ವಿಚ್ಛೇದಿತ ಮುಸ್ಲಿಂ ಮಹಿಳೆಯೂ ಜೀವನಾಂಶ ಪಡೆಯಲು ಅರ್ಹ |
ಪ್ರಕಟಿಸಿದ ದಿನಾಂಕ : 2010-03-20
ವಿವಾಹ ವಿಚ್ಛೇದನಕ್ಕೆ ಒಳಗಾದ ಮುಸ್ಲಿಂ ಮಹಿಳೆ ಸಹ ತನ್ನ ಕುಟುಂಬ ನಿರ್ವಹಣೆಗಾಗಿ ಅಪರಾಧ ದಂಡ ಸಂಹಿತೆ ಅನ್ವಯ ಜೀವನಾಂಶ ಕೇಳಲು ಅರ್ಹಳಾಗಿರುತ್ತಾರೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ
ಕೊಚ್ಚಿ (ಪಿಟಿಐ): ವಿವಾಹ ವಿಚ್ಛೇದನಕ್ಕೆ ಒಳಗಾದ ಮುಸ್ಲಿಂ ಮಹಿಳೆ ಸಹ ತನ್ನ ಕುಟುಂಬ ನಿರ್ವಹಣೆಗಾಗಿ ಅಪರಾಧ ದಂಡ ಸಂಹಿತೆ ಅನ್ವಯ ಜೀವನಾಂಶ ಕೇಳಲು ಅರ್ಹಳಾಗಿರುತ್ತಾರೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಒಂದೊಮ್ಮೆ ಮುಸ್ಲಿಂ ಮಹಿಳೆ ವಿಚ್ಛೇದನಾ ಹಕ್ಕು ರಕ್ಷಣಾ ಕಾಯಿದೆ 1986ರ ಅನ್ವಯ ಆಕೆಯ ಮಾಜಿ ಪತಿ ಹಣ ಪಾವತಿ ಮಾಡಿದ್ದರೂ ಸಹ, ಅಪರಾಧ ದಂಡ ಸಂಹಿತೆ ಸೆಕ್ಷನ್ 125ರ ಅನ್ವಯ ಸಂಸಾರ ನಿರ್ವಹಣೆ ಭತ್ಯೆ ಕೋರಲು ಅರ್ಹಳಾಗಿದ್ದು, ಅದನ್ನು ನಿರಾಕರಣೆ ಮಾಡಲು ಬರುವುದಿಲ್ಲ ಎಂದು ಕೇರಳ ಹೈಕೋರ್ಟಿನ ವಿಭಾಗೀಯ ಪೀಠ ಹೇಳಿದೆ.
ನ್ಯಾಯ ಮೂರ್ತಿಗಳಾದ ಆರ್.ಬಸಂತ್ ಮತ್ತು ಎಂ.ಸಿ.ಹರಿರಾಣಿ ಅವರನ್ನು ಒಳಗೊಂಡು ವಿಭಾಗೀಯ ಪೀಠ ಮುಸ್ಲಿಂ ವಿವಾಹ ವಿಚ್ಛೇದನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೇಲಿನಂತೆ ಆದೇಶ ನೀಡಿದ್ದು, ಎಲ್ಲಿಯವರೆಗೆ ಆ ಮಹಿಳೆ ವಿಚ್ಛೇದಿತಳಾಗಿರು ವಳೋ ಅಲ್ಲಿಯವರೆಗೆ ಆಕೆ ಸಂಸಾರ ನಿರ್ವಹಣೆ ಭತ್ಯೆ ಕೋರಲು ಅರ್ಹಳಾಗಿರುತ್ತಾರೆ ಎಂದಿದ್ದಾರೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|