ಹೊಸದಿಲ್ಲಿ, ಮಾ.೧೯: ಕೇಂದ್ರ ಸರಕಾರದ ಉದ್ಯೋಗಿಗಳು ೨೦೧೦ರ ಜ.೧ರಿಂದ ಅನ್ವಯವಾಗುವಂತೆ ಶೇ.೮ರಷ್ಟು ತುಟ್ಟಿ ಭತ್ತೆಯನ್ನು ಹೆಚ್ಚಿಗೆ ಪಡೆಯಲಿದ್ದಾರೆ.
ಪ್ರಕೃತ ಕೇಂದ್ರ ನೌಕರರು ಹಾಗೂ ಪಿಂಚಣಿದಾರರು ಮೂಲವೇತನದ ಶೇ.೨೭ರಷ್ಟು ತುಟ್ಟಿ ಭತ್ತೆ ಪಡೆಯುತ್ತಿದ್ದು, ಶೇ.೮ರಷ್ಟು ವೃದ್ಧಿಸಲಾದ ನೌಕರರ ತುಟ್ಟಿ ಭತ್ತೆ ಹಾಗೂ ಪಿಂಚಣಿದಾರರ ತುಟ್ಟಿ ಭತ್ತೆ ಪರಿಹಾರದ ಹೆಚ್ಚುವರಿ ಕಂತನ್ನು ಬಿಡುಗಡೆಗೊಳಿಸಲು ಇಂದು ನಡೆದ ಸಂಪುಟ ಸಭೆ ನಿರ್ಧರಿಸಿದೆ.
ಅಗತ್ಯ ವಸ್ತುಗಳ ತೀವ್ರ ಬೆಲೆಯೇರಿಕೆಯ ಹಿನ್ನೆಲೆಯಲ್ಲಿ ತುಟ್ಟಿ ಭತ್ತೆಯ ಹೆಚ್ಚಳ ಮಾಡಲಾಗಿದೆಯೆಂದು ಸರಕಾರ ತಿಳಿಸಿದೆ.