| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಉಡುಪಿ: ಸ್ವಾತಂತ್ರ ಹೋರಾಟಗಾರ ಗಾಂಧಿವಾದಿ ಶಂಭು ಶೆಟ್ಟಿ ನಿಧನ |
ಪ್ರಕಟಿಸಿದ ದಿನಾಂಕ : 2010-03-20
ಉಡುಪಿ, ಮಾ.೧೯: ಜಿಲ್ಲೆಯ ಹಿರಿಯ ಸ್ವಾತಂತ್ರ ಹೋರಾಟಗಾರ ಬಿ.ಶಂಭು ಶೆಟ್ಟಿ ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗಿನ ಜಾವ ಬಂಟ್ಸ್ ಹಾಸ್ಟೆಲ್ ರಸ್ತೆಯ ಲ್ಲಿರುವ ಸ್ವಗೃಹದಲ್ಲಿ ನಿಧನ ರಾದರು. ಅವರಿಗೆ ೯೧ ವರ್ಷ ಪ್ರಾಯ ವಾಗಿತ್ತು. ಮೃತರು ಪತ್ನಿ ರತ್ನಾವತಿ ಹೆಗ್ಗಡ್ತಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
೧೯೪೦ರ ದಶಕದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿದ್ದ ಶಂಭು ಶೆಟ್ಟಿ, ಆರು ತಿಂಗಳು ಬೆಳಗಾವಿಯ ಹಿಂಡಲಗಿ ಮತ್ತು ಪುಣೆಯ ಯರವಾಡ ಜೈಲುಗಳಲ್ಲಿ ಕಠಿಣ ಶಿಕ್ಷೆಯ ಜೈಲು ವಾಸ ಅನುಭ ವಿಸಿದ್ದರು. ೧೯೪೨ರಲ್ಲಿ ಮೂಲ್ಕಿಯಲ್ಲಿ ‘ಚಲೇಜಾವ್’ ಚಳವಳಿಯಲ್ಲೂ ಭಾಗವಹಿಸಿದ್ದರು.
೧೯೧೮ರ ಆ.೩೦ರಂದು ಮೂಲ್ಕಿ ಬಪ್ಪನಾಡು ಗುತ್ತು ಮನೆತನದಲ್ಲಿ ಕುಡೆತ್ತೂರು ಮಾಗಂದಡಿ ಜಾರಪ್ಪ ಶೆಟ್ಟಿ ಹಾಗೂ ಮೂಲ್ಕಿ ಬಪ್ಪನಾಡು ಗುತ್ತು ಅಪ್ಪಿ ಶೆಡ್ತಿಯ ಮೊದಲ ಪುತ್ರನಾಗಿ ಜನಿಸಿದ ಶಂಭು ಶೆಟ್ಟಿ ೭ನೆ ವಯಸ್ಸಲ್ಲೇ ಸ್ವಾತಂತ್ರ ಚಳವಳಿಯಲ್ಲಿ ಭಾಗವಹಿಸಿದ್ದರು.
ಮೂಲ್ಕಿ ಪರಿಸರದಲ್ಲಿ ಅಸ್ಪಶತಾ ನಿವಾರಣೆ, ಮದ್ಯಪಾನ ನಿರೋಧ ಹಾಗೂ ಖಾದಿ ಪ್ರಚಾರದಂಥ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ೧೯೩೭ರಲ್ಲಿ ಜವಾಹರಲಾಲ್ ನೆಹರು ಮೂಲ್ಕಿಗೆ ಬಂದಿದ್ದಾಗ ಶಂಭು ಶೆಟ್ಟರ ಕಾರ್ಯತತ್ಪರತೆಯನ್ನು ಮೆಚ್ಚಿ ಬೆನ್ನು ತಟ್ಟಿದ್ದರು. ೧೯೪೦ರಿಂದ ೪೩ರವರೆಗೆ ಮುಲ್ಕಿ ಸರ್ಕಲ್ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಯಾಗಿಯೂ ಇವರು ಕೆಲಸ ಮಾಡಿದ್ದರು.
೧೯೪೧ರಲ್ಲಿ ಯುದ್ಧ ವಿರೋಧಿ ಪ್ರಚಾರಕ್ಕಾಗಿ ಉತ್ತರ ಕನ್ನಡದ ಕಾಸರಗೋಡಿನಲ್ಲಿ ಬ್ರಿಟಿಷರಿಂದ ಬಂಧನಕ್ಕೊಳಗಾದ ಶಂಭು ಶೆಟ್ಟರನ್ನು ಹಿಂಡಲಗಿ ಜೈಲಿಗೆ ತಳ್ಳ ಲಾಗಿತ್ತು. ೧೯೪೨ರಲ್ಲಿ ಮುಲ್ಕಿಯಲ್ಲಿ ‘ಕ್ವಿಟ್ ಇಂಡಿಯಾ’ ಚಳವಳಿ ಸಂಘ ಟಿಸುವಲ್ಲಿ ಶಂಭು ಶೆಟ್ಟಿ ಪ್ರಮುಖ ಪಾತ್ರ ವಹಿಸಿದ್ದರು.
೧೯೬೦ರ ದಶಕದಲ್ಲಿ ಊರಿಗೆ ಮರಳಿದ ಶಂಭುಶೆಟ್ಟರು ಶಿರ್ವದಲ್ಲಿ ಕೃಷಿಕರಾಗಿ ಜೀವನ ಸಾಗಿಸಿದ್ದರು. ೧೯೮೪ರಿಂದ ೮೯ರವರೆಗೆ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸದಸ್ಯರಾಗಿ, ಅವಿಭಜಿತ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿದ್ದರು. ಉಡುಪಿ ತಾಲೂಕು ಸ್ವಾತಂತ್ರ ಹೋರಾಟ ಗಾರರ ಸಂಘದ ಕಾರ್ಯದರ್ಶಿ ಹಾಗೂ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು.
ದೇಶದ ಸ್ವಾತಂತ್ರ ಹೋರಾಟ ದಲ್ಲಿ ಭಾಗವಹಿ ಸಿದ್ದಕ್ಕಾಗಿ ಅವರು ಇಂದಿರಾ ಗಾಂಧಿ ಹಾಗೂ ರಾಜೀವ ಗಾಂಧಿಯವರಿಂದ ಎರಡು ಬಾರಿ ತಾಮ್ರ ಪತ್ರ ಪಡೆದಿದ್ದರು. ಬಹು ಹೋರಾಟದ ಬಳಿಕ ೨೦೦೮ರ ಸ್ವಾತಂತ್ರ ದಿನದ ಸಂದರ್ಭದಲ್ಲಿ ಅವರು ರಾಷ್ಟ್ರಪತಿ ಯವರು ದೇಶದ ಸ್ವಾತಂತ್ರ ಹೋರಾಟಗಾರರಿಗೆ ನೀಡುವ ವಿಶೇಷ ಚಹಾ ಕೂಟದಲ್ಲಿ ಪತ್ನಿ ಯೊಂದಿಗೆ ಭಾಗವಹಿಸುವ ಅವಕಾಶ ಪಡೆದಿದ್ದರು.
ಶ್ರದ್ಧಾಂಜಲಿ: ಶಂಭು ಶೆಟ್ಟರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಇಂದು ಅಪರಾಹ್ಣ ಬೀಡಿನಗುಡ್ಡೆ ಚಿತಾಗಾರದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು. ಸರಕಾರ ಹಾಗೂ ಜಿಲ್ಲಾಡಳಿತದ ಪರವಾಗಿ ಅಪರ ಜಿಲ್ಲಾಧಿಕಾರಿ ಹಾಗೂ ಉಡುಪಿ ತಹಶೀಲ್ದಾರ್ ಭಾಗವಹಿಸಿ ಅಂತಿಮ ಗೌರವ ಸಲ್ಲಿಸಿದ್ದರು.
ನಗರಸಭಾ ಅಧ್ಯಕ್ಷ ದಿನಕರ ಶೆಟ್ಟಿ, ಮಾಜಿ ಶಾಸಕ ಯು.ಆರ್.ಸಭಾಪತಿ, ಹರಿಕೃಷ್ಣ ಪುನರೂರು, ಪ್ರದೀಪ್ ಕುಮಾರ್ ಕಲ್ಕೂರ್, ಪಿ.ಶಿವಾಜಿ ಶೆಟ್ಟಿ, ಶಾಂತಾರಾಮ ಶೆಟ್ಟಿ ಮೃತರ ಅಂತಿಮ ದರ್ಶನ ಪಡೆದರು.
ಸಂತಾಪ: ಬಿ.ಶಂಭು ಶೆಟ್ಟರ ನಿಧನಕ್ಕೆ ಮಾಜಿ ಸಂಸದ ವಿನಯಕುಮಾರ್ ಸೊರಕೆ, ನಗರಸಭಾ ಸದಸ್ಯ ನಿತ್ಯಾನಂದ ಒಳಕಾಡು, ಬಳಕೆದಾರರ ವೇದಿಕೆ ಸಂಚಾಲಕ ದಾಮೋದರ ಐತಾಳ್ ಸಂತಾಪ ಸೂಚಿಸಿದ್ದಾರೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|
|
|