| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ತುಮಕೂರು: ವಿದ್ಯುತ್ ಅವಘಡ: ಶಾಲಾ ಕಂಪ್ಯೂಟರ್ ಭಸ್ಮ |
ಪ್ರಕಟಿಸಿದ ದಿನಾಂಕ : 2010-03-19
ಹುಳಿಯಾರು, ಮಾ.೧೮: ರೈತರೊಬ್ಬರು ವೈರ್ ಬದಲಿಸುವ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಸರಕಾರಿ ಶಾಲೆಯ ೧೦ ಕಂಪ್ಯೂಟರ್ ಸೇರಿದಂತೆ ಗ್ರಾಮದ ಹಲವಾರು ಮನೆಗಳ ವಿದ್ಯುತ್ ಎಲೆಕ್ಟ್ರಾನಿಕ್ ವಸ್ತುಗಳು, ಟಿವಿ ಹಾಗೂ ಸಾವಿರಾರು ರೂ.ಬೆಲೆ ಬಾಳುವ ವಿದ್ಯುತ್ ಪರಿಕರಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಹೋಬಳಿಯ ದಬ್ಬಗುಂಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿ ಸೇರಿದಂತೆ ಪ್ರೌಢಶಾಲೆ ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ವಿದ್ಯುತ್ ಪರಿವರ್ತಕವನ್ನು ಜೋಡಿಸ ಲಾಗಿತ್ತು. ಆದರೆ ಗ್ರಾಮದ ರೈತ ರೊಬ್ಬರು ಈ ಪರಿವರ್ತಕ ದಿಂದಲೇ ತಮ್ಮ ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಪಡೆದಿದ್ದು, ವೊಲ್ಟೇಜ್ ಪಡೆಯುವ ಸಲುವಾಗಿ ಪ್ರತಿ ದಿನ ವೈರ್ ಬದಲಾಯಿಸುತ್ತಿದ್ದರು. ಇದೇ ರೀತಿ ವೈರ್ ಬದಲಿಸುವ ಸಂದರ್ಭ ದಲ್ಲಿ ಹೈವೋಲ್ಟೇಜ್ ವಿದ್ಯುತ್ ಹರಿದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಈ ಅವಘಡದಿಂದ ಇಲ್ಲಿನ ಸರಕಾರಿ ಪ್ರೌಢಶಾಲೆಯ ೧೦ ಕಂಪ್ಯೂಟರ್‌ಗಳು ಸುಟ್ಟು ನಿಷ್ಕ್ರಿಯವಾಗಿದೆ. ಅಲ್ಲದೆ, ಯುಪಿಎಸ್ ಹಾಗೂ ವೈರಿಂಗ್ ಸುಟ್ಟು ಹೋಗಿವೆ. ಶಾಲೆಯ ಪಕ್ಕದಲ್ಲಿ ವಾಸ ವಾಗಿದ್ದ ಪುಟ್ಟಣ್ಣ, ವೆಂಕಟಾಚಲಯ್ಯ, ಚಿಕ್ಕತಿಮ್ಮಯ್ಯ, ರಂಗಧಾಮಯ್ಯ, ಹನುಮಂತಯ್ಯ ಎಂಬವರಿಗೆ ಸೇರಿದ ಟಿವಿ, ವಿದ್ಯುತ್ ಪರಿಕರಗಳು ಹಾಗೂ ವೈರಿಂಗ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಗ್ನಿ ಶಾಮಕದಳ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ವಸ್ತುಗಳು ಸುಟ್ಟು ಭಸ್ಮವಾಗಿದ್ದವು. ಬೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
|