| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ವಿರೋಧಗಳ ನಡುವೆ ಗೋಹತ್ಯೆ ನಿಷೇಧ ಕಾಯ್ದೆಗೆ ಅಂಗೀಕಾರ |
ಪ್ರಕಟಿಸಿದ ದಿನಾಂಕ : 2010-03-20
ಬೆಂಗಳೂರು, ಮಾ. ೧೯: ತೀವ್ರ ಗದ್ದಲ ಮತ್ತು ವಿರೋಧದ ನಡುವೆಯೂ ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆಯನ್ನು ನಿಷೇಧಿಸುವ ಕಾಯ್ದೆಗೆ ರಾಜ್ಯ ಸರಕಾರ ವಿಧಾನಸಭೆಯಲ್ಲಿ ಶುಕ್ರವಾರ ಧ್ವನಿಮತದ ಅಂಗೀಕಾರ ಪಡೆದುಕೊಂಡಿದೆ.
ಪ್ರತಿಪಕ್ಷಗಳಾದ ಕಾಂಗ್ರೆಸ್-ಜೆಡಿಎಸ್‌ನ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ನಡೆಸುತ್ತಿದ್ದಾಗ್ಯೂ ಲೆಕ್ಕಿಸದೆ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-೨೦೧೦’ನ್ನು ಧ್ವನಿಮತಕ್ಕೆ ಹಾಕಿದರು. ಇದನ್ನು ವಿರೋಧಿಸಿ ಧರಣಿ ನಿರತರು ವಿಧೇಯಕದ ಪ್ರತಿಯನ್ನು ಹರಿದು ವಿಧಾನಸಭೆಯಲ್ಲಿ ತೂರಾಡಿದರು. ಆಡಳಿತ ಮತ್ತು ಪ್ರತಿಪಕ್ಷಗಳ ಶಾಸಕರ ನಡುವೆ ಮಾತಿನ ಚಕಮಕಿ ವ್ಯಾಪಕವಾಗಿತ್ತು. ಆದಾಗ್ಯೂ ವಿಧೇಯಕ ಅಂಗೀಕಾರಗೊಂಡು ಕಾಯ್ದೆಯಾಗಿದೆ ಎಂದು ಸಭಾಧ್ಯಕ್ಷರು ಘೋಷಣೆ ಮಾಡಿದರು.
ಪ್ರತಿಪಕ್ಷಗಳ ಶಾಸಕರು ಬಹುಸಂಖ್ಯಾತರ ಆಹಾರ ಪದ್ಧತಿಯನ್ನು ಕಸಿದುಕೊಳ್ಳಲು ಮುಂದಾಗಿರುವ ಕೋಮುವಾದಿ ಸರಕಾರಕ್ಕೆ ಧಿಕ್ಕಾರ. ರೈತ ವಿರೋಧಿ ಮತ್ತು ಜನ ವಿರೋಧಿ ಸರಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸದನದ ನಡವಳಿಗಳು ಸಂವಿಧಾನಿಕ ನಡೆಯುತ್ತಿಲ್ಲ. ಸಂವಿಧಾನ ಬಾಹಿರವಾಗಿ ಸದಸ್ಯರ ಅಭಿಪ್ರಾಯಗಳನ್ನು ಪರಿಗಣಿಸದೆ ಮಸೂದೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಪ್ರತಿಪಕ್ಷಗಳ ಸದಸ್ಯರು ದೂರಿದರು.
‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-೨೦೧೦’ವನ್ನು ಸದನದಲ್ಲಿ ಪಶುಸಂಗೋಪನಾ ಸಚಿವ ರೇವು ನಾಯಕ್ ಬೆಳಮಗಿ ಬೋಜನ ವಿರಾಮದ ನಂತರ ಸದನಕ್ಕೆ ಪರಿಚಯಿಸಿದರು. ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ವಿಧೇಯಕವನ್ನು ಧ್ವನಿಮತದ ಮೂಲಕ ಅಂಗೀಕರಿಸಿದರು.
‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕದ ಕುರಿತು ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ಮುಖಂಡ ಸಿದ್ಧರಾಮಯ್ಯ, ರಾಜ್ಯ ಸರಕಾರ ಅಸಂವಿಧಾನಿಕವಾಗಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹುಸಂಖ್ಯಾತರ ಆಹಾರ ಪದ್ಧತಿಯ ಮೇಲೆ ದಾಳಿ ಮಾಡಲು ಸರಕಾರ ಹೊರಟಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೋವು ಗಂಜಳ, ಸಗಣಿಯ ಗಂಧ-ಗಾಳಿ ಅರಿಯದ ಜನರು ಈ ಕಾಯ್ದೆ ಜಾರಿಗೆ ತರಲು ಹುನ್ನಾರ ನಡೆಸಿದ್ದಾರೆ. ಒಂದು ಸಮುದಾಯದ ಮೇಲೆ ದ್ವೇಷ ಸಾಧಿಸುವ ಉದ್ದೇಶದಿಂದ ಮಸೂದೆಯನ್ನು ತರಾತುರಿಯಲ್ಲಿ ತರಲಾಗುತ್ತಿದೆ. ಇದರಿಂದ ಚರ್ಮೋದ್ಯಮದ ಮೇಲೆ ಆಧಾರವಾಗಿರುವ ಜನರು ನಿರುದ್ಯೋಗಿಗಳಾಗುತ್ತಾರೆ. ಮಸೂದೆಯಲ್ಲಿ ಅವರಿಗೆ ಯಾವುದೇ ಪರ್ಯಾಯಗಳನ್ನು ಸೂಚಿಸಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿದರು.
ದೇಶದ ಯಾವುದೇ ರಾಜ್ಯದಲ್ಲಿಯೂ ಇಲ್ಲದ ಮಸೂದೆಯನ್ನು ಬಿಜೆಪಿ ಸರಕಾರ ಜಾರಿಗೆ ತರಲುವ ಮೂಲಕ ಹಿಟ್ಲರ್ ರಾಜ್ಯ ಸ್ಥಾಪಿಸುವ ಹುನ್ನಾರ ನಡೆಸಿದೆ. ಇದರಿಂದ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ವಾಗುತ್ತದೆ. ರಾಜ್ಯದಲ್ಲಿನ ಸೌಹಾರ್ದತೆಗೆ ಧಕ್ಕೆಯುಂಟಾಗುತ್ತದೆ. ಈಗಾಗಲೇ ಆತಂಕದಲ್ಲಿ ಬದುಕು ನಡೆಸುತ್ತಿರುವ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಸರಕಾರ ಮಸೂದೆ ಜಾರಿಗೆ ತರುತ್ತಿದೆ. ಇದರ ವಿರುದ್ಧ ಜನತೆ ಸಿಡಿದೇಳುತ್ತಾರೆ. ಸರಕಾರ ಮಸೂದೆಯನ್ನು ಹಿಂಪಡೆಯಬೇಕು ಎಂದು ಬಲವಾಗಿ ಸಿದ್ಧರಾಮಯ್ಯ ಆಗ್ರಹಿಸಿದರು.
ಜನತೆ ಕಾಯ್ದೆಯನ್ನು ವಿರೋಧಿಸಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರ ಜನರ ಭಾವನೆಗಳಿಗೆ ಗೌರವ ಕೊಡಬೇಕು. ತಮ್ಮ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತರಲು, ಸಂಘ ಪರಿವಾರದವರನ್ನು ತೃಪ್ತಿಗೊಳಿಸುವ ಸಲುವಾಗಿ ಬಿಜೆಪಿ ಜಾರಿಗೊಳಿಸುತ್ತಿದೆ ಎಂದು ಅವರು ಟೀಕಿಸಿದರು. ಕಾಯ್ದೆಗೆ ಅಂಗೀಕಾರ ದೊರೆತ ನಂತರ ಗದ್ದಲ ಮುಂದುವರಿದಿದ್ದರಿಂದ ಸಭಾಧ್ಯಕ್ಷರು ಕಲಾಪವನ್ನು ಅನಿದೀಷ್ಟಾವಧಿಗೆ ಮುಂದೂಡಿದರು.
ಸದನದ ಹೊರಗೆ ಮಾತನಾಡಿದ ಸಿದ್ದರಾಮಯ್ಯ, ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದರಲ್ಲದೆ, ಸರಕಾರ ಕಳುಹಿಸುವ ಕಾಯ್ದೆಗೆ ಸಹಿ ಹಾಕದಂತೆ ರಾಜ್ಯಪಾಲರಿಗೆ ದೂರು ನೀಡುವುದಾಗಿ ತಿಳಿಸಿದರು.
ಎಲ್ಲರಿಗೂ ಹಾಲು ಕೊಡುವ ಗೋ ಮಾತೆಯ ರಕ್ಷಣೆಯಾಗಬೇಕಿದೆ. ಈ ಮೊದಲು ಜಾರಿಯಲ್ಲಿದ್ದ ೧೯೬೪ರ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಲ್ಲಿ ಒಂದು ಸಾವಿರ ರೂಪಾಯಿ ದಂಡ ಮತ್ತು ಆರು ತಿಂಗಳು ಶಿಕ್ಷೆಯಿತ್ತು. ಅದನ್ನು ಹೆಚ್ಚಿಸಿ ೫೦ ಸಾವಿರ ರೂಪಾಯಿಗಳವರೆಗೆ ದಂಡ ಮತ್ತು ೭ ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶ ನೀಡಲಾಗಿದೆ. ಸಕ್ಷಮ ಪ್ರಾಧಿಕಾರಿಯನ್ನಾಗಿ ತಹಸಿಲ್ದಾರ್‌ರನ್ನು ನಿಯೋಜಿಸಲಾಗಿದೆ. ತನಿಖೆ ಮತ್ತು ತಪಾಸಣೆಯ ಅಧಿಕಾರವನ್ನು ಪಿಎಸ್‌ಐಗೆ ನೀಡಲಾಗಿದೆ. ಉಪವಿಭಾಗಾಧಿಕಾರಿ, ಅನಂತರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ -ಸಚಿವ ರೇವುನಾಯಕ ಬೆಳಮಗಿ
ನೂತನ ಕಾಯ್ದೆ ದನದ ಜಾತ್ರೆಗಳಿಗೆ ಜಾನುವಾರುಗಳನ್ನು ಸಾಗಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ. ಗೋಹತ್ಯೆ ನಿಷೇಧವಾದರೆ ಕುರಿ, ಕೋಳಿ ಮಾಂಸದ ಬೆಲೆ ಗಗನಕ್ಕೇರಿ ಸಾಮಾನ್ಯರಿಗೆ ಎಟುಕದಂತಾಗುತ್ತದೆ. -ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ
ಗೋಹತ್ಯೆ ನಿಷೇಧ ಕಾಯ್ದೆಗೆ ಮುಸಲ್ಮಾನರು ಎಂದೂ ವಿರೋಧ ವ್ಯಕ್ತಪಡಿಸಿಲ್ಲ. ದನದ ಮಾಂಸವನ್ನು ಮುಸಲ್ಮಾನರು ಮಾತ್ರ ತಿನ್ನುವುದಿಲ್ಲ. ದನದ ಮಾಂಸ ರಫ್ತು ಮಾಡುವವರು ಮುಸಲ್ಮಾನರಲ್ಲ. ಉತ್ತರ ಪ್ರದೇಶದಲ್ಲಿ ಬೃಹತ್ ಗಾತ್ರದ ಗೋಮಾಂಸ ಶೀಥಲೀಕರಣ ಘಟಕದ ಪಾಲುದಾರರು ಬಿಜೆಪಿ ಹಿರಿಯ ಮುಖಂಡರು ಮತ್ತು ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ. -ಕಾಂಗ್ರೆಸ್‌ನ ರೋಷನ್‌ಬೇಗ್
ಜಾನುವಾರು ಹತ್ಯೆ ಪ್ರತಿಬಂಧಕ ೧೯೬೪ರ ಕಾಯ್ದೆ ಉದ್ದೇಶವನ್ನು ಈಡೇರಿಸುವಲ್ಲಿ ವಿಫಲವಾಗಿತ್ತು. ಅದಕ್ಕಾಗಿ ಜಾನುವಾರು ಎಂಬ ಪದಕ್ಕೆ ಸ್ಪಷ್ಟ ಅರ್ಥ ನೀಡುವ ಮತ್ತು ಉದ್ದೇಶ ಹಾಗೂ ಶಿಕ್ಷೆಯ ಬಗ್ಗೆ ಸ್ಪಷ್ಟತೆ ಇರುವ ೨೦೧೦ರ ಕಾಯ್ದೆಯನ್ನು ರೂಪಿಸಲಾಗಿದೆ. -ಗೃಹ ಸಚಿವ ವಿ.ಎಸ್.ಆಚಾರ್ಯ
ಹಿಂದುಗಳು ಹಂದಿಯನ್ನೂ ‘ವರಹಾ’ ಎಂದು ಪೂಜಿಸುತ್ತಾರೆ. ಹಾಗಿದ್ದರೆ ಹಂದಿ ಹತ್ಯೆಯನ್ನು ನಿಷೇಧಿಸಿ. ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ದನದ ಮಾಂಸವನ್ನು ತಿನ್ನತ್ತಿದ್ದರು. ಮನೆಗೆ ಅತಿಥಿಗಳು ಬಂದಾಗ ಕೊಬ್ಬಿದ ದನವನ್ನು ಕಡಿದು ಭಕ್ಷ ತಯಾರಿಸುತ್ತಿದ್ದರು. ಬಿಜೆಪಿಯವರು ನಂಬುವ ಸ್ವಾಮೀ ವಿವೇಕಾನಂದರೆ ಒಮ್ಮೆ ‘ದನ ತಿನ್ನದವ ಉತ್ತಮ ಹಿಂದುವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು’ -ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್
ಕುರಿ ಮಾಂಸ ಸಾಗಾಣಿಕೆ ಮಾಡಿದರು ಬಂಧಿಸುವ ಈ ಕಾಯ್ದೆ ಬೇಕಿದೆಯೇ. ಕಾಯ್ದೆ ಜಾರಿಯಾದರೆ ಇತರ ಮಾಂಸದ ಬೆಲೆ ೪ ಪಟ್ಟು ಹೆಚಾಗಲಿದೆ. ಅಲ್ಪಸಂಖ್ಯಾತರು, ಬಡವರು ತೊಂದರೆಗೆ ಒಳಗಾಗುತ್ತಾರೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ತೀವ್ರತರವಾದ ಚಳವಳಿ ನಡೆಯಲಿದೆ. -ಜೆಡಿಎಸ್ ಸದಸ್ಯ ಬಂಡೇಪ್ಪ ಕಾಶೇಂಪುರ್
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-20 00:00:00
|
|
| ಆಫಾಖ್ ನಾಗುರು , ದುಬೈ | 2010-03-21 | | ಹಲವು ವಿರೋದಗಳ ನಡುವೆಯು ತೊಗಾಡಿಯಾವನ್ನು (ಗೋ ಮಾಂಸ) ಕರ್ನಾಟಕದಲ್ಲಿ ನಿಷೇದಿಸಲಾಯಿತು. ಇನ್ನಾದರು ಗೋ ಸಾಗಾಟದ ಹೆಸರಿನಲ್ಲಿ ಅಮಾಯಕ ಯುವಕರು ಚಡ್ಡಿಗಳ ಗೂಂಡಾಗಿರಿಯಿಂದ ತಪ್ಪಿದಂತಾಗಿದೆ. ಗೋಹತ್ಯೆ ನಿಷೇದಿಸಿದ್ದು ಈ ಎಡ್ಡಿ ಹಾಗು ಚಡ್ಡಿಗೆ ಖಂಡಿತವಾಗಿಯು ಗೋವಿನ ಮೇಲಿರುವ ಪ್ರೀತಿಯಿಂದಲ್ಲ ಪ್ರತ್ಯೇಕವಾಗಿ ಬಹುಸಂಖ್ಯಾತರ ಅಹಾರ ಪದ್ದತಿಯನ್ನು ಹಾಗು ಸಂಘಪರಿವಾರದ ಕರಾಳ ಅಜೆಂಡಾವನ್ನು ಜಾರಿಗೋಳಿಸುವುದೆ ಪ್ರಜಾಪ್ರಭುತ್ವ ನಾಡಿನಲ್ಲಿ ಚಡ್ಡಿಗಳ ಮುಖ್ಯ ಉದ್ದೇಶವಾಗಿದೆ. ಈ ನೀಚರಿಗೆ ಮನುಷ್ಯ ಜನಾಂಗದ ಮೇಲೆ ಇಲ್ಲದ ಪ್ರೀತಿ ಆ ಗೋವಿನ ಮೇಲೆಕೆ ಏನ್ನುವುದು ಅರ್ಥವಾಗುದಿಲ್ಲ. ಕರ್ನಾಟಕದಲ್ಲಿ ಗೋಹತ್ಯೆಯನ್ನು ನಿಷೇದಿಸಿ ಪರೊಕ್ಶವಾಗಿ ಚಡ್ಡಿಗಳಿಗೆ ನರಹತ್ಯೆಗೆ ದಾರಿ ಮಾಡಿಕೊಟ್ಟಿದಂತಾಗಿದೆ. ಇದು ಬಡವರ ಆಹಾರವನ್ನು ಕಿತ್ತುಕೊಳ್ಳುವ ಚಡ್ಡಿ ಸರ್ಕಾರದ ಮಾನವ ವಿರೋಧಿ ಕ್ರಮವಾಗಿರುವುದರಿಂದ ಎಲ್ಲರು ಒಗ್ಗಾಟ್ಟಗಿ ಎದುರಿಸಬೆಕಾಗಿರುವುದು ಅಗತ್ಯವಾಗಿದೆ. ಕೆಲವು ದಿನದ ಹಿಂದೆ ಹಿಂದು ರಾಷ್ಟ್ರ ಹಾಗು ಪ್ರಜಾಪ್ರಭುತ್ವ ನೇಪಾಳದಲ್ಲಿ ಹಿಂದು ಧರ್ಮದ ದೇವರ ಹೆಸರಿನಲ್ಲಿ ದೇವರನ್ನು ಸಂತೋಷಪಡಿಸಲು ಲಕ್ಷಗಟ್ಟಲೆ ಗೋವನ್ನು ಹತ್ಯೇ ಮಾಡಲಾಯಿತು. ಈ ವಿಶಿಷ್ಟ ಆಚರಣೆಯನ್ನು ನೋಡಲು ಹಲವು ಭಾರತೀಯ ಹಿಂದು ಗೋವು ಪ್ರಿಯರು ಭಾಗವಹಿಸಿದ್ದರು. ಈ ರೀತಿಯ ಗೋಹತ್ಯೆಯನ್ನು ಚಡ್ಡಿಗಳು ಹಾಗು ನಿತ್ಯಾನಂದ ಸ್ವಾಮಿಯಂತವರು ಯಾಕಾಗಿ ವಿರೋಧಿಸಿಲ್ಲ???? ಇಂತಹ ಗೋವಿನ ಮಾರಣಹೋಮ ನಡೆಸಲು ಹಿಂದು ಧರ್ಮದಲ್ಲಿ ಅವಕಾಶವಿದೆಯೇ??? ಇದು ಹಿಂದು ಧರ್ಮಕ್ಕೆ ವಿರೋಧವಾಗಿಲ್ಲವೇ???? ಖಂಡಿತವಾಗಿಯು ಸನಾತನ (ಹಿಂದು) ಧರ್ಮದ ಗ್ರಂಥದಲ್ಲಿ ಗೋ ಹತ್ಯೆಯ ವಿರುದ್ದ ಯಾವುದೆ ರೀತಿಯ ಉಲ್ಲೇಖವಿಲ್ಲ ಎನ್ನುವುದು ಮೊದಲು ತಿಳಿಯಬೇಕಾಗಿದೆ.
ಮನುಸ್ಮ್ರತಿಯಲ್ಲಿ ಗೋಮಾಂಸ ತಿನ್ನುವುದರ ಬಗ್ಗೆ ಇರುವ ಕೆಲವು ಉಲ್ಲೇಖಗಳನ್ನು ಅವಲೋಕಿಸೋಣ.
1. ಪ್ರತಿ ದಿನವೂ ತಿನ್ನಲು ಯೋಗ್ಯವಾದ ಪ್ರಾಣಿಗಳನ್ನೇ ಕೊಂದು ತಿಂದರೆ ಅದು ಅಪರಾದವಲ್ಲ, ಎಕೆಂದರೆ ತಿನ್ನುವವರನ್ನು ಪ್ರಾಣಿಗಳನ್ನು ಭಗವಂತನೇ ಸ್ರಷ್ಟಿ ಮಾಡಿದ್ದಾನೆ. (ಅಧ್ಯಾಯ-5,30)
2. ಯಜ್ನಕ್ಕಾಗಿ ಪಶುವನ್ನು ಕೊಂದು ಮಾಡಿದ ಮಾಂಸ ಭಕ್ಷಣವು \"ದೈವಿಕ ರೀತಿ\" ಯೆಂದು ಹೇಳಲ್ಪಟ್ಟಿದೆ. (ಅಧ್ಯಾಯ-5,31)
3. ಯಜ್ನಗಳಿಗಾಗಿಯೇ ಪರಮಾತ್ಮನು ಈ ಪಶುಗಳನ್ನು ಸ್ರಷ್ಟಿಸಿದ್ದಾನೆ. ಈ ಎಲ್ಲವೂ ಯಜ್ನದ ಆಚರಣೆಗೆಂದೇ ಇದೆ. ಆದ್ದರಿಂದ ಯಜ್ನದಲ್ಲಿ ಮಾಡುವ ಪಶುವಧೆಯು ಪಾಪವಲ್ಲ. (ಅಧ್ಯಾಯ-5, 39)
4. ಮಂತ್ರಗಳ ಮೂಲಕ ಯಜ್ನಾದಿಗಳಲ್ಲಿ ಪವಿತ್ರವಾಗದೇ ಇದ್ದ ಮಾಂಸವನ್ನು ಭ್ರಾಹ್ಮಣನು ಎಂದಿಗೂ ತಿನ್ನಕೂಡದು. ಮಂತ್ರಗಳಿಂದ ಸಂಪ್ರೋಕ್ಷಿತವಾದ ಹಾಗು ಶಾಸ್ತ್ರವಿಧಿ ಪ್ರಕಾರ ಶುದ್ದಿಗೊಳಿಸಲಾದ ಪಶು ಮಾಂಸವನ್ನು ಭ್ರಾಹ್ಮಣರು ತಿನ್ನಬಹುದು. (ಅಧ್ಯಾಯ- 5,36)
ಅದೇ ರೀತಿಯಲ್ಲಿ ಸ್ವಾಮಿ ವಿವೇಕಾನಂದರವರ ಪ್ರಕಾರ \"ದನದ ಮಾಂಸವನ್ನು ತಿನ್ನದೇ ಇರುವವನು ಒಬ್ಬ ಉತ್ತಮ ಹಿಂದುವಾಗಲು ಸಾದ್ಯವಿಲ್ಲ\" ಎನ್ನುವುದಾಗಿತ್ತು.
ಹಾಗು ಮನುಸ್ಮ್ರತಿಯಲ್ಲಿರುವ ಮೇಲಿನ ಉಲ್ಲೇಖಗಳನ್ನು ಗಮನಿಸಿದಾಗ ಹಿಂದು ಧರ್ಮದಲ್ಲಿ ಗೋಬಕ್ಷಣೆಗೆ ಯಾವ ರೀತಿಯಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗಿದೆ ಎನ್ನುವುದನ್ನು ತಿಳಿಯಬಹುದು. ಆದರೆ ಈ ಚಡ್ಡಿಗಳಿಗೆ ಅರ್ಥವಾಗದೇ ಇರಲು ಕಾರಣವೇನು??? \"ಗೋವಿನ ಮೇಲಿರುವ ಪ್ರೀತಿಯೊ ಅಥವಾ ನರ ಹತ್ಯೇಗೆ ದಾರಿಯೋ\"
|
| hameed, manjeshwar | 2010-03-21 | | All karnataka citizens are welcomed to manjeshwar(border of karnataka)and eat cow meat as you like...... here no eddiee .... no chaddie..... just order one plate thogadiya, then bearer will serve you hot beef sukka. Longlive beef meat...... |
| a,j nitte, doha qatar | 2010-03-20 | | innu prathi galliyallu beef sale madutthare ..innu mele beef ge praice kammi aaga bahudhu next chunavane yalli b.j.p mule seruthadhe 100% |
| SALAM MANGALORE, KUWAIT | 2010-03-20 | | ಒಂದು ಸಮುದಾಯದ ಮೇಲೆ ದ್ವೇಷ ಸಾಧಿಸುವ ಉದ್ದೇಶದಿಂದ ಮಸೂದೆಯನ್ನು ತರಾತುರಿಯಲ್ಲಿ ತರಲಾಗುತ್ತಿದೆ.
ಸ್ವಾಮೀ ವಿವೇಕಾನಂದರೆ ಒಮ್ಮೆ ‘ದನ ತಿನ್ನದವ ಉತ್ತಮ ಹಿಂದುವಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು’
ಉತ್ತರ ಪ್ರದೇಶದಲ್ಲಿ ಬೃಹತ್ ಗಾತ್ರದ ಗೋಮಾಂಸ ಶೀಥಲೀಕರಣ ಘಟಕದ ಪಾಲುದಾರರು ಬಿಜೆಪಿ ಹಿರಿಯ ಮುಖಂಡರು ಮತ್ತು ಆ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂಬುದನ್ನು ಮರೆಯಬೇಡಿ
ಜನತೆ ಕಾಯ್ದೆಯನ್ನು ವಿರೋಧಿಸಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರ ಜನರ ಭಾವನೆಗಳಿಗೆ ಗೌರವ ಕೊಡಬೇಕು. ತಮ್ಮ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತರಲು, ಸಂಘ ಪರಿವಾರದವರನ್ನು ತೃಪ್ತಿಗೊಳಿಸುವ ಸಲುವಾಗಿ ಬಿಜೆಪಿ ಜಾರಿಗೊಳಿಸುತ್ತಿದೆ
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹುಸಂಖ್ಯಾತರ ಆಹಾರ ಪದ್ಧತಿಯ ಮೇಲೆ ದಾಳಿ ಮಾಡಲು ಸರಕಾರ ಹೊರಟಿದೆ
|
| Ronald, Udupi | 2010-03-20 | | Eating and possession of beef is a crime? State BJP govt has proved beyond doubt that it is communal, Fanatic and anti minority! They are imposing rule and law on food habits!? |
| gowmamsa.priya, uppinangadi | 2010-03-20 | | kamunal yaddiiiiiiiiiige dikkkkara... |
|
|
| »ಶೋಭಾ ತಂದೆ ವೈಕುಂಠಕ್ಕೆ ಯಡ್ಡಿ ಪಟಾಲಂ ಹಾಜರ್ | | »ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ' | | »ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು? | | »ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ | | »ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated) | | »ಮೈಸೂರು: ತೆರೆದ ತೊಟ್ಟಿಗೆ ಬಿದ್ದು ಆರು ವರ್ಷದ ಬಾಲಕ ಸಾವು | | »ಮಂಡ್ಯ: ನಗರಸಭೆ ಸಾವಾನ್ಯ ಸಭೆಗೆ ಅಡ್ಡಿ: ಜೆಡಿಎಸ್‌ನ ನಾಲ್ವರ ಅವಾನತು | | »ತುಮಕೂರಿನಲ್ಲಿ ಹೆಣ್ಣು ಮಕ್ಕಳ ಪತ್ತೆ: ಅನಾಥ ಮಕ್ಕಳ ಹಿಂದೆ ಭಿಕ್ಷಾಟನಾ ಜಾಲದ ಶಂಕೆ | | »ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ | | »ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ | | »ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ | | »ಬೋಧಿ ದಮ್ಮ ಬಂತೇಜಿ ಬಿಡುಗಡೆಗೆ ಆಗ್ರಹಿಸಿ ಧರಣಿ | | »ಗಣಿಗಾರಿಕೆ ಸ್ಥಗಿತ : 20,000 ಕೋಟಿ ರು ನಷ್ಟ | | »ಕೆ.ಎಸ್.ಸಿ.ಎ. ಡೆಲ್ ಶಾಲಾ ಟೂರ್ನಿ ಬಳ್ಳಾರಿ ಶಾಲಾ ತಂಡ ಚಾಂಪಿಯನ್ | | »ಮಾಜಿ ಸಚಿವರ ಮೊಂಡು ವಾದ; ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ | | »ಕಾಂಗ್ರೆಸ್‌ನಂತೆ ನಾವು ಚಿಲ್ಲರೆ ರಾಜಕಾರಣ ಮಾಡಲ್ಲ: ಡಿ.ವಿ. ಸದಾನಂದ ಗೌಡ | | »ತಮಿಳುನಾಡು ರಾಜ್ಯಪಾಲ ರೋಸಯ್ಯರ ಸಂಬಂಧಿ ಮನೋಜ್ ಹತ್ಯೆ ಪ್ರಕರಣ: ಮೂವರು ವಶಕ್ಕೆ | | » ಬನ್ನೂರಮಠ ಲೋಕಾಯುಕ್ತ ಹುದ್ದೆ ನಿರಾಕರಣೆ: ರಾಜ್ಯ ಸರ್ಕಾರ ಯಾರ ಹೆಸರು ಶಿಫಾರಸು ಮಾಡಲಿದೆಂಬ ಕುತೂಹಲ | | »ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ | | »ಕುವೆಂಪು ವಿಶ್ವವಿದ್ಯಾಲಯದ 22ನೇ ವಾರ್ಷಿಕ ಘಟಿಕೋತ್ಸವ: ಕಷ್ಟ ಕಾರ್ಪಣ್ಯ; ಆದರೂ ಬಿಡಲಿಲ್ಲ ಚಿನ್ನದ ಬೇಟೆ | | »ನರಗುಂದ, ಅಥಣಿ ಬಂದ್: ಮೈಸೂರು, ಮಂಗಳೂರಿನಲ್ಲಿ ಆಕ್ರೋಶ | | »ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ.. | | »ಭಿಕ್ಷೆ ಎತ್ತಿದ ಹಣದಿಂದ ತುಮಕೂರಿನಲ್ಲಿ ರೇಣುಕಾ ಎಲ್ಲಮ್ಮ ದೇಗುಲ ನಿರ್ಮಿಸಿದ ಮಂಗಳಮುಖಿಯರು | | »ಅಶ್ಲೀಲ ಕಲಾಪಕ್ಕೆ ಸದನ ಬಲಿ | | »ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ | | »ವಿಧಾನಸೌಧದಲ್ಲಿ ಸಚಿವತ್ರಯರಿಂದ ಅಶ್ಲೀಲ ಚಿತ್ರ ವೀಕ್ಷಣೆ: ಸರಕಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ | | »ಹಾಸನ: ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ | | »ಬನ್ನೇರುಘಟ್ಟಕ್ಕೆ ಪಠಾಣ್, ಸಂದೀಪ್ ಪಾಟೀಲ್ ಭೇಟಿ | | »ಪಾವಗಡಕ್ಕೆ ಕುಡಿಯುವ ನೀರಿಗೆ ಆಗ್ರಹಿಸಿ ಪಾದಯಾತ್ರೆ: ‘ಬೆಂಗಳೂರು ಚಲೋ’ಗೆ ವಿದುಕ್ತ ಚಾಲನೆ | | »‘ಬ್ಲೂ ಫಿಲಂ’ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಶಾಸಕ ಸ್ಥಾನದಿಂದಲೂ ಅನರ್ಹಕ್ಕೆ ಒತ್ತಾಯ | | »ಶಾಸಕತ್ವ ಅನರ್ಹಗೊಳಿಸಲು ಆಗ್ರಹಿಸಿ ಸಿಪಿಐ ಧರಣಿ | | »ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ? | | »ನಾವೇಕೆ ಕ್ಷಮೆಯಾಚಿಸ್ಬೇಕು-ಡೀವಿ; ಕಳಂಕಿತರಿಗೆ ಬಿಜೆಪಿ ಬೆಂಬಲ | | »ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ | | »ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ 'ಕೈ' ಪ್ರತಿಭಟನೆ, ಪ್ರತಿಕೃತಿ ದಹನ | | »ಬಿಬಿಎಂಪಿ ಹಗರಣ:ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ | | »ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' 'ಹೌಸ್ ಫುಲ್ ಜರ್ನಿ' ಆರಂಭ: ರೈಲಿನಲ್ಲಿ ಅಮೆರಿಕ, ಆಸ್ಟ್ರಿಯಾದ 80 ಪ್ರವಾಸಿಗರು | | »ಅನುದಾನ ಬಿಡುಗಡೆಗೆ ಆಗ್ರಹಿಸಿ ಆಮರಣ ಉಪವಾಸ : ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು | | »ಯೋಗ ವಿಜ್ಞಾನ ಶಿಬಿರ: ಬಜೆಟ್‌ನಲ್ಲಿ ಯೋಗಕ್ಕೆ ವಿಶೇಷ ಒತ್ತು: ಸಿಎಂ | | »ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ: ಮಾಜಿ ಸಿಎಂ ಯಡಿಯೂರಪ್ಪ ನನ್ನ ಸಂಬಂಧಿಕರಲ್ಲ: ನ್ಯಾ. ಬನ್ನೂರಮಠ ( Update) | | »ಸದನದಲ್ಲಿ ಮೊಬೈಲ್ ಫೋನ್ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್ ಮಂತ್ರಿ ಸ್ಥಾನಕ್ಕೆ ರಾಜಿನಾಮೆ | | »ಹೂವಿನಹಡಗಲಿಯಲ್ಲಿ ಪ್ರತ್ಯೇಕ ದುರಂತ : ಅಪಘಾತದಲ್ಲಿ 8, ತೆಪ್ಪ ಮುಳುಗಿ 5ಸಾವು | | »ಆಧಾರ್ ಕಾರ್ಡ್‌ಗೆ ಲಂಚವೇ ಆಧಾರ: ಸರ್ಕಾರದಿಂದ ತನಿಖೆ ಭರವಸೆ | | »50 ಕೋಟಿ ಯುವಕರಿಗೆ ಕೌಶಲ ತರಬೇತಿ: ಖರ್ಗೆ | | »ಏಡ್ಸ್ ಜಾಗೃತಿ ಜಾಥಾಕ್ಕೆ ಡಾ.ಸಲೀಂ ಚಾಲನೆ | | »ಕಲ್ಲಡ್ಕ ಭಟ್ಟರ ಗಡಿಪಾರಿಗೆ ಒತ್ತಾಯ: ಸದನದಲ್ಲಿ ಕೋಲಾಹಲ; ವಿಪಕ್ಷದಿಂದ ಸಭಾತ್ಯಾಗ | | »ತರಕಾರಿ ಸೇವಿಸಿ; ರೋಗ ತಡೆಗಟ್ಟಿ: ಡಾ.ಎಂ.ಆರ್. ಹುಲಿನಾಯ್ಕರ್ | | »ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ: ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ | | »ಮಂಡ್ಯ: ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸೊಗಡು ಅನಾವರಣ | | »ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬ್ರಹ್ಮರಥೋತ್ಸವ | |