ಮಂಗಳೂರು, ಮಾ.೧೯: ‘ಅರಿಯಿರಿ ಮನುಕುಲದ ಪ್ರವಾದಿಯನ್ನು’ ಎಂಬ ವಿಷಯಕ್ಕೆ ಸಂಬಂಧಿಸಿ ನ್ಯೂ ಏಜ್ ಇಂಡಿಯಾ ಫೋರಂ ಆಯೋಜಿ ಸಿರುವ ಪ್ರವಾದಿ ಮುಹಮ್ಮದ್ (ಸ)ರವರ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಮಾ.೨೦ ರಂದು ತೊಕ್ಕೊಟ್ಟಿನ ಅಂಬೇಡ್ಕರ್ ಮೈದಾನದಲ್ಲಿ ಸಾರ್ವಜನಿಕ ಭಾಷಣ ನಡೆಯಲಿದೆ.
ಸಂಜೆ ೭:೧೫ಕ್ಕೆ ಜರಗುವ ಕಾರ್ಯ ಕ್ರಮದ ಅಧ್ಯಕ್ಷತೆಯನ್ನು ನೈಫ್ ಅಧ್ಯಕ್ಷ ರಫಿಉದ್ದೀನ್ ಕುದ್ರೋಳಿ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉಳ್ಳಾಲದ ಚೀರುಂಬಿ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ ಹಾಗೂ ಮಂಗಳೂರು ಜಮೀಯತುಲ್ ಫಲಾಹ್‌ದ ಮಾಜಿ ಅಧ್ಯಕ್ಷ ಹೈದರ್ ಉಳ್ಳಾಲ ಭಾಗವಹಿಸುವರು.
ನೈಫ್‌ನ ಕಾರ್ಯಕಾರಿ ಸಮಿತಿಯ ಸದಸ್ಯ ಯು.ಕೆ.ಖಾಲಿದ್ ಕಾರ್ಯಕ್ರಮ ನಿರೂಪಿಸುವರು ಎಂದು ಪ್ರಕಟನೆ ತಿಳಿಸಿದೆ.