| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಆನೇಕಲ್: ನಿಂತ ನೀರಾಗಿರುವ ಚಳವಳಿಗಳು: ಸುಬ್ಬು ಹೊಲೆಯಾರ್ |
ಪ್ರಕಟಿಸಿದ ದಿನಾಂಕ : 2010-03-19
ಆನೇಕಲ್, ಮಾ.೧೮: ಪ್ರಸ್ತುತ ಸಾಮಾಜಿಕ ಕಾಳಜಿಗಳಿರಬೇಕಿದ್ದ, ಸೂಕ್ಷ್ಮ ಸಂವೇದಿಯಾಗಿ ಪ್ರತಿಕ್ರಿಯಿಸಬೇಕಿದ್ದ ಚಳವಳಿಗಳು ಇಂದು ತಟಸ್ಥವಾಗಿ ನಿಂತ ನೀರಾಗಿವೆ ಎಂದು ಪ್ರಗತಿಪರ ಚಿಂತಕ ಸುಬ್ಬು ಹೊಲೆಯಾರ್ ಪ್ರಸ್ತಾಪಿಸಿದ್ದಾರೆ.
ಪಟ್ಟಣದ ಉದಯೋನ್ಮುಖ ಕವಿ ಆದೂರ್ ಪ್ರಕಾಶ್ ಮನೆಯಂಗಳದಲ್ಲಿ ‘ಯುಗಾದಿಯ ಸಂಜೆ ಕವನಗಳ ವಾಚನ’ದ ಅಂಗವಾಗಿ ಜೇನುಗೂಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಚೈತ್ರೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬುದ್ದನ ದೃಷ್ಟಾಂತವನ್ನು ನೀಡುತ್ತಾ ಸಹನೆ ಮತ್ತು ಸಂಯಮದಿಂದ ಆಗುವ ಅನುಕೂಲ ಬಗ್ಗೆ ತಿಳಿಸಿದರು. ಸಮಾಜದಲ್ಲಿ ಕವಿ ಮತ್ತು ಸಾಹಿತಿಗಳು ಈಗಿನ ಸಾಮಾಜಿಕ ಕಂದಕಗಳಿಗೆ ಔಷಧೀಯ ಗುಣವನ್ನು ಹಚ್ಚಿ ಒಗ್ಗೂಡಿಸುವ ಜವಾಬ್ದಾರಿಯುತ ಕಾಯಕಕ್ಕೆ ಚಾಲನೆ ನೀಡುವ ಅಗತ್ಯವಿದೆ. ಜಾತಿ ಧರ್ಮಗಳು ತಾರತಮ್ಯಗಳನ್ನು, ಪ್ರತ್ಯೇಕತೆಗಳನ್ನು ಹುರಿದುಂಬಿಸಿ ಮಾನಯತೆಯ ಬದಲಾಗಿ ಸಂಕುಚಿತ ಮನೋಭಾವವನ್ನು ಬಿತ್ತುತ್ತಿರುವ ಸಂದರ್ಭದಲ್ಲಿ ನಿಜವಾದ ಸಾಹಿತಿ ವರ್ಗ ಇದಕ್ಕೆ ಸಡ್ಡು ಹೊಡೆಯದ ಹೊರತು ಸಾಹಿತ್ಯಕ್ಕೆ ಅರ್ಥವಿರು ವುದಿಲ್ಲ ಎಂದರು. ಬುದ್ಧ ಧರ್ಮ ವೆಂದರೆ ಪ್ರಕೃತಿ ಎಂದರ್ಥ. ಇಲ್ಲಿ ಪ್ರಕೃತಿಯೇ ಪ್ರಧಾನವಾಗಬೇಕೆಂದ ಬುದ್ಧ ಕೃತಿಯನ್ನು ತಿರಸ್ಕೃರಿಸುವಂತೆ ಇಡೀ ಏಷ್ಯ ಖಂಡಕ್ಕೆ ಸಾರಿದ ಎಂದರು.
ಇಂದಿನ ಧರ್ಮಗಳು ಇಂತಹ ಕೈಂಕರ್ಯವನ್ನು ನಡೆಸಬೇಕಿದೆ. ಮಠಗಳಿಗೆ ಮಿತಿ ಇದೆ. ಆದರೆ ಕವಿ ಮತ್ತು ಸಾಹಿತಿಗೆ ಮಿತಿಯ ಪರಧಿ ಇರುವುದಿಲ್ಲ. ಸಾಮಾಜಿಕ ಪಿಡುಗುಗಳನ್ನು ತೊರೆಯುವಲ್ಲಿ ಹಾಗೂ ಅದರ ಕಲ್ಪನೆಯನ್ನು ಬಿತ್ತುವಲ್ಲಿ ಮನಸ್ಸು ಹಾತೊರೆಯಬೇಕು ಎಂದರು.
ಸಾಲುಮರದ ತಿಮ್ಮಕ್ಕ ಮರಗಳನ್ನು ಎತ್ತರಕ್ಕೆ ಬೆಳೆಸಿ, ತಾನೂ ಬದುಕಿನ ಎತ್ತರಕ್ಕೆ ಬೆಳೆದಳು. ಇಂತಹ ನಿಸ್ವಾರ್ಥ ಮನೋಭಾವ ಇಂದಿನ ಪೀಳಿಗೆಗೆ ಅತ್ಯಗತ್ಯ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆದೂರು ಪ್ರಕಾಶ್, ತಾಯಂದಿರು ಇಂದು ಕೇವಲ ಯಾಂತ್ರಿಕ ವಾಗಿ ಬದುಕನ್ನು ಮನಸ್ಸಿನಲ್ಲಿಟ್ಟು ವೈದ್ಯರೋ, ಸಾಪ್ಟ್‌ವೇರ್ ಎಂಜಿಯರ್ ಮುಂತಾದ ಹುದ್ದೆಗಳನ್ನು ಹೊಂದಲೆಂದು ಬಯಸುತ್ತಿದ್ದಾರೆ. ಆದರೆ ತನ್ನ ಮಗ ಸಮಾಜಕ್ಕೆ ಸೇವೆ ಮಾಡುವಂತಹ ಸಾಮಾಜಿಕ ಕಾಳಜಿಯುಳ್ಳ ಚಿಂತಕ, ಚಿಕಿತ್ಸಕನಾಗಬೇಕೆಂಬುವು ದನ್ನು ಮರೆತಿರುವುದು ದುರಾದೃಷ್ಟವೆಂದರು.
ಕಾರ್ಯಕ್ರಮದಲ್ಲಿ ಆನೇಕಲ್ ಕಾಟಿ ಕೃಷ್ಣಮೂರ್ತಿ ಯವರ ಕವನ ‘ಯುಗಾದಿ’ ಮಂಡಿಸಲಾಯಿತು. ಸಂವಾದ ಬಳಗದ ಮುರಳಿ ಮೋಹನ ಕಾಟಿಯ ಒನ್‌ವೇ ಕವನ ಕಾರ್ಡಿಲ್ಲದೇ ಮನುಜ ಬದುಕಿಯೇ ಇಲ್ಲ ಈ ಕಡೆಯಿಂದ ಆಕಡೆಗೆ ಹೋಗುವಂತೆಯೇ ಇಲ್ಲ, ಭೂಮಿಯಲ್ಲಿ ಉಸಿರಾಡಲು, ಅಸ್ತಿತ್ವದಲ್ಲಿರಲು ಬದುಕಿರಲು ಇಂದು ಕ್ರೆಡಿಟ್‌ಕಾರ್ಡ್, ಲೈಸೆನ್ಸ್, ಐಡಿ ಕಾರ್ಡ್ ಇನ್ನಿತರ ಕಾರ್ಡಿಲ್ಲದಿದ್ದರೆ ಭೂಮಿಯೇ ನಿಷೇಧಿತ ಪ್ರದೇಶ. ಬದುಕು ಕಟ್ಟಳೆಗಳ ಪ್ರದೇಶ ನೀವು ಇಲ್ಲಿ ಬದುಕಿಯೇ ಇಲ್ಲ ಎಂಬ ಶುಷ್ಕ ವ್ಯವಸ್ಥೆ ಯನ್ನು ಅಣಕಿಸುವ ಕವನ ಎಲ್ಲರ ಮೆಚ್ಚುಗೆ ಗಳಿಸಿತು.
ಡಾ. ಭೈರಮಂಗಲ ರಾಮೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯುಗಾದಿಯ ತೆರೆದ ಬಯಲಿನಲ್ಲಿ ಸಂಜೆ ವೇದಿಕೆಯಲ್ಲಿ ಆನೇಕಲ್ ಪುರಸಬಾಧಕ್ಷೆ ಸುಜಾತ ರಾಜಣ್ಣ, ಆದೂರು ಪ್ರಕಾಶ್, ಸುಬ್ಬು ಹೊಲೆಯಾರ್ ಉದ್ಘಾಟಿಸಿದರು. ಜೇನುಗೂಡು ವೇದಿಕೆಯ ತಾಸಿ ತಿಮ್ಮಯ್ಯ, ಜಗನ್ನಾಥ್‌ರಾವ್ ಬಹುಳೆ ಹಾಜರಿದ್ದರು. ಜಯರಾಮ್ ಸರ್ಜಾ ವಂದಿಸಿ, ಮಹೇಶ್ ಊಗಿನಳ್ಳಿ ಕಾರ್ಯಕ್ರಮ ನಿರೂಪಿಸಿದರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
| »ಶೋಭಾ ತಂದೆ ವೈಕುಂಠಕ್ಕೆ ಯಡ್ಡಿ ಪಟಾಲಂ ಹಾಜರ್ | | »ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ' | | »ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು? | | »ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ | | »ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated) | | »ಮೈಸೂರು: ತೆರೆದ ತೊಟ್ಟಿಗೆ ಬಿದ್ದು ಆರು ವರ್ಷದ ಬಾಲಕ ಸಾವು | | »ಮಂಡ್ಯ: ನಗರಸಭೆ ಸಾವಾನ್ಯ ಸಭೆಗೆ ಅಡ್ಡಿ: ಜೆಡಿಎಸ್‌ನ ನಾಲ್ವರ ಅವಾನತು | | »ತುಮಕೂರಿನಲ್ಲಿ ಹೆಣ್ಣು ಮಕ್ಕಳ ಪತ್ತೆ: ಅನಾಥ ಮಕ್ಕಳ ಹಿಂದೆ ಭಿಕ್ಷಾಟನಾ ಜಾಲದ ಶಂಕೆ | | »ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ | | »ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ | | »ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ | | »ಬೋಧಿ ದಮ್ಮ ಬಂತೇಜಿ ಬಿಡುಗಡೆಗೆ ಆಗ್ರಹಿಸಿ ಧರಣಿ | | »ಗಣಿಗಾರಿಕೆ ಸ್ಥಗಿತ : 20,000 ಕೋಟಿ ರು ನಷ್ಟ | | »ಕೆ.ಎಸ್.ಸಿ.ಎ. ಡೆಲ್ ಶಾಲಾ ಟೂರ್ನಿ ಬಳ್ಳಾರಿ ಶಾಲಾ ತಂಡ ಚಾಂಪಿಯನ್ | | »ಮಾಜಿ ಸಚಿವರ ಮೊಂಡು ವಾದ; ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ | | »ಕಾಂಗ್ರೆಸ್‌ನಂತೆ ನಾವು ಚಿಲ್ಲರೆ ರಾಜಕಾರಣ ಮಾಡಲ್ಲ: ಡಿ.ವಿ. ಸದಾನಂದ ಗೌಡ | | »ತಮಿಳುನಾಡು ರಾಜ್ಯಪಾಲ ರೋಸಯ್ಯರ ಸಂಬಂಧಿ ಮನೋಜ್ ಹತ್ಯೆ ಪ್ರಕರಣ: ಮೂವರು ವಶಕ್ಕೆ | | » ಬನ್ನೂರಮಠ ಲೋಕಾಯುಕ್ತ ಹುದ್ದೆ ನಿರಾಕರಣೆ: ರಾಜ್ಯ ಸರ್ಕಾರ ಯಾರ ಹೆಸರು ಶಿಫಾರಸು ಮಾಡಲಿದೆಂಬ ಕುತೂಹಲ | | »ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ | | »ಕುವೆಂಪು ವಿಶ್ವವಿದ್ಯಾಲಯದ 22ನೇ ವಾರ್ಷಿಕ ಘಟಿಕೋತ್ಸವ: ಕಷ್ಟ ಕಾರ್ಪಣ್ಯ; ಆದರೂ ಬಿಡಲಿಲ್ಲ ಚಿನ್ನದ ಬೇಟೆ | | »ನರಗುಂದ, ಅಥಣಿ ಬಂದ್: ಮೈಸೂರು, ಮಂಗಳೂರಿನಲ್ಲಿ ಆಕ್ರೋಶ | | »ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ.. | | »ಭಿಕ್ಷೆ ಎತ್ತಿದ ಹಣದಿಂದ ತುಮಕೂರಿನಲ್ಲಿ ರೇಣುಕಾ ಎಲ್ಲಮ್ಮ ದೇಗುಲ ನಿರ್ಮಿಸಿದ ಮಂಗಳಮುಖಿಯರು | | »ಅಶ್ಲೀಲ ಕಲಾಪಕ್ಕೆ ಸದನ ಬಲಿ | | »ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ | | »ವಿಧಾನಸೌಧದಲ್ಲಿ ಸಚಿವತ್ರಯರಿಂದ ಅಶ್ಲೀಲ ಚಿತ್ರ ವೀಕ್ಷಣೆ: ಸರಕಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ | | »ಹಾಸನ: ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ | | »ಬನ್ನೇರುಘಟ್ಟಕ್ಕೆ ಪಠಾಣ್, ಸಂದೀಪ್ ಪಾಟೀಲ್ ಭೇಟಿ | | »ಪಾವಗಡಕ್ಕೆ ಕುಡಿಯುವ ನೀರಿಗೆ ಆಗ್ರಹಿಸಿ ಪಾದಯಾತ್ರೆ: ‘ಬೆಂಗಳೂರು ಚಲೋ’ಗೆ ವಿದುಕ್ತ ಚಾಲನೆ | | »‘ಬ್ಲೂ ಫಿಲಂ’ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಶಾಸಕ ಸ್ಥಾನದಿಂದಲೂ ಅನರ್ಹಕ್ಕೆ ಒತ್ತಾಯ | | »ಶಾಸಕತ್ವ ಅನರ್ಹಗೊಳಿಸಲು ಆಗ್ರಹಿಸಿ ಸಿಪಿಐ ಧರಣಿ | | »ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ? | | »ನಾವೇಕೆ ಕ್ಷಮೆಯಾಚಿಸ್ಬೇಕು-ಡೀವಿ; ಕಳಂಕಿತರಿಗೆ ಬಿಜೆಪಿ ಬೆಂಬಲ | | »ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ | | »ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ 'ಕೈ' ಪ್ರತಿಭಟನೆ, ಪ್ರತಿಕೃತಿ ದಹನ | | »ಬಿಬಿಎಂಪಿ ಹಗರಣ:ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ | | »ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' 'ಹೌಸ್ ಫುಲ್ ಜರ್ನಿ' ಆರಂಭ: ರೈಲಿನಲ್ಲಿ ಅಮೆರಿಕ, ಆಸ್ಟ್ರಿಯಾದ 80 ಪ್ರವಾಸಿಗರು | | »ಅನುದಾನ ಬಿಡುಗಡೆಗೆ ಆಗ್ರಹಿಸಿ ಆಮರಣ ಉಪವಾಸ : ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು | | »ಯೋಗ ವಿಜ್ಞಾನ ಶಿಬಿರ: ಬಜೆಟ್‌ನಲ್ಲಿ ಯೋಗಕ್ಕೆ ವಿಶೇಷ ಒತ್ತು: ಸಿಎಂ | | »ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ: ಮಾಜಿ ಸಿಎಂ ಯಡಿಯೂರಪ್ಪ ನನ್ನ ಸಂಬಂಧಿಕರಲ್ಲ: ನ್ಯಾ. ಬನ್ನೂರಮಠ ( Update) | | »ಸದನದಲ್ಲಿ ಮೊಬೈಲ್ ಫೋನ್ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್ ಮಂತ್ರಿ ಸ್ಥಾನಕ್ಕೆ ರಾಜಿನಾಮೆ | | »ಹೂವಿನಹಡಗಲಿಯಲ್ಲಿ ಪ್ರತ್ಯೇಕ ದುರಂತ : ಅಪಘಾತದಲ್ಲಿ 8, ತೆಪ್ಪ ಮುಳುಗಿ 5ಸಾವು | | »ಆಧಾರ್ ಕಾರ್ಡ್‌ಗೆ ಲಂಚವೇ ಆಧಾರ: ಸರ್ಕಾರದಿಂದ ತನಿಖೆ ಭರವಸೆ | | »50 ಕೋಟಿ ಯುವಕರಿಗೆ ಕೌಶಲ ತರಬೇತಿ: ಖರ್ಗೆ | | »ಏಡ್ಸ್ ಜಾಗೃತಿ ಜಾಥಾಕ್ಕೆ ಡಾ.ಸಲೀಂ ಚಾಲನೆ | | »ಕಲ್ಲಡ್ಕ ಭಟ್ಟರ ಗಡಿಪಾರಿಗೆ ಒತ್ತಾಯ: ಸದನದಲ್ಲಿ ಕೋಲಾಹಲ; ವಿಪಕ್ಷದಿಂದ ಸಭಾತ್ಯಾಗ | | »ತರಕಾರಿ ಸೇವಿಸಿ; ರೋಗ ತಡೆಗಟ್ಟಿ: ಡಾ.ಎಂ.ಆರ್. ಹುಲಿನಾಯ್ಕರ್ | | »ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ: ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ | | »ಮಂಡ್ಯ: ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸೊಗಡು ಅನಾವರಣ | | »ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬ್ರಹ್ಮರಥೋತ್ಸವ | |