ಗೆಳತಿಯರಿಗೆ ವಿಷ ಪ್ರಾಶನ ಮಾಡಿದ ಬಾಲಕಿ |
ಪ್ರಕಟಿಸಿದ ದಿನಾಂಕ : 2010-03-20
ಪ್ರತಿಭಾ ಪೈಪೋಟಿಗೆ ಕೊನೆ ಹೇಳುವ ನಿಟ್ಟಿನಲ್ಲಿ ನಾಲ್ಕನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನಿಬ್ಬರು ಗೆಳತಿಯರಿಗೆ ಇಲಿ ಪಾಷಾಣ ನೀಡಿ ಕೊಂದಿರುವ ದುರಂತ ಕೋಲ್ಕತ್ತದಲ್ಲಿನ ಶಾಲೆಯೊಂದರಲ್ಲಿ ನಡೆದಿದ್ದು ಈ ಘಟನೆ ಪೊಲೀಸರು, ಪೋಷಕರು ಹಾಗೂ ಶಿಕ್ಷಕರನ್ನು ಆತಂಕಕ್ಕೀಡು ಮಾಡಿದೆ.
ಕೋಲ್ಕತ್ತ: ನಗರ ಹೊರವಲಯದ ದೇವೇಂದ್ರ ದ್ವಿವೇದಿ ಶಾಲೆಯಲ್ಲಿ ಗುರುವಾರ ಬಿಡುವಿನ ವೇಳೆ ಈ ದುರ್ಘಟನೆ ಜರುಗಿದೆ. 9 ವರ್ಷದ ಸ್ನೇಹಾ ಝಾ ತನ್ನದೇ ವಯಸ್ಸಿನ ತರಗತಿ ಸ್ನೇಹಿತೆಯರಾದ ಪಾಯೆಲ್ ಪಾಂಡೆ ಮತ್ತು ಜ್ಯೋತಿ ಸಿಂಗ್ ಅವರಿಗೆ ವಿಷ ಪ್ರಾಶನ ಮಾಡಿದ್ದಾಳೆ. ಆಕೆ ಹೀಗೇಕೆ ಮಾಡಿದಳೆಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡತೊಡಗಿದೆ.
ಮೃತರ ಪೋಷಕರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಬಾಲಕಿಯರು ಸಾಯುವ ಮುನ್ನ ನೀಡಿದ ಹೇಳಿಕೆಯಲ್ಲಿ ಸ್ನೇಹಾ ತಮಗೆ ಇಲಿ ಪಾಷಾಣ ನೀಡಿರುವುದಾಗಿ ತಿಳಿಸಿದ್ದು ಅರೆಪ್ರಜ್ಞಾವಸ್ಥೆಯಲ್ಲಿ ಚಿಂತಾಜನಕವಾಗಿದ್ದ ಅವರನ್ನು ಕೂಡಲೇ ಎಂ.ಆರ್. ಬಂಗೂರ್ ಆಸ್ಪತ್ರೆಗೆ ದಾಖಲಿಸಿದರೂ, ಕೇವಲ ಒಂದು ತಾಸಿನಲ್ಲೇ ಅಸುನೀಗಿದ್ದಾರೆ. ತರಗತಿಯಲ್ಲಿ ಹೆಚ್ಚಿನ ಅಂಕ ಪಡೆಯುತ್ತಿದ್ದ ತನ್ನಿಬ್ಬರೂ ಗೆಳತಿಯರಿಗೆ ಕಡಿಮೆ ಅಂಕ ಬರುತ್ತಿದ್ದ ಸ್ನೇಹ ವಿಷ ನೀಡಿ ಕೊಂದಿರುವುದಾಗಿ ಪೋಷಕರು ದೂರಿದ್ದು ಪೊಲೀಸರು ಈ ಪ್ರಕರಣದ ತನಿಖೆಯನ್ನು ಬಾಲಾಪರಾಧ ವಿಭಾಗಕ್ಕೆ ವಹಿಸುವ ಚಿಂತನೆ ಮಾಡಿದ್ದಾರೆ
ವರದಿಯ ವಿವರಗಳು |
 |
ಕೃಪೆ : ಪ್ರಜಾವಾಣಿ ವಾರ್ತೆ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|