ರಂಗಕರ್ಮಿ ಬಿ ಜಯಶ್ರೀ ,ಜಾವೇದ್‌ಅಖ್ತರ್, ಅಯ್ಯರ್ ರಾಜ್ಯಸಭೆಗೆ ನಾಮಕರಣ |
ಪ್ರಕಟಿಸಿದ ದಿನಾಂಕ : 2010-03-20
ಕರ್ನಾಟಕದ ರಂಗಕರ್ಮಿ ಬಿ ಜಯಶ್ರೀ ಸೇರಿದಂತೆ ಐವರನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಶುಕ್ರವಾರ ರಾಜ್ಯಸಭೆಗೆ ನಾಮಕರಣ ಮಾಡಿದ್ದಾರೆ.
ನವದೆಹಲಿ (ಐಎಎನ್‌ಎಸ್): ಕರ್ನಾಟಕದ ರಂಗಕರ್ಮಿ ಬಿ ಜಯಶ್ರೀ, ಗೀತ ರಚನಕಾರ ಜಾವೇದ್ ಅಖ್ತರ್, ಮಾಜಿ ಕೇಂದ್ರ ಸಚಿವ ಮಣಿಶಂಕರ ಅಯ್ಯರ್ ಸೇರಿದಂತೆ ಐವರನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಶುಕ್ರವಾರ ರಾಜ್ಯಸಭೆಗೆ ನಾಮಕರಣ ಮಾಡಿದ್ದಾರೆ.
ಸಂಸತ್‌ನ ಮೇಲ್ಮನೆಗೆ ನಾಮಕರಣಗೊಂಡಿರುವ ಇತರ ಇಬ್ಬರೆಂದರೆ ರಾಮ್ ದಯಾಳ್ ಮುಂಡಾ, ಬಾಲಚಂದ್ರ ಮುಂಗೇಕರ್ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ನಾಮಕರಣಗೊಂಡ ಸದಸ್ಯರ ನಿವೃತ್ತಿಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಹೊಸದಾಗಿ ನಾಮಕರಣ ಮಾಡಲಾಗಿದೆ.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|