ಬೆಂಗಳೂರು ಬಿಬಿಎಂಪಿ ಚುನಾವಣೆ. ಅದು ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆ ಪ್ರಶ್ನೆ. ಸಚಿವ ಆರ್. ಅಶೋಕ್ ಬೆಂಗಳೂರು ನಗರದವರು ಬೇರೆ. ಇಂತಹ ಮಹತ್ವದ ಘಟ್ಟದಲ್ಲಿ ಅವರು ಬಸ್ಸು ಉದ್ಘಾಟನೆಗೆಂದು ಮಂಗಳೂರಿಗೆ ಬಂದು ಕನಿಷ್ಠ ಅರ್ಧ ದಿನ ಕಳೆಯುವ ಧೈರ್ಯವನ್ನು ತೋರಲಾರರು.
ಮಾ. ೧೭ರಂದು ಮಂಗಳೂರಿಗೆ ಬರುವ ಭರವಸೆ ಸಚಿವ ಕಚೇರಿಯಿಂದ ಕೆಎಸ್‌ಆರ್‌ಟಿಸಿಗೆ ಸಿಕ್ಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಮಾ.೧೯ರ ವರೆಗೆ ವಿಧಾನಮಂಡಲ ಅಧಿವೇಶನವಿದ್ದ ಕಾರಣ ಸಚಿವರು ಬೆಂಗಳೂರು ಕೇಂದ್ರ ಸ್ಥಾನವನ್ನು ಬಿಡುವಂತಿರಲಿಲ್ಲ. ನಾಳೆಯಿಂದ ಕಲಾಪ ಗಳು ಇಲ್ಲ ನಿಜ, ಆದರೆ ಚುನಾವಣೆ ಪ್ರಚಾರವನ್ನಂತೂ ಮಿಸ್ ಮಾಡುವಂತಿಲ್ಲ.
ಅಲ್ಲಿಯವರೆಗೆ ವೋಲ್ವೊ ಬಸ್ ಸಂಚಾರ ಶುರುವಾಗುವುದು ಕಷ್ಟ. ಕೆಎಸ್‌ಆರ್‌ಟಿಸಿ ಅಧಿಕಾರಿ ಗಳನ್ನು ಪ್ರಶ್ನಿಸಿದರೆ, `ಏನು ಮಾಡಬೇಕಾದರೂ ಸಚಿವರಿಂದ ನಿರ್ದೇಶನಗಳು ಬರಬೇಕು. ಅವರು ತಾನೇ ಬಂದು ಉದ್ಘಾಟನೆ ಮಾಡುತ್ತೇನೆ ಎಂದು ಹೇಳಿದ ಬಳಿಕ ನಾವೇನು ಮಾಡಲು ಸಾಧ್ಯವಿಲ್ಲ. ಕೊನೆಗೆ ಬೇರೆ ಸಚಿವರಿಂದ ಮಾಡಿಸಿ ಎಂದಾದರೂ ಆದೇಶ ಬರಬೇಕು. ಅಲ್ಲಿಯ ವರೆಗೆ ಅನಿಶ್ಚಿತತೆ ಸಹಜ'.
ಮಂಗಳೂರು-ಮಣಿಪಾಲ ನಡುವೆ ಪರವಾನಿಗೆ ಲಭಿಸಿರುವ ೬ ಬಸ್ಸುಗಳನ್ನು ಓಡಿಸಲು ಸಾರಿಗೆ ಸಂಸ್ಥೆಗೆ ಈ ರೀತಿಯ ಸಂಕಷ್ಟ. ಈಗಾಗಲೇ ಇನ್ನೂ ಸುಮಾರು ೭೦ರಷ್ಟು ಮಾರ್ಗಗಳಲ್ಲಿ ಪರ ವಾನಿಗೆಗೆ ಅರ್ಜಿ ಸಲ್ಲಿಸಿದೆ. ತಾಂತ್ರಿಕ ತೊಡಕುಗಳು ನಿವಾರಣೆಯಾಗಿ ಪರವಾನಿಗೆ ದೊರೆತರೆ ಅಲ್ಲಿ ಬಸ್ಸು ಓಡುವುದೆಂಬ ಗ್ಯಾರಂಟಿ ಇಲ್ಲ. ಇಲ್ಲಿ ಈಗ ಇರುವ ಸಾಮಾನ್ಯ ಪ್ರಶ್ನೆ. ಜನರಿಗೆ ಸೇವೆ ಒದಗಿಸುವುದು ಮುಖ್ಯವೋ? ಅಥವಾ ಉದ್ಘಾಟನೆ ಹೆಸರಿನಲ್ಲಿ ಪ್ರಚಾರ ಪಡೆಯುವುದು ಮುಖ್ಯ ವೋ ?
ಯೋಜನೆಗಳನ್ನು ಸಕಾಲದಲ್ಲಿ ಆರಂಭಿಸಿ, ಅನಂತರ ಸಚಿವರ ಕಾಲಾವಕಾಶವನ್ನು ಗಮನಿಸಿ ಅವುಗಳನ್ನು ಅಧಿಕೃತವಾಗಿ ಉದ್ಘಾಟಿಸಿದ ನೂರಾರು ಉದಾಹರಣೆಗಳು ನಮ್ಮ ಮುಂದಿವೆ. ಒಮ್ಮೆ ಉದ್ಘಾಟಿಸಿದ ಕಟ್ಟಡ, ಕಾಮಗಾರಿಗಳನ್ನು ಮತ್ತೆ ಸಚಿವರ ಕೈಯಲ್ಲಿ ಉದ್ಘಾಟಿಸಿದ ಪ್ರಕರ ಣಗಳು ಸಾಕಷ್ಟಿವೆ. ಇಲ್ಲೂ ಅದೇ ರೀತಿಯ ಕ್ರಮ ಜರಗಿಸಲು ಸಾಧ್ಯವಿಲ್ಲವೇ ? ತತ್‌ಕ್ಷಣದಲ್ಲಿ ಬಸ್ ಸಂಚಾರವನ್ನು ಆರಂಭಿಸಿ , ಸಚಿವರಿಗೆ ಬಿಡುವಾದಾಗ ಅಧಿಕೃತವಾಗಿ ಉದ್ಘಾಟಿಸಿದರೆ ನಷ್ಟವಂತೂ ಇಲ್ಲ.
ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ತುಸು ಆಸಕ್ತಿ ವಹಿಸುತ್ತಿದ್ದರೆ, ಸಾರಿಗೆ ಸಚಿವರ ಮೇಲೆ ಒತ್ತಡ ಹೇರುತ್ತಿದ್ದರೆ, ವೋಲ್ವೊ ಸಂಚಾರ ಇಷ್ಟರಲ್ಲಿ ಆರಂಭವಾಗುತ್ತಿತ್ತು. `ಜನ ಸೇವೆಯೇ ದೇವರ ಸೇವೆ' ಇದು ಬೆಂಗಳೂರಿನ ವಿಧಾನಸೌಧ ಮುಂಭಾಗದಲ್ಲಿ ಬರೆದಿರುವ ಸರಕಾರದ ಧ್ಯೇಯ ವಾಕ್ಯ. ಅದನ್ನು ಹೀಗೆ ಬದಲಾಯಿಸಬಹುದು, `ಬಿಡುವಿದ್ದರೆ ಜನರ ಸೇವೆ'.
ವರದಿಯ ವಿವರಗಳು |
 |
ಕೃಪೆ : ಉದಯವಾಣಿ ವರದಿಗಾರರು : ಸೀತಾ ಎ ಉಡುಪಿ
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|