ಮಂಗಳೂರು: ದುಷ್ಕೃತ್ಯದ ಸಂಚು: ಇಬ್ಬರ ಬಂಧನ: 1 ರಿವಾಲ್ವರ್ ಹಾಗೂ 9 ಮದ್ದುಗುಂಡು ವಶ |
ಪ್ರಕಟಿಸಿದ ದಿನಾಂಕ : 2010-03-20
ಮಂಗಳೂರು, ಮಾ.೧೯: ನಗರದಲ್ಲಿ ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಇಬ್ಬರನ್ನು ಎಸ್ಪಿ ವಿಶೇಷ ಪತ್ತೆದಳದ ಪೊಲೀಸರು ಇಂದು ಸಂಜೆ ಬಂಧಿಸಿದ್ದು, ಬಂಧಿತರಿಂದ ಒಂದು ರಿವಾಲ್ವರ್ ಹಾಗೂ ೯ ಸಜೀವ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರನ್ನು ಮಧ್ಯಪ್ರದೇಶದ ರಘುರಾಜ ಸಿಂಗ್ ಬಾಗಿಲ್ ಅಲಿಯಾಸ್ ಟಿಲ್ಲು (೨೭) ಹಾಗೂ ಗದಗದ ಶ್ರೀಕಾಂತ್(೨೫) ಎಂದು ಗುರುತಿಸಲಾಗಿದೆ.

ಖಚಿತ ಮಾಹಿತಿ ಮೇರೆಗೆ ಇಂದು ಸಂಜೆ ದಾಳಿ ನಡೆಸಿದ ಪ್ರಕಾಶ್ ನೇತೃತ್ವದ ಎಸ್ಪಿ ವಿಶೇಷ ಪತ್ತೆ ದಳದ ಪೊಲೀಸರು ಆರೋಪಿ ಗಳನ್ನು ಕಂಕನಾಡಿ ಗ್ರಾಮದ ಅಳಪೆ ರೈಲ್ವೆ ಗೇಟ್ ಬಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ರಘುರಾಜ ಸಿಂಗ್ ನಗರದ ಕಾರ್‌ಸ್ಟ್ರೀಟ್ ಬಳಿ ವಾಸ್ತವ್ಯವಿದ್ದು, ಇನ್ನೋರ್ವ ಆರೋಪಿ ಶ್ರೀಕಾಂತ್ ಮಾರ್ಮಿನಕಟ್ಟೆ ಬಳಿ ವಾಸ್ತವ್ಯವಿದ್ದ ಎನ್ನಲಾಗಿದೆ. ಆರೋಪಿಗಳು ನಗರದಲ್ಲಿ ದುಷ್ಕೃತ್ಯವನ್ನೆಸಗಲು ಸಂಚು ರೂಪಿ ಸಿದ್ದು, ಇದಕ್ಕಾಗಿ ಮಧ್ಯಪ್ರದೇಶದ ಗ್ವಾಲಿಯಾರ್‌ನಿಂದ ರಿವಾಲ್ವರನ್ನು ಖರೀಸಿದ್ದರು ಎನ್ನಲಾಗಿದೆ. ರಿವಾಲ್ವರ್ ಹಾಗೂ ಮದ್ದು ಗುಂಡಿನ ಒಟ್ಟು ಮೌಲ್ಯ ೫೦ ಸಾವಿರ ರೂ. ಎಂದು ಅಂದಾಜಿಸಲಾಗಿದೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-20
|
|
|