ಖಾಝಿ ಅಬ್ದುಲ್ಲಾ ಮುಸ್ಲಿಯಾರ್ ಮರಣ ಪ್ರಕರಣ: ಮರಳು ಕಾರ್ಮಿಕರ ಹಾಗೂ ಏಜೆಂಟರ ವಿಚಾರಣೆ
ಪ್ರಕಟಿಸಿದ ದಿನಾಂಕ : 2010-03-20
ಕಾಸರಗೋಡು, ಮಾ.೧೯: ಮಂಗಳೂರು ಖಾಝಿ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್‌ರ ನಿಗೂಢ ಮರಣದ ಕುರಿತ ತನಿಖೆ ನಡೆಸುತ್ತಿರುವ ಕ್ರೈಂಬ್ರಾಂಚ್ ಮರಳು ಕಾರ್ಮಿಕರನ್ನು ಹಾಗೂ ಏಳು ಮಂದಿ ಮರಳು ಏಜೆಂಟ ರನ್ನು ವಿಚಾರಣೆಗೊಳಪಡಿಸಿದೆ ಎಂದು ಕ್ರೈಬ್ರಾಂಚ್‌ನ ಮೂಲಗಳು ತಿಳಿಸಿವೆ.
ಖಾಝಿಯವರು ಮೃತಪಟ್ಟ ಹಿಂದಿನ ರಾತ್ರಿ ಚೆಂಬರಿಕ ಸಮುದ್ರ ತೀರಕ್ಕೆ ಮರಳು ಸಾಗಾಟಕ್ಕೆ ವಾಹನಗಳೇ ಬಂದಿಲ್ಲ ಎಂದು ಕೆಲವು ಸ್ಥಳೀಯ ವ್ಯಕ್ತಿಗಳು ಮಾಹಿತಿ ನೀಡಿದ್ದು, ಹಾಗೂ ಕೆಲ ಮರಳು ಏಜೆಂಟರು ಖಾಝಿ ಯವರ ಮರಣದ ಬಳಿಕ ಚೆಂಬರಿಕ ಸಮುದ್ರ ತೀರದಿಂದ ಮರಳು ಸಾಗಾಟವನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಶಂಕಿತರನ್ನು ತನಿಖೆಗೆ ಒಳಪ ಡಿಸಲಾಗಿದೆ ಹಾಗೂ ಖಾಝಿಯವರ ಮರಣದ ಮಧ್ಯರಾತ್ರಿ ಕಾರೊಂದು ಇಲ್ಲಿ ಹಾದು ಹೋಗಿರುವುದಾಗಿ ಸ್ಥಳೀ ಯರೋರ್ವರು ಸುಳಿವು ನೀಡಿದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಕ್ರೈ ಬ್ರಾಂಚ್‌ನ ಮೂಲಗಳು ತಿಳಿಸಿವೆ.