ವಿಮಾನ ಅಪಹರಣಕ್ಕೆ ಮರಣದಂಡನೆ: ಕೇಂದ್ರ ಅಸ್ತು |
ಪ್ರಕಟಿಸಿದ ದಿನಾಂಕ : 2010-03-19
ವಿಮಾನ ಅಪಹರಣದ ಅಪರಾಧಕ್ಕೆ ಮರಣದಂಡನೆ ವಿಧಿಸುವುದೂ ಸೇರಿದಂತೆ ಕೆಲವು ತಿದ್ದುಪಡಿಗಳಿಗೆ ಅನುಮೋದನೆ ನೀಡುವ ಮೂಲಕ ಸರ್ಕಾರವು ಅಪಹರಣ ನಿಗ್ರಹ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಲು ಶುಕ್ರವಾರ ನಿರ್ಧರಿಸಿತು.
ನವದೆಹಲಿ (ಪಿಟಿಐ): ವಿಮಾನ ಅಪಹರಣದ ಅಪರಾಧಕ್ಕೆ ಮರಣದಂಡನೆ ವಿಧಿಸುವುದೂ ಸೇರಿದಂತೆ ಕೆಲವು ತಿದ್ದುಪಡಿಗಳಿಗೆ ಅನುಮೋದನೆ ನೀಡುವ ಮೂಲಕ ಸರ್ಕಾರವು ಅಪಹರಣ ನಿಗ್ರಹ ಕಾಯ್ದೆಯನ್ನು ಇನ್ನಷ್ಟು ಕಠಿಣಗೊಳಿಸಲು ಶುಕ್ರವಾರ ನಿರ್ಧರಿಸಿತು.
ಪ್ರಮುಖ ತಾಣಗಳ ಮೇಲೆ ಕ್ಷಿಪಣಿ ಮಾದರಿಯಲ್ಲಿ ದಾಳಿ ನಡೆಸುವ ಸಲುವಾಗಿ ಬಳಸಲು ಉದ್ದೇಶಿಸಿದ ಅಪಹೃತ ವಿಮಾನವನ್ನು ಹೊಡೆದುರುಳಿಸುವ ಅಧಿಕಾರ ನೀಡುವುದೂ ಈ ತಿದ್ದುಪಡಿಗಳಲ್ಲಿ ಸೇರಿದೆ.
ಪ್ರಧಾನಿ ಮನ ಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು 1982ರ ಅಪಹರಣ ನಿಗ್ರಹ ಕಾಯ್ದೆಯಲ್ಲಿ ಈ ಬದಲಾವಣೆಗಳನ್ನು ಅಳವಡಿಸಲು ಅನುಮೋದನೆ ನೀಡಿತು. ಈ ಅಂಶಗಳು ಮತ್ತು ವಿಮಾನ ಅಪಹರಣ ಸಂಚಿಗೆ ಸಂಬಂಧಿಸಿದ ಅಂಶಗಳನ್ನು ಹಾಲಿ ಕಾಯ್ದೆಗೆ ಸೇರ್ಪಡೆ ಮಾಡಲು ತಿದ್ದುಪಡಿ ತರಬೇಕೆಂಬ ಪ್ರಸ್ತಾವಗಳನ್ನು ಅದಕ್ಕೆ ಮುನ್ನ ಗೃಹ ಸಚಿವ ಪಿ. ಚಿದಂಬರಂ ನೇತೃತ್ವದ ಸಚಿವರ ತಂಡ ಪರಿಶೀಲಿಸಿತ್ತು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19
|
|
|