ರಾಷ್ಟ್ರಪತಿಯವರಿಂದ ಮೊಯ್ಲಿಯವರಿಗೆ ಭಾರತೀಯ ಜ್ಞಾನಪೀಠದ ಪ್ರತಿಷ್ಠಿತ ಮೂರ್ತಿದೇವಿ ಪ್ರಶಸ್ತಿ ಪ್ರದಾನ |
ಪ್ರಕಟಿಸಿದ ದಿನಾಂಕ : 2010-03-19
‘ಭಾರತೀಯತೆಯಲ್ಲಿ ಕನ್ನಡದ ಪ್ರಭಾವ’
ವಚನ ಸಾಹಿತ್ಯವೂ ಸೇರಿದಂತೆ ಕನ್ನಡದಲ್ಲಿ ಅನಾದಿ ಕಾಲದಿಂದಲೂ ಶ್ರೇಷ್ಠ ಸಾಹಿತ್ಯ ಕೃತಿಗಳು ಹೊರ ಬಂದಿದ್ದು, ಭಾರತೀಯ ಚಿಂತನೆ ಮೇಲೆ ಗಾಢ ಪ್ರಭಾವ ಬೀರಿವೆ ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ನವದೆಹಲಿ: ‘ಶ್ರೀ ರಾಮಾಯಣ ಮಹಾನ್ವೇಷಣಂ’ ರಚಿಸಿರುವ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಅವರಿಗೆ ಗುರುವಾರ ಭಾರತೀಯ ಜ್ಞಾನಪೀಠದ ಪ್ರತಿಷ್ಠಿತ ಮೂರ್ತಿದೇವಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಪ್ರಶಸ್ತಿಯೊಂದಿಗೆ 2 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನೂ ಮೊಯಿಲಿ ಸ್ವೀಕರಿಸಿದರು.
‘ಯಾರೂ ಪ್ರಶಸ್ತಿಗಾಗಿ ಬರೆಯುವುದಿಲ್ಲ. ಆದರೆ, ಪ್ರಶಸ್ತಿಗಳು ಬರಹಗಾರನ ಉತ್ಸಾಹವನ್ನು ನೂರ್ಮಡಿಗೊಳಿಸುತ್ತವೆ. ರಾಮಾಯಣ ಮಹಾನ್ವೇಷಣಂ ಯಾತ್ರೆಯಲ್ಲಿ ಮಾರ್ಗದರ್ಶನ ಮಾಡಿದ ಗುರು ಪ್ರೊ. ಕೆ. ಅನಂತರಾಮು, ನನ್ನ ಪತ್ನಿ ಮಾಲತಿ ಹಾಗೂ ತಾಯಿಯನ್ನು ಈ ಸಂದರ್ಭದಲ್ಲಿ ಸ್ಮರಿಸಲೇಬೇಕು’ ಎಂದು ಮೊಯಿಲಿ ನುಡಿದರು.
ಭಾರತೀಯ ಜ್ಞಾನಪೀಠ ಟ್ರಸ್ಟ್‌ನ ಇಂದೂ ಜೈನ್, ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಹಾಗೂ ರವಿಶಂಕರ್ ಗುರೂಜಿ ಸಮಾರಂಭದಲ್ಲಿ ಹಾಜರಿದ್ದರು.
ವರದಿಯ ವಿವರಗಳು |
 |
ವರದಿಗಾರರು : ಗಲ್ಫ್ ಕನ್ನಡಿಗ ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
| Dhanaraja Padubidri Devadiga, Abu Dhabi | 2010-03-21 | | Dr.M.Verappa Moily is one of great personality in Indian Politics. His contribution is noble. May God bless him and his family long life, health and happiness. |
|