ಶುಕ್ರವಾರ, 10-02-2012
ಇತ್ತೀಚಿನ 20 ಪ್ರಮುಖ ವರದಿಗಳು
Latest news item ಜುವೆಲ್ಲರ್ಸ್‌ ವ್ಯಾಪಾರಿಯ ಹತ್ಯೆ; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated)
Latest news item ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ
Latest news item ಕಿದಿಯೂರ್ ಹೋಟೆಲ್ ರಜತ ಸಂಭ್ರಮ: ವೈಭವದಿಂದ ನಡೆದ ನಾಗಮಂಡಲೋತ್ಸವ
Latest news item ಕರಾವಳಿ ಕಾಲೇಜು ಕ್ರೀಡೋತ್ಸವ - ವಿಧ್ಯಾರ್ಥಿಗಳಿಗೆ ತಂತ್ರಜ್ಞಾನ ಸೌಲಭ್ಯಗಳ ಸದುಪಯೋಗಕ್ಕೆ ಎಸ್.ಗಣೇಶ್ ರಾವ್ ಕರೆ.
Latest news item ಸಚಿವರ ನೀಲಿ ಖಯಾಲಿಗೆ ಆಕ್ರೋಶ : ಉಡುಪಿಯಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ
Latest news item ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
Latest news item ಸಚಿವರ ಸೆಕ್ಸ್ ಫಿಲಂ ವೀಕ್ಷಣೆ: 'ತ್ರಿ ಡರ್ಟಿ' ಮಂತ್ರಿಗಳ ಬಗ್ಗೆ ಬಾಲಿವುಡ್ ಪ್ರತಿಕ್ರಿಯೆ
Latest news item "ಛಲಪತ್ತಿನ ಕಿತಾಪತಿ" ನಾಟಕ ಮುಹೂರ್ತ
Latest news item ಹೆಸರಾಂತ ಬ್ಯಾಂಕರ್ ಟಿ.ಜೆ.ಎ ಗಾಣಿಗ ದುಬಾಯಿಗೆ ಭೇಟಿ
Latest news item ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ..
Latest news item ಚರ್ಚೆಯೊಂದನ್ನು ಬಿಟ್ಟು ಇನ್ನೆಲ್ಲಕ್ಕೂ ವೇದಿಕೆಯಾಗುತ್ತಿರುವ ವಿಧಾನಸಭೆ!
Latest news item ‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
Latest news item ‘ಮಹಾಧವಳ’ದ ಕನ್ನಡಾನುವಾದ ಲೋಕಾರ್ಪೆಣೆ...
Latest news item ಸದನದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣ: ನೈತಿಕತೆ ಇದ್ದಲ್ಲಿ ವಜಾಗೊಳಿಸಿ: ಬಿಜೆಪಿಗೆ ಮೊಯ್ಲಿ ಸವಾಲು
Latest news item ಸದನದಲ್ಲಿ ಸಚಿವರಿಂದ ಬ್ಲೂ ಫಿಲಂ ವೀಕ್ಷಣೆ ಪ್ರಕರಣ: ಕರಾವಳಿಯಾದ್ಯಂತ ಕಾವು ಪಡೆದ ಪ್ರತಿಭಟನೆ; ಶಾಸಕ ಸ್ಥಾನ ಅನರ್ಹಗೊಳಿಸಿ ಜೈಲಿಗೆ ತಳ್ಳಿ: ಸಿಪಿಎಂ
Latest news item ಹೊನ್ನಾವರ ಬಳಿ ಮರಕ್ಕೆ ಕಾರು ಢಿಕ್ಕಿ: ಉಡುಪಿ ಡಿಸಿಐಬಿ ನಿರೀಕ್ಷಕರಿಗೆ ತೀವ್ರ ಗಾಯ
Latest news item ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ
Latest news item ದುಬಾಯಿಯಲ್ಲಿ ವರ್ಣರಂಜಿತ ಯಕ್ಷಲೋಕ ಸೃಷ್ಟಿಸಿದ ಯಕ್ಷಮಿತ್ರರ ಯಕ್ಷಗಾನ ವೈಭವ ’ಶಾಂಭವಿ ವಿಜಯ’
Latest news item ಶಾರ್ಜಾ ಕರ್ನಾಟಕ ಸಂಘ ವಾರ್ಷಿಕೋತ್ಸವ: ವಿನಯ್ ಆಡಿಗ ಆಶಾ ಫೆರ್ನಾಂಡಿಸ್- 'ಮಯೂರ 'ರಾಜ' 'ರಾಣಿ'; ಶೋಧನ್ ಪ್ರಸಾದ್ ರವರಿಗೆ ಪ್ರತಿಷ್ಟಿತ ’ಮಯೂರ’ ಪ್ರಶಸ್ತಿ ಪ್ರಧಾನ| ಮುಖ್ಯ ಅತಿಥಿ ಕರ್ನಾಟಕ ಲೋಕಾಯುಕ್ತ ಮಾನ್ಯ ಎನ್. ಸಂತೋಷ್ ಹೆಗ್ಡೆ ಯವರಿಂದ ಮೆಚ್ಚುಗೆ
Latest news item ಯು.ಎ.ಇ. ಬಂಟರ 37 ನೇ ಸ್ನೇಹಮಿಲನ: ಜಾನಪದ ಕಲಾ ವೈಭವ... ಡಾ. ಬಿ ಆರ್. ಶೆಟ್ಟಿಯವರಿಂದ ಉದ್ಘಾಟನೆ
Latest news item ಧ್ವನಿ ಪ್ರತಿಷ್ಠಾನ ಯು.ಎ.ಇ. ಯು ಬೆಳ್ಳಿ ಹಬ್ಬ: ವಿಜ್ರಂಭಣೆಯಿ೦ದ ಜರುಗಿದ ಯು.ಎ.ಇ. ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ; ಪ್ರಶಸ್ತಿ ಪ್ರದಾನ ಸಮಾರಂಭ
Latest news item ದುಬಾಯಿ ಸರ್ಕಾರದಿಂದ ಸನ್ಮಾನಿತರಾದ ಕರ್ನಾಟಕದ ಗೃಹ ಮತ್ತು ಸಾರಿಗೆ ಸಚಿವರಾದ ಮಾನ್ಯ ಆರ್. ಆಶೋಕ್ ರವರಿಗೆ ದುಬಾಯಿಯಲ್ಲಿ ಕನ್ನಡಿಗರಿಂದ ಅಭಿನಂದನಾ ಸಮಾರಂಭ; ಮಾನ್ಯ ಸಚಿವ ವರಿಂದ ಅನಿವಾಸಿ ಕನ್ನಡಿಗರ ಅಭಿಮಾನಕ್ಕೆ ಮೆಚ್ಚುಗೆ.( Updated )
Latest news item ಮೋಗವೀರ್ಸ್ ಯು.ಎ.ಇ. ಆಶ್ರಯದಲ್ಲಿ ದುಬಾಯಿಯಲ್ಲಿ ಭಕ್ತಿ ಶ್ರದ್ಧೆಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
Latest news item ವಿಜ್ರಂಭಣೆಯಿಂದ ಜರುಗಿದ 'ಬಂಟ್ಸ್ ಬಹ್ರೈನ್'ನ ಸಾಂಸ್ಕೃತಿಕ ಕಾರ್ಯಕ್ರಮ: ಶ್ರೀ ಶ್ರೀ ಶ್ರೀ ಒಡಿಯೂರು ಗುರುದೇವಾನಂದ ಸ್ವಾಮೀಜಿಯವರ ಐತಿಹಾಸಿಕ ಭೇಟಿ: ಭಾವಪರವಶರಾದ ಭಕ್ತ ಸಮೂಹ: ಭಕ್ತಿ ಸಂಗೀತದ ಧಾರೆ ಹರಿಸಿದ ನಾಡಿನ ಖ್ಯಾತ ಗಾಯಕ ರವೀಂದ್ರ ಪ್ರಭು.
Latest news item ಸ್ವಾರ್ಥವಿಲ್ಲದ 'ಸಾರ್ಥ' ದ ಅಪೂರ್ವ ಕಾರ್ಯಕ್ರಮ ನಮನ ; ಕನ್ನಡದ ಮಣ್ಣಿಗೆ ದ್ವೀಪದಲ್ಲಿ ನಿಜ ನಮನ; ಸಂಗೀತ ಸುಧೆ ಹರಿಸಿದ ಗಾಯಕಿ ಸಂಗೀತ ಕಟ್ಟಿ ಹಾಗು ತಂಡ; ಖ್ಯಾತ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್ ರವರಿಂದ ಸ್ಫೂರ್ತಿಯ ಮಾತುಗಳು.



 

 
ತಪ್ಪೊಪ್ಪಿಗೆ ನೀಡಿದ ಉಗ್ರ ಹೆಡ್ಲಿಗೆ ಮರಣದಂಡನೆ ಮತ್ತು ಗಡೀಪಾರಿಲ್ಲ

 ಅಮೆರಿಕಾ ಡಬ್ಬಲ್ ಏಜೆಂಟ್ ಹೆಡ್ಲಿ ರಕ್ಷಣಾ ತಂತ್ರ ಯಶಸ್ವಿ

ವಾಷಿಂಗ್ಟನ್, ಶುಕ್ರವಾರ, 19 ಮಾರ್ಚ್ 2010 

2008ರ ಮುಂಬೈ ಭಯೋತ್ಪಾದನಾ ದಾಳಿ ಸಂಚು ಸೇರಿದಂತೆ ತನ್ನ ಮೇಲೆ ಹೊರಿಸಲಾಗಿದ್ದ ಎಲ್ಲಾ ಆಪಾದನೆಗಳಿಗೂ ತಪ್ಪೊಪ್ಪಿಗೆ ನೀಡಿರುವ ಪಾಕಿಸ್ತಾನಿ ಸಂಜಾತ ಅಮೆರಿಕಾ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಗಿಲಾನಿ ಮರಣದಂಡನೆ ಮತ್ತು ಭಾರತ ಗಡೀಪಾರು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾನೆ. ಆದರೆ ಭಾರತ ಈತನನ್ನು ಅಮೆರಿಕಾದಲ್ಲಿ ನೇರ ವಿಚಾರಣೆ ನಡೆಸಬಹುದಾಗಿದೆ.

ಗುರುವಾರ ಚಿಕಾಗೋ ನ್ಯಾಯಾಲಯಕ್ಕೆ ಹೆಡ್ಲಿಯನ್ನು ಹಾಜರುಪಡಿಸಿದ ನಂತರ ತನ್ನ ಮೇಲಿದ್ದ ಎಲ್ಲಾ 12 ಆಪಾದನೆಗಳನ್ನು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಅಮೆರಿಕಾ ಜತೆ ಒಪ್ಪಂದವೊಂದಕ್ಕೆ ಬಂದಿರುವ ಆತನನ್ನು ಭಾರತಕ್ಕೆ ಗಡೀಪಾರು ಮಾಡ ಲಾಗುವುದಿಲ್ಲ ಎಂಬ ಭರವಸೆಯನ್ನು ನೀಡಲಾಗಿದೆ. ಅಲ್ಲದೆ ಉಗ್ರನಿಗೆ ಮರಣದಂಡನೆಯನ್ನೂ ವಿಧಿಸಲಾಗುತ್ತಿಲ್ಲ.

ಈ ಒಪ್ಪಂದದಂತೆ ಭಾರತದ ಅಧಿಕಾರಿಗಳು ಅಮೆರಿಕಾದಲ್ಲಿ ಹೆಡ್ಲಿಯನ್ನು ನೇರವಾಗಿ ವಿಚಾರಣೆ ನಡೆಸಬಹುದಾಗಿದೆ. ಅಮೆರಿಕಾ ಪ್ರಾಸಿಕ್ಯೂಟರುಗಳು ಮತ್ತು ಹೆಡ್ಲಿ ನಡುವೆ ಈ ಒಪ್ಪಂದ ನಡೆಸಲಾಗಿದ್ದು, ಅಮೆರಿಕಾ ಕಸ್ಟಡಿಯಲ್ಲಿರುವಾಗಲೇ ವಿದೇಶಿ ನ್ಯಾಯಾಲಯವೊಂದರಲ್ಲಿ (ಬಹುತೇಕ ಇದು ಮುಂಬೈ ದಾಳಿ ವಿಶೇಷ ನ್ಯಾಯಾಲಯ) ಇದನ್ನು ಹೆಡ್ಲಿ ಪ್ರಮಾಣೀಕರಿಸ ಬೇಕಾಗುತ್ತದೆ.

ಹೆಡ್ಲಿ ತಪ್ಪೊಪ್ಪಿಗೆ ನೀಡಿರುವ 12 ಆರೋಪಗಳು..

* ಭಾರತದಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್ ಇಡಲು ಸಂಚು.
* ಭಾರತದಲ್ಲಿನ ಪ್ರಮುಖ ವ್ಯಕ್ತಿಗಳನ್ನು ಕೊಲ್ಲುವ ಮೂಲಕ ಶಕ್ತಿಗುಂದಿಸುವುದು.
* ಭಾರತದಲ್ಲಿ ಅಮೆರಿಕಾ ಪ್ರಜೆಗಳನ್ನು ಕೊಲ್ಲಲು ಸಹಕಾರ ಮತ್ತು ಪ್ರಚೋದನೆ. (ಆರು ಆರೋಪ)
* ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಕಚ್ಚಾವಸ್ತುಗಳ ಪೂರೈಕೆ.
* ಡೆನ್ಮಾರ್ಕ್‌ನ ಪ್ರಮುಖ ವ್ಯಕ್ತಿಗಳನ್ನು ಕೊಲ್ಲುವ ಮೂಲಕ ಶಕ್ತಿಗುಂದಿಸುವುದು.
* ಡೆನ್ಮಾರ್ಕ್‌ನಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಕಚ್ಚಾವಸ್ತುಗಳ ಪೂರೈಕೆ.
* ಲಷ್ಕರ್ ಇ ತೋಯ್ಬಾ ಭಯೋತ್ಪಾದಕರಿಗೆ ಕಚ್ಚಾವಸ್ತುಗಳ ಪೂರೈಕೆ.

ಡಬ್ಬಲ್ ಏಜೆಂಟ್ ರಕ್ಷಿಸಿದ ಅಮೆರಿಕಾ?

ಇಂತಹದ್ದೊಂದು ಆರೋಪ ಅಮೆರಿಕಾದ ಮೇಲೆ ಕಳೆದ ಹಲವಾರು ಸಮಯಗಳಿಂದ ಕೇಳಿ ಬರುತ್ತಿತ್ತು. ಇದೀಗ ಹೆಡ್ಲಿಯನ್ನು ಗಡೀಪಾರು ಮಾಡದೇ ಇರಲು ನಿರ್ಧರಿಸುವುದರೊಂದಿಗೆ ಅದು ಬಹುತೇಕ ರುಜುವಾತಾಗಿದೆ ಎಂದು ಹೇಳಲಾಗುತ್ತಿದೆ.

ಹಿಂದೊಮ್ಮೆ ಮಾದಕ ದ್ರವ್ಯ ಕಳ್ಳ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಹೆಡ್ಲಿಯನ್ನು ಅಮೆರಿಕಾ ತನ್ನ ಗುಪ್ತಚರ ಏಜೆಂಟನನ್ನಾಗಿ ಬಳಸಿಕೊಂಡಿತ್ತು. ಆದರೆ ಹೆಡ್ಲಿ ಇದರ ಜತೆ ಲಷ್ಕರ್ ಇ ತೋಯ್ಬಾಕ್ಕೂ ಸಹಕಾರ ನೀಡುತ್ತಿದ್ದ.

ಹೆಡ್ಲಿ ಅಮೆರಿಕಾ ಪರ ಏಜೆಂಟನಾಗಿ ಕೆಲಸ ಮಾಡಿದ್ದ ಎನ್ನುವುದು ಜಗತ್ತಿಗೆ ಅಧಿಕೃತವಾಗಿ ತಿಳಿಯಬಾರದು ಎಂಬ ಉದ್ದೇಶದಿಂದ ಅಮೆರಿಕಾವು ಆತನ ಜತೆ ಒಪ್ಪಂದಕ್ಕೆ ಬಂದಿದ್ದು, ಗಡೀಪಾರು ಮಾಡದೇ ಇರುವ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಇದೀಗ ಅಮೆರಿಕಾ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಭಾರತಕ್ಕೆ ಹೆಡ್ಲಿಯನ್ನು ಅಲ್ಲೇ ವಿಚಾರಣೆ ನಡೆಸಬಹುದಾಗಿದೆ. ಆದರೆ ಇಲ್ಲಿ ಎಷ್ಟರ ಮಟ್ಟಿಗಿನ ಸ್ವಾತಂತ್ರ್ಯ ನೀಡಲಾಗುತ್ತದೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ. ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಲು ಮಾತ್ರ ಅಮೆರಿಕಾ ಅವಕಾಶ ನೀಡಬಹುದು ಮತ್ತು ವಿಚಾರಣೆ ಸಂದರ್ಭದಲ್ಲಿ ಅಮೆರಿಕಾ ಅಧಿಕಾರಿಗಳೂ ಜತೆಗಿರಬಹುದು ಎಂಬುದು ಸಂಶಯಾತೀತವಾಗಿದೆ.

ಉಗ್ರ ಹೆಡ್ಲಿಗೆ ಜೀವಾವಧಿ ಶಿಕ್ಷೆಯಾದರೂ ಸಾಕು: ಭಾರತ  

ನವದೆಹಲಿ, ಶುಕ್ರವಾರ, 19 ಮಾರ್ಚ್ 2010
 
ಮುಂಬೈ ದಾಳಿ ಸಂಚಿನಲ್ಲಿ ಪಾಲ್ಗೊಂಡಿರುವ ಬಗ್ಗೆ ಅಮೆರಿಕಾ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ನೀಡಿರುವ ಪಾಕಿಸ್ತಾನಿ ಸಂಜಾತ ಅಮೆರಿಕನ್ ಪ್ರಜೆ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಗಿಲಾನಿಗೆ ಜೀವಾವಧಿ ಶಿಕ್ಷೆ ನೀಡಿದರೆ ಭಾರತ ಸರಕಾರವು ತೃಪ್ತಗೊಳ್ಳಲಿದೆ ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ತಿಳಿಸಿದ್ದಾರೆ.

ಅಮೆರಿಕಾ ಅಟಾರ್ನಿ ಜನರಲ್ ಅವರು ಹೆಡ್ಲಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಸಲಹೆ ನೀಡಿದ್ದಾರೆ. ಆತ ಜೀವಾವಧಿ ಶಿಕ್ಷೆ ಪಡೆದುಕೊಂಡರೆ ಭಾರತ ಸರಕಾರವು ಅಸಮಾಧಾನಗೊಳ್ಳುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ ಎಂದು ಅವರು ತನ್ನ ಹೇಳಿಕೆಯಲ್ಲಿ ಹೇಳಿದ್ದಾರೆ.

ಹೆಡ್ಲಿಯ ವಿಚಾರಣೆ ಅಥವಾ ಆತ ಭಾರತದ ನ್ಯಾಯಾಲಯದ ಮೂಲಕ ಮಾಡಲಿರುವ ಪ್ರಮಾಣದ ಕುರಿತು ಮುಂಬರುವ ದಿನಗಳಲ್ಲಿ ನಿರ್ಧಾರಕ್ಕೆ ಬರಲಾಗುತ್ತದೆ. ಈ ಬಗ್ಗೆ ಈಗಲೇ ಯಾವುದೇ ಮಾಹಿತಿಯಿಲ್ಲ ಎಂದೂ ತಿಳಿಸಿದ್ದಾರೆ.

ಲಷ್ಕರ್ ಇ ತೋಯ್ಬಾ ಭಯೋತ್ಪಾದಕನಾಗಿರುವ ಹೆಡ್ಲಿ ತಪ್ಪೊಪ್ಪಿಗೆ ನೀಡಿರುವುದು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಿ ರುವ ಭಾರತ ಸರಕಾರವು, ಆತನ ಜತೆಗಿನ ಅಮೆರಿಕಾ ಸರಕಾರದ ಒಪ್ಪಂದವು ಅಸಮಾಧಾನ ತಂದಿಲ್ಲ ಎಂದು ಸರಕಾರದ ಕೆಲವು ಉನ್ನತ ಮೂಲಗಳು ಹೇಳಿವೆ.

ಅದೇ ಹೊತ್ತಿಗೆ ಅಮೆರಿಕಾದ ಫೆಡರಲ್ ಕಾನೂನಿನಲ್ಲಿ ಮಧ್ಯ ಪ್ರವೇಶಿಸಲು ಭಾರತ ಸರಕಾರ ನಿರಾಕರಿಸಿದ್ದು, ಈ ಬೆಳವಣಿಗೆ ಯಿಂದ ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧದ ಮೇಲೆ ಯಾವುದೇ ದುಷ್ಪರಿಣಾಮ ಬೀರದು ಎಂಬ ವಿಶ್ವಾಸದಿಂದಿದೆ. ಮುಂಬರುವ ದಿನಗಳಲ್ಲಿ ಹೆಡ್ಲಿಯನ್ನು ವಿಚಾರಣೆ ನಡೆಸುವ ಮೂಲಕ ಭಯಾನಕ ಮುಂಬೈ ದಾಳಿಯ ಕುರಿತು ಅಗತ್ಯ ಮಾಹಿತಿಗಳನ್ನು ಕಲೆ ಹಾಕಲಾಗುತ್ತದೆ ಎಂದು ಸರಕಾರ ತಿಳಿಸಿದೆ.

ಗುರುವಾರ ಅಮೆರಿಕಾದ ನ್ಯಾಯಾಲಯದಲ್ಲಿ ತನ್ನ ಮೇಲಿದ್ದ ಎಲ್ಲಾ 12 ಆರೋಪಗಳಿಗೆ ತಪ್ಪೊಪ್ಪಿಗೆ ಹೇಳಿಕೆ ನೀಡುವ ಮೂಲಕ ಹೆಡ್ಲಿ ಮರಣದಂಡನೆ ಮತ್ತು ಗಡೀಪಾರು ಶಿಕ್ಷೆಯಿಂದ ಪಾರಾಗಿದ್ದಾನೆ.

ಆದರೆ ಭಾರತವು ಅಮೆರಿಕಾಕ್ಕೆ ಹೋಗಿ ಆತನ ವಿಚಾರಣೆ ನಡೆಸುವ ಅವಕಾಶವನ್ನು ನೀಡಲಾಗಿದ್ದು, ಈ ಸಂಬಂಧ ಭಾರತವು ತನಗಿರುವ ಅವಕಾಶಗಳನ್ನು ಬಳಸಿಕೊಳ್ಳುವ ಬಗ್ಗೆ ಅಮೆರಿಕಾದ ಕಾನೂನುಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.

SocialTwist Tell-a-Friend
Print this News Articleಈ ವಾರ್ತೆಯನ್ನು ಮುದ್ರಿಸಿ

ವರದಿಯ ವಿವರಗಳು
ವರದಿಗಾರರ ಭಾವಚಿತ್ರ ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00

Tell a Friend

ತಮ್ಮ ಅನಿಸಿಕೆಯನ್ನು ನಮಗೆ ತಿಳಿಸಿ (ಇಂಗ್ಲೀಷ್ ಅಥವಾ ಕನ್ನಡ ಬರಹದಲ್ಲಿ)
RELIGIOUS Feedbacks are not allowed. They will not be published.-Editor
ತಮ್ಮ ಹೆಸರು :
ತಮ್ಮ ಊರು :
ತಮ್ಮ ಈಮೇಯ್ಲ್ ವಿಳಾಸ :
ತಮ್ಮ ದೂರವಾಣಿ ಸಂಖ್ಯೆ :
ವಿಷಯ :
ತಮ್ಮ ಅನಿಸಿಕೆ :
 
ಎಲ್ಲಾ ವರದಿಗಳು [ಭಾರತ]

»ಮೇಧಾರಿಂದ ಬಸವ ಪ್ರಶಸ್ತಿ ತಿರಸ್ಕಾರ
»ತುರ್ತು ಪರಿಸ್ಥಿತಿ ಸಂದರ್ಭದ ದಾಖಲೆಗಳು ಪ್ರಧಾನಿ ಕಚೇರಿಯ ಕಡತಗಳಲ್ಲಿ ಇಲ್ಲ: ಪತ್ತೆ ಹಚ್ಚಲು ಮಾಹಿತಿ ಆಯೋಗದ ನಿರ್ದೇಶನ
»ಒಂಬತ್ತು ಸರಕಾರಿ ವೆಬ್‌ಸೈಟ್‌ಗಳಿಗೆ ಕನ್ನ: ಎನ್‌ಐಸಿ
»ದೇವತೆಯ ಒಲಿಸಲು ನಾಲಗೆ ಕತ್ತರಿಸಿಕೊಂಡ ಯುವಕ!
»ಶಿರ್ಡಿ ಸಾಯಿಬಾಬಾಗೆ ರೂ. 401 ಕೋಟಿ ನಗದು, 36 ಕೆ.ಜಿ. ಚಿನ್ನ ದೇಣಿಗೆ
»ಮಕ್ಕಳನ್ನು ಸುಮ್ಮನಾಗಿಸಲು ಅಫೀಮು ನೀಡುವ ಕಾರ್ಮಿಕ ತಾಯಿಂದಿರು
»ಜಯಲಲಿತಾ ಪ್ರಕರಣದಲ್ಲಿ ಬಿಜೆಪಿಯ ಒತ್ತಡ: ಅಡ್ವೊಕೇಟ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ ಬಿ.ವಿ. ಆಚಾರ್ಯ
»ಬಾಂಬೆ ಹೈಕೋರ್ಟ್‌ನಿಂದ ದೇಶ್‌ಮುಖ್ ತರಾಟೆಗೆ: ಸಿನಿಮಾ ಸಂಸ್ಥೆಯ ಜಾಗ ಹಿಂದಿರುಗಿಸಲು ಘಾಯ್‌ಗೆ ಆದೇಶ
»ಮೋದಿಗೆ ಕ್ಲೀನ್ ಚಿಟ್: ಸಿಟ್ ವರದಿ ಬೇಸರ ತರಿಸಿದೆ: ಝಕಿಯಾ
»ಮುಂದಿನ ಮಹಾ ಚುನಾವಣೆಯಲ್ಲಿ ಮೋದಿ ಪ್ರಧಾನಿ ಅಭ್ಯರ್ಥಿ: ಗಡ್ಕರಿ
»ಗುಜರಾತ್ ದಂಗೆಯಲ್ಲಿ ಧಾರ್ಮಿಕ ಸ್ಥಳಗಳಿಗೆ ಹಾನಿ: ಎನ್‌ಎಚ್‌ಆರ್‌ಸಿ ವರದಿಯನ್ನು ವಿಧಾನ ಸಭೆಯಲ್ಲಿ ಏಕೆ ಮಂಡಿಸಿಲ್ಲ?: ಮೋದಿ ಸರಕಾರಕ್ಕೆ ಹೈಕೋರ್ಟ್ ತರಾಟೆ
»ಚೆನ್ನೈ: ಕ್ಲಾಸ್‌ರೂಂನಲ್ಲೇ ಶಿಕ್ಷಕಿಯನ್ನೇ ಹತ್ಯೆಗೈದ ವಿದ್ಯಾರ್ಥಿ
»ಸಂವಿಧಾನವನ್ನು ಅಪಮಾನಿಸಿರುವ ಇಂತಹವರನ್ನು ಜೈಲಿಗಟ್ಟಿ’: ಅಣ್ಣಾ ಹಜಾರೆ
»ಮಾಜಿ ಸಚಿವರ ವಿರುದ್ಧ ವಿರುದ್ಧ ಸೂಕ್ತ ಕ್ರಮ: ಗಡ್ಕರಿ
»‘ಎಲ್‌ಡಿ‌ಎಸ್’ ಅರ್ಥಾತ್‘ ಲವ್- ದೋಖಾ ಔರ್ ಸೆಕ್ಸ್’
»ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಲು ಅನುಮತಿ ಕೋರಿ ಸಿವಿಸಿಯಿಂದ ಸರಕಾರಕ್ಕೆ ಮನವಿ
»ವಾರಣಾಸಿ: ಕುಸಿದ ನಿತಿನ್ ಗಡ್ಕರಿ ವೇದಿಕೆ
»ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣ: ಆಂಧ್ರ ಪೊಲೀಸರಿಗೆ ಸಮನ್ಸ್ ಜಾರಿಗೊಳಿಸಿದ ಸಿಬಿಐ
»ಆಂಧ್ರ ಅಬಕಾರಿ ಸಚಿವ ಮದ್ಯ ಲಾಬಿಯ ಕೈಗೊಂಬೆ: ಎಸಿಬಿ ವರದಿ ಆರೋಪ
»ಶೀಘ್ರವೇ ಅಡ್ಡ ಹಾಯ್ಕೆ ಕ್ಷಿಪಣಿಯ ಪುನಃ ಪರೀಕ್ಷೆ
»‘ಲಕ್ಷ-1’ ಪರೀಕ್ಷೆ ಯಶಸ್ವಿ
»ದಯಾನಿಧಿ ಮಾರನ್ ವಿರುದ್ಧ ಇನ್ನೊಂದು ಪ್ರಕರಣ ದಾಖಲು
»ಸಬ್ಸಿಡಿ ಭೂತ ನಿದ್ದೆಗೆಡಿಸುತ್ತಿದೆ: ಪ್ರಣವ್
»ಗೋಧ್ರಾ ಗಲಭೆ: ಧಾರ್ಮಿಕ ಕಟ್ಟಡಗಳ ಹಾನಿ ಬಗ್ಗೆ ನಿರ್ಲಕ್ಷ್ಯ- ಮೋದಿ ಸರ್ಕಾರಕ್ಕೆ ತರಾಟೆ
» ಜೀವವೈವಿಧ್ಯ ತಾಣ: `ಪಶ್ಚಿಮ ಘಟ್ಟದಲ್ಲಿ ಬೇಡ ಗಣಿಗಾರಿಕೆ’
»ರೈಲ್ವೆ ಟಿಕೆಟ್ ಕಾದಿರಿಸುವಿಕೆ ಅವಧಿ 120 ದಿನಗಳವರೆಗೆ ವಿಸ್ತರಣೆ
»ಚುನಾವಣೋತ್ತರ ಸಮೀಕ್ಷೆ, ಅಭಿಪ್ರಾಯ ಸಂಗ್ರಹ ಸಮೀಕ್ಷೆ ನಿಷೇಧಕ್ಕೆ ಚುನಾವಣಾ ಆಯೋಗದ ಸುತ್ತೋಲೆ
»ಚಿಕಿತ್ಸೆ ವೆಚ್ಚ ಭರಿಸಲಾಗದ ತಾಯಿಯಿಂದ ಮಗನಿಗೆ ದಯಾ ಮರಣ ಕೋರಿ ಅರ್ಜಿ
»ಪತ್ರಕರ್ತೆಯ ಮೇಲೆ ದಾಳಿ: ಚುನಾವಣಾಧಿಕಾರಿ, ಪೊಲೀಸರ ವಿರುದ್ಧ ಕ್ರಮಕ್ಕೆ ಶಿಫಾರಸು
»ರಾಬರ್ಟ್ ವಾದ್ರಾರನ್ನು ತಡೆದ ಚುನಾವಣಾಧಿಕಾರಿಯ ವರ್ಗಾವಣೆ
»ಪ್ರಾಥಮಿಕ ಶಾಲೆಗಳ ಕಾರ್ಯ ನಿರ್ವಹಿಸುತ್ತಿರುವ ಅಝಂಗಡದ ಮಸೀದಿಗಳು
»ಆಂಧ್ರ ಪ್ರದೇಶ: ಸಚಿವರ ವಿರುದ್ಧ ಒಂದಾದ ಐಎಎಸ್ ಅಧಿಕಾರಿಗಳು
»ಅಂತರ್ಜಾಲಾಧಾರಿತ ಔಷಧಿ ವ್ಯಾಪಾರ ತಡೆಗೆ ಸಮಿತಿ
»ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ: ಆರೋಪಿ ಘೋಷ್ ಜಾಮೀನು ಬಿಡುಗಡೆ
»ಮಾ. 16ಕ್ಕೆ ಕೇಂದ್ರ ಬಜೆಟ್
»ಕಚ್ಚಾ ತೈಲ ಆಮದು: ಭಾಗಶಃ ಪಾವತಿ ವ್ಯವಸ್ಥೆಗೆ ಇರಾನ್ ಸಮ್ಮತಿ
»2ಜಿ: ಸೋನಿಯಾ ತಂಗಿಯರಿಗೆ ಸಿಕ್ಕಿದ್ದು 18000ಕೋಟಿ - ಸ್ವಾಮಿ ಆರೋಪ
»ದುಡಿಯದ' ಅಧಿಕಾರಿಗಳಿಗೆ 15 ವರ್ಷದಲ್ಲೇ ನಿವೃತ್ತಿ: ಕೇಂದ್ರದ ಹೊಸ ನಿಯಮಾವಳಿ
»ಕಪ್ಪುಹಣ; ಕೈ, ಬಿಜೆಪಿ ಜನರನ್ನು ತಪ್ಪು ದಾರಿಗೆಳೆಯುತ್ತಿವೆ: ಮಾಯಾವತಿ
»ಆಕ್ಷೇಪಾರ್ಹ ವಿಷಯ ಅಳಿಸಲು ಜಾಲತಾಣಗಳಿಗೆ ಇನ್ನೂ 15 ದಿನ ಕಾಲಾವಕಾಶ
»ಬಜೆಟ್‌ಗೆ ಗಣಿ ಬಂಪರ್: 49 ಕಂಪೆನಿಗಳ ಗುತ್ತಿಗೆ ರದ್ದು. ಗಣಿ ಧಣಿಗಳತ್ತ ಸಿಇಸಿ ಕೆಂಗಣ್ಣು
»ಅಕ್ರಮ ಗಣಿಗಾರಿಕೆ: ಜಾರ್ಖಂಡ್ ಸರಕಾರಕ್ಕೆ ಎನ್‌ಎಚ್‌ಆರ್‌ಸಿ ನೋಟಿಸ್
»3000 ಬೆಲ್ಜಿಯಂ ಶೆಫರ್ಡ್ಸ್‌ಗಳಿಗೆ ತರಬೇತಿಗೆ ಸಿಆರ್‌ಪಿಎಫ್ ನಿರ್ಧಾರ
»ಪೊಲೀಸ್ ಅಧಿಕಾರಿ ಸಹಿತ ಇಬ್ಬರು ಹಿಮಪಾತದಲ್ಲಿ ಸಮಾಧಿ
»ಮಧ್ಯಪ್ರದೇಶದ ಬಿಜೆಪಿ ಸರಕಾರದಿಂದ ರೂ. 250 ಕೋಟಿ ಗೋ ಹಗರಣ: ಕಾಂಗ್ರೆಸ್
»ಜೀವಂತವಾಗಿ ಬಂದ ‘ಸಾವನ್ನಪ್ಪಿದ’ ಮಹಿಳೆ!
»ಹರೇನ್ ಪಾಂಡ್ಯ ಹತ್ಯೆ ಪ್ರಕರಣ: ಮರು ತನಿಖೆಗೆ ಗುಜರಾತ್ ಹೈಕೋರ್ಟ್ ನಕಾರ
»ಮೊಬೈಲ್ ಸಂಪರ್ಕ ಮಾರ್ಗಸೂಚಿ ಟ್ರಾಯ್‌ಗೆ ಕಡೆಯ ಅವಕಾಶ
»ರೂ. 36,900 ಕೋಟಿ ಇಂಧನ ಸಬ್ಸಿಡಿ ನೀಡಲು ಮುಂಚೂಣಿ ತೈಲ ಸಂಸ್ಥೆಗಳಿಗೆ ಕೇಂದ್ರದ ಮನವಿ
»2ಜಿ ಪರವಾನಿಗೆ ರದ್ದತಿ ತೀರ್ಪು ಸರಕಾರಿ ಮಟ್ಟದಲ್ಲಿ ಚರ್ಚಿಸಲು ನಾರ್ವೆಯ ಇಚ್ಛೆ

 

©2007-2009 GulfKannadiga.com | ಸಂಪಾದಕೀಯ ಮಂಡಳಿ
Designed by Alan D'Souza, Moodbidri