ಮಂಗಳೂರು: ನಗರದಲ್ಲಿ 40 ವರ್ಷಗಳ ಸುಧೀರ್ಘ ಸೇವೆಯಲ್ಲಿ ಪ್ರಸಿದ್ಧಿ ಪಡೆದಿರುವ ’ಕೋರೋನೆಟ್ ಡ್ರೈ ಕ್ಲಿನರ್‌ಸ್ ಮಳಿಗೆ ಸ್ಥಳಾಂತರ |
ಪ್ರಕಟಿಸಿದ ದಿನಾಂಕ : 2010-03-20
ಮಂಗಳೂರು,ಮಾ.19: ನಗರದ ಬೆಂದೂರ್ ನ ಸಂತ ಅಗ್ನೇಸ್ ಕಾಲೇಜಿನ ಬಳಿ ಕಳೆದ ೪೦ ವರುಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ’ಕೋರೋನೆಟ್ ಡ್ರೈ ಕ್ಲಿನರ್‌ಸ್" ಸಂಸ್ಥೆಯು ಈಗಾಗಲೇ ತನ್ನ ಕಾರ್ಯ ನಿರ್ವಾಹಣೆಗಾಗಿ ಗ್ರಾಹಕರಿಂದ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ.
ಇದೀಗ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೇವೆ ನೀಡುವ ನಿಟ್ಟಿನಲ್ಲಿ ಸಮೀಪದಲ್ಲೇ ಇರುವ "ಮೌರಿಸ್ಕ ಟವರ್" ಗೆ ತನ್ನ ಮಳಿಗೆಯನ್ನು ಸ್ಥಳಾಂತರಿಸಿದೆ. ಸ್ಥಳಾಂತರಗೊಂಡ "ಕೋರೋನೆಟ್ ಡ್ರೈಕ್ಲೀನರ್‍ಸ್" ನ ನೂತನ ಮಳಿಗೆಯು ಮಾರ್ಚ್18 ರಂದು ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಡಾ| ನವೀನ್ ಚಂದ್ರ ಹಾಗೂ ಇಂದು ನವೀನ್ ಅವರು ಉದ್ಘಾಟಿಸಿ ದರು. ಪುರುಷೋತ್ತಮ್ ಸುವರ್ಣರವರು ದೀಪ ಬೆಳಗಿಸಿದರು. ಹೇಮಾಚಾರ್ಯ, ರಿಚಾರ್ಡ್ ಲಸ್ರಾದೋ, ಅರನ್ಹಾ, ಅನಿತಾ, ಶರತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಸುಜಯ್ ಬೆಂದೂರ್ ಸ್ವಾಗತಿಸಿದರು. ಗಿರಿ ಪ್ರಕಾಶ್ ವಂದಿಸಿದರು.
ನೂತನ ಮಳಿಗೆಯಲ್ಲಿ ವಿಶಾಲವಾದ ಸ್ಥಳಾವಕಾಶವಿದ್ದು, ಸಾಕಷ್ಟು ಪಾರ್ಕಿಂಗ್ ಸೌಲಭ್ಯವನ್ನು ಕೂಡ ಹೊಂದಿದೆ. ಈಗಾಗಲೇ ಗ್ರಾಹಕರಿಗೆ ಉತ್ತಮ ದರ್ಜೆಯ ಸೇವೆಯನ್ನು ನೀಡುತ್ತಿರುವ ಸಂಸ್ಥೆಯು ಇದೀಗ ತನ್ನ ನೂತನ ಮಳಿಗೆಯಲ್ಲಿ ವಿಶಿಷ್ಟ ತಂತ್ರಜ್ನಾನದ ಮೂಲಕ ಗ್ರಾಹಕರ ಉತ್ತಮ ದರ್ಜೆಯ ಬಟ್ಟೆಗಳ ಗುಣಮಟ್ಟವನ್ನು ಕಾಪಾಡುವುದು ತಮ್ಮ ಧ್ಯೇಯ ಎನ್ನುತ್ತಾರೆ ಸಂಸ್ಥೆಯ ಪಾಲುದಾರರಾದ ಪುರುಷೋತ್ತಮ ಸುವರ್ಣ ಹಾಗೂ ಸುಜಯ್ ಬೆಂದೂರ್.
ಕಳೆದ 40 ವರ್ಷಗಳಿಂದ ಪುರುಷೋತ್ತಮ ಸುವರ್ಣ ಅವರು ಈ ಸಂಸ್ಥೆಯನ್ನು ಉನ್ನತ ದರ್ಜೆ ಹಾಗೂ ಗುಣಮಟ್ಟದ ಮೂಲಕ ಶಿಸ್ತು ಬದ್ದವಾಗಿ ನಡೆಸುತ್ತಾ ಬಂದಿದ್ದಾರೆ. ಇದೀಗ ಗಲ್ಫ್ ರಾಷ್ಟ್ರದಲ್ಲಿ ವ್ಯವಹಾರದಲ್ಲಿ ಉತ್ತಮ ಪ್ರಸಿದ್ದಿ ಪಡೆದು ಗಲ್ಫ್ ರಾಷ್ಟ್ರದ ಜನರಿಗೆ ಚಿರಪರಿಚಿತರಾಗಿ ರುವ ಸುಜಾಯ್ ಬೆಂದೂರ್ ಇವರು ವ್ಯವಹಾರ ಜ್ನಾನ ಹಾಗೂ ವಾಕ್ ಚಾತುರ್ಯ ಹೊಂದಿ ದ್ದು ಹೊರದೇಶದಲ್ಲಿ ಈ ವ್ಯವಹಾರದಲ್ಲಿ ಪಡೆದಿರುವ ಅನುಭವನ್ನು ಸ್ವದೇಶದ ಜನರಿಗೆ ಮುಡಿ ಪಾಗಿಡುವ ದ್ರಷ್ಠಿಯಿಂದ ಪುರುಷೋತ್ತಮ್ ಅವರ ಜೊತೆಗೂಡಿ (ಪಾಲುದಾರಿಕೆ) ಈ ನೂತನ ಮಳಿಗೆಯನ್ನು ಪ್ರಾರಂಭಿಸಿದ್ದಾರೆ.
ಪುರುಷೋತ್ತಮ್ ಅವರ ಗ್ರಾಹಕ ಸಂಬಧದ ಉತ್ತಮ ಅನುಭವ ಹಾಗೂ ಸುಜಯ್ ಅವರ ವಿಶೇಷ ವ್ಯವಹಾರ ಜ್ನಾನದಿಂದ ಈ ಮಳಿಗೆಯು ಇನ್ನೂ ಹೆಚ್ಚಿನ ಯಶಸ್ಸು ಪಡೆದು ಮುನ್ನಡೆ ಸಾಧಿಸುತ್ತದೆ ಎಂಬ ನಂಬಿಕೆ ಗ್ರಾಹಕರಿಗೆ.
ಈ ಬಗ್ಗೆ ಹೆಚ್ಚಿನ ವಿವರ ಹಾಗೂ ಸಲಹೆ ಸೂಚನೆಗಳಿಗಾಗಿ ಸುಜಯ್ ಬೆಂದೂರ್ ಇವರನ್ನು ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ(+91) 9900447754.
ವರದಿಯ ವಿವರಗಳು |
 |
ವರದಿಗಾರರು : ಸತೀಶ್ ಕಾಪಿಕಾಡ್
ಪ್ರಕಟಿಸಿದ ದಿನಾಂಕ : 2010-03-20 00:00:00
|
|
|