ಮಂಗಳೂರು, ಮಾ.೧೯: ಸಂತ ಅಲೋಶಿಯಸ್ ಕಾಲೇಜಿನ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ‘ಆರ್ಥಿಕ ವರದಿಯ ಮಟ್ಟ ಹಾಗೂ ತೆರಿಗೆಯ ಮಾರ್ಪಾಟುಗಳು’ ಎಂಬ ವಿಷಯದ ಕುರಿತು ಆಯೋಜಿಸಲಾದ ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರಕ್ಕೆ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಡಾ.ಕೆ.ಎನ್.ವಿಜಯ ಪ್ರಕಾಶ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ದೇಶಕ್ಕೆ ಅತ್ಯಗತ್ಯವಾದ ತೆರಿಗೆ ಸುಧಾರಣೆಗಳು ಮತ್ತು ವ್ಯಾವಹಾರಿಕ ಪಾರದರ್ಶಕತೆಯ ಬಗ್ಗೆ ರಾಷ್ಟ್ರೀಯ ಅಧಿವೇಶನವನ್ನು ನಡೆಸುತ್ತಿರುವ ವಾಣಿಜ್ಯ ವಿಭಾಗವನ್ನು ಅಭಿನಂದಿಸಿ ದರು. ಈ ಬಗ್ಗೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿರುವ ವಿಷಯಗಳನ್ನಷ್ಟೆ ಅಲ್ಲದೆ ಶೈಕ್ಷಣಿಕವಾಗಿ ಚಿಂತನೆ ಮಾಡಿ ಆಗಬೇ ಕಾಗಿರುವ ಬದಲಾವಣೆಗಳ ಬಗ್ಗೆ ಸರಕಾರದ ಗಮನ ಸೆಳೆಯಬೇಕೆಂದು ಶಿಕ್ಷಣ ತಜ್ಞರಿಗೆ ಕರೆ ನೀಡಿದರು.
ಸಂತ ಅಲೋಶಿಯಸ್ ಕಾಲೇಜಿನ ಕುಲಸಚಿವ ಡಾ.ಎ.ಎಂ. ನರಹರಿ ಮಾತನಾಡಿ, ಸಾಮಾನ್ಯವಾಗಿ ಮನುಷ್ಯನ ಸ್ವಭಾವದಲ್ಲಿ ನೀಡುವುದಕ್ಕಿಂತ ಹೆಚ್ಚು ಪಡೆಯುವುದಕ್ಕೇ ಒತ್ತು ನೀಡಲಾಗುತ್ತದೆ. ಆದರೆ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ನೀಡುವುದು ಮತ್ತು ಪಡೆಯುವು ದರ ಸಮತೋಲನ ಕಾಪಾಡಬೇಕು ಎಂದು ಹೇಳಿದರು.
ಪ್ರಭಾರ ಪ್ರಾಂಶುಪಾಲ ರೆ.ಫಾ.ಫ್ರಾನ್ಸಿಸ್ ಅಲ್ಮೇಡಾ ಅಭಿನಂದಿಸಿದರು. ಅಧ್ಯಕ್ಷತೆಯನ್ನು ರೆ.ಫಾ. ಜೋಸೆಫ್ ರಾಡ್ರಿಗಸ್ ವಹಿಸಿದ್ದರು.
ಪ್ರೊ. ಮ್ಯಾನುವೆಲ್ ತಾವ್ರೊ ವಂದಿಸಿದರು. ಜೆನ್ನಿಫರ್ ಕ್ವಾಡ್ರಸ್ ಕಾರ್ಯಕ್ರಮ ನಿರೂಪಿಸಿದರು.