| ಇತ್ತೀಚಿನ 20 ಪ್ರಮುಖ ವರದಿಗಳು |
|
|
|
ಸಿರಿವಾರ-ಚಾಗನೂರು: ರೈತರ ಕೃಷಿ ಭೂಮಿಗೆ ಬೆಲೆ ನಿಗದಿ; ರಸ್ತೆಯ ಬದಿಯ ಭೂಮಿಗೆ ಪ್ರತಿ ಎಕರೆಗೆ 16 ಲಕ್ಷ ರೂ. ನಿಗದಿ |
ಪ್ರಕಟಿಸಿದ ದಿನಾಂಕ : 2010-03-19
ಬಳ್ಳಾರಿ, ಮಾ. ೧೮: ವಿಮಾನ ನಿಲ್ದಾಣ ನಿರ್ಮಾಣದಿಂದ ಸಂತ್ರಸ್ತರಾಗುವ ಸಿರಿವಾರ- ಚಾಗನೂರು ರೈತರ ಜಮೀನಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಗುರುವಾರ ನಡೆದ ಭೂ ಸಂತ್ರಸ್ತ ರೈತರ ಸಭೆಯಲ್ಲಿ ಪರ ಮತ್ತು ವಿರೋಧದ ಮಧ್ಯೆಯೇ ಪ್ರತಿ ಎಕರೆಗೆ ೧೬ - ೧೨ ಲಕ್ಷ ರೂ. ಪ್ರಮಾಣದಲ್ಲಿ ಬೆಲೆಯನ್ನು ನಿಗದಿ ಮಾಡಲಾಯಿತು.
ಜಿಲ್ಲಾಧಿಕಾರಿ ಬಿ. ಶಿವಪ್ಪ ಉದ್ದೇಶಿತ ವಿಮಾನ ನಿಲ್ದಾಣಕ್ಕಾಗಿ ಭೂಮಿ ಕಳೆದುಕೊಳ್ಳುವ ಸಿರಿವಾರ - ಚಾಗನೂರು ಗ್ರಾಮಗಳ ಭೂ ಸಂತ್ರಸ್ತ ರೈತರ ಸಭೆಯನ್ನು ಗುರುವಾರ ಬೆಳಗ್ಗೆ ಏರ್ಪಡಿಸಿದ್ದರು.
ಈ ಸಭೆಯನ್ನು ಉದ್ದೇಶಿಸಿ ಮಾತ ನಾಡಿದ ಜಿಲ್ಲಾಧಿಕಾರಿ, ಕಂದಾಯ ನೋಂದಣಿ ದಾಖಲೆಗಳ ಪ್ರಕಾರ ಚಾಗನೂರು ಗ್ರಾಮದ ಭೂಮಿಗಳ ಬೆಲೆ ಎಕರೆಗೆ ೧,೩೪,೨೩೦ ರೂ., ಸಿರವಾರ ಗ್ರಾಮದ ಭೂಮಿಗಳ ಬೆಲೆ ೧,೪೨,೬೨೭ ರೂ. ಆಗಿದೆ. ಆದರೆ, ಕೆಐಡಿಬಿಯು ರಸ್ತೆ ಬದಿಯ ಭೂಮಿ ಗಳಿಗೆ ಪ್ರತಿ ಎಕರೆಗೆ ೧೬ ಲಕ್ಷ ರೂ. ಮತ್ತು ರಸ್ತೆಯಿಂದ ದೂರಕ್ಕೆ ಇರುವ ಪ್ರತಿ ಎಕರೆಗೆ ೧೨ ಲಕ್ಷ ರೂ. ಪರಿಹಾರ ನೀಡಲಿದೆ. ಇದು ಜಿಲ್ಲಾಡಳಿತದಿಂದ ನಿರ್ಧಾರವಾದ ಬೆಲೆ. ಸಂತ್ರಸ್ತ ರೈತರು, ಭೂ ಮಾಲಕರು ತಮ್ಮ ಅಹವಾಲು ಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಮುಕ್ತ ಅವಕಾಶ ಇದೆ ಎಂದರು.
ಬೆಳಗ್ಗೆ ೧೧.೩೦ರ ಸುಮಾರಿಗೆ ಪ್ರಾರಂಭ ಆದ ಸಭೆ ಕೇವಲ ೧೦ ನಿಮಿಷಗಳಲ್ಲಿ ಮುಕ್ತಾಯವಾಯಿತು. ವಿಮಾನ ನಿಲ್ದಾಣಕ್ಕೆ ಕೃಷಿ ಭೂಮಿ ನೀಡಲು ಹೋರಾಟ ನಡೆಸುತ್ತಿರುವ ರೈತರ ಹೋರಾಟದ ಸಂಚಾಲಕ, ನ್ಯಾಯವಾದಿ ಮಲ್ಲಿಕಾರ್ಜುನರೆಡ್ಡಿ ಯವರನ್ನು ಸಭಾಭವನದ ಒಳಗಡೆ ಬಿಡಲು ಪೊಲೀಸರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಅನೇಕ ರೈತರು ತಮಗೆ ಕಾನೂನು, ಇನ್ನಿತರ ವಿಷಯಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಾವು ಮಲ್ಲಿಕಾರ್ಜುನರೆಡ್ಡಿಯವರನ್ನು ನಮ್ಮ ಪರವಾದ ನ್ಯಾಯವಾದಿಯಾಗಿ ನೇಮಕ ಮಾಡಿಕೊಂಡಿದ್ದೇವೆ. ಮಲ್ಲಿಕಾರ್ಜುನರೆಡ್ಡಿ ಸಭೆಯಲ್ಲಿ ಬಂದಲ್ಲಿ ಮಾತ್ರ ನಾವು ಮಾತನಾಡು ತ್ತೇವೆ. ಇಲ್ಲವಾದಲ್ಲಿ ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ಜಿಲ್ಲಾಧಿಕಾರಿ ಯವರಲ್ಲಿ ವಾದ ಮಂಡಿಸಿದರು. ಆಗ, ರೈತರಿಂದ ಲಿಖಿತ ಹೇಳಿಕೆಯನ್ನು ಪಡೆದು ಮಲ್ಲಿಕಾರ್ಜುನ ರೆಡ್ಡಿಯನ್ನು ಸಭೆಯ ಒಳಗಡೆ ಬಿಡಲಾಯಿತು.
ಈ ಸಭೆಯಲ್ಲಿ ಪೊಲೀಸರು ವಿಮಾನ ನಿಲ್ದಾಣ ವಿರೋಧಿಸುವ ರೈತರನ್ನು ಸಭಾಭವನಕ್ಕೆ ಬಿಡುವಲ್ಲಿ ಪಹಣಿ, ಗುರುತಿನ ಚೀಟಿ ಪರೀಕ್ಷೆ ಮಾಡಿದರು. ಪರವಾದ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳುಹಿಸಿ ಸರಕಾ ರದ ಪರವಾಗಿ ನಿಲುವು ಮಂಡಿಸಲು ಅವಕಾಶ ನೀಡಲಾಗಿದೆ. ಅಲ್ಲದೇ, ಬೆಲೆ ನಿಗದಿಯ ಈ ಸಭೆಗೆ ವಿರೋಧ ಗುಂಪಿನ ರೈತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಿರಲಿಲ್ಲ. ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಏಕಪಕ್ಷೀಯ ವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೇ, ತಾರತಮ್ಮ ನೀತಿಯನ್ನು ಅನುಸರಿಸಿದ್ದಾರೆ ಎಂದು ಇನ್ನಿತರ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದ ಭೂಮಿಯನ್ನು ಪರಭಾರೆ ಮಾಡುವುದರ ಪರವಾದ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಇದ್ದ ಕಾರಣ ವಿರೋಧಿ ಗುಂಪಿನ ಧ್ವನಿ ಕ್ಷೀಣವಾಗಿತ್ತು. ಪರ ಗುಂಪು ನಾವು ಲಕ್ಷಾಂತರ ರೂ. ಸಾಲ ಮಾಡಿಕೊಂಡಿ ದ್ದೇವೆ. ಭೂಮಿಯಿಂದ ನಮಗೇನು ಲಾಭ ಇಲ್ಲ. ಒಳ್ಳೆಯ ರೇಟ್ ಬಂದಿದೆ. ನಾವು ಕೊಡುತ್ತೇವೆ ಎಂದೇ ವಾದ ಮಂಡಿಸಿದರು. ಸಭೆಯ ನಂತರ ಹೊರಗಡೆ ಪಟಾಕಿ ಸಿಡಿಸಿ ಸಂಭ್ರಮಿಸಿ ಹರ್ಷ ವ್ಯಕ್ತಪಡಿಸಿದರು.
ವಿಮಾನ ನಿಲ್ದಾಣಕ್ಕೆ ಅವಕಾಶ ನೀಡೆವು: ರೈತರ ಹೋರಾಟದ ಸಂಚಾಲಕ ಮಲ್ಲಿಕಾರ್ಜುನ ರೆಡ್ಡಿ
ಬಳ್ಳಾರಿ, ಮಾ. ೧೮: ಸಿರಿವಾರ- ಚಾಗನೂರು ಫಲವತ್ತಾದ ಕೃಷಿ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ರೈತರ ಹೋರಾಟದ ಸಂಚಾಲಕ ಮಲ್ಲಿಕಾರ್ಜುನ ರೆಡ್ಡಿ ಹೇಳಿದ್ದಾರೆ.
ಸರಕಾರ ಎಷ್ಟೇ ಹಣ ಕೊಟ್ಟರೂ ನಾವು ಭೂಮಿಯನ್ನು ನೀಡುವುದಿಲ್ಲ. ನಾವು ನಿರಾಶ್ರಿತರಾಗುವುದಿಲ್ಲ. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದರು. ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರು ಕೂಡ ಇದಕೆ ಧ್ವನಿಗೂಡಿಸಿ, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ವಿಧಾನಸೌಧದವರೆಗೆ ಹೋರಾಟ ಮುಂದುವರಿಸಲು ನಿರ್ಧ ರಿಸಲಾಗಿದೆ. ಸಿರವಾರ - ಚಾಗನೂರು ರೈತರ ಹೋರಾಟ ಮತ್ತೊಮ್ಮೆ ಬೆಂಗಳೂರು ತಲುಪಲಿದೆ. ಸಚಿವ ಜಿ. ಜನಾರ್ದನ ರೆಡ್ಡಿ ಸದನದಲ್ಲಿ ಬಳ್ಳಾರಿ ಯಲ್ಲಿ ವಿಮಾನ ನಿಲ್ದಾಣ ನಿರ್ಮಾ ಣಕ್ಕೆ ಯಾರ ವಿರೋಧವೂ ಇಲ್ಲ. ಎಲ್ಲ ರೈತರು ಭೂಮಿ ನೀಡಲು ಒಪ್ಪಿದ್ದಾರೆ. ಯಾವೊಬ್ಬ ರೈತರೂ ಕೂಡ ಭೂಮಿ ನೀಡಲು ವಿರೋಧ ವ್ಯಕ್ತಪಡಿಸಿಲ್ಲ ಎಂದು ಹೇಳಿದ್ದಕ್ಕೆ ವಿರುದ್ಧ ವಾಗಿ ರೈತರ ಹೋರಾಟ ಬೆಂಗಳೂರಿನಲ್ಲಿ ಶುಕ್ರವಾರ ನಡೆಯಲಿದೆ. ವಿಮಾನ ನಿಲ್ದಾಣಕ್ಕೆ ವಿರೋಧ ವ್ಯಕ್ತಪಡಿಸಿ ರೈತರು ಅಫಿದವಿತ್‌ಗಳನ್ನು ಸಿದ್ಧಪಡಿಸಿ, ವಿಧಾನಸಭಾಧ್ಯಕ್ಷರ ಕೈಗೆ ಸಲ್ಲಿಸಲಿದ್ದಾರೆ ಎಂದು ನ್ಯಾಯವಾದಿ, ಹೋರಾಟ ಗಾರ ಮಲ್ಲಿಕಾರ್ಜುನರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ರೈತರ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತಮ್ಮೆಲ್ಲರ ವಿರೋಧ ಇದೆ. ಕೇವಲ ಬೆರಳೆಣಿಕೆ ಯಷ್ಟು ರೈತರು ಮಾತ್ರ ರಾಜಕೀಯ ಸ್ವಹಿತಾಸಕ್ತಿಗೆ ಬಲಿಯಾಗಿ ಭೂಮಿಯನ್ನು ಮಾರಿಕೊಳ್ಳುತ್ತಿದ್ದಾರೆ. ಸಚಿವ ಜಿ. ಜನಾರ್ದನ ರೆಡ್ಡಿ ಸದನಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆಂದು ವಾದ ಮಂಡಿಸಲಿದ್ದಾರೆ. ಗುರುವಾರ ರಾತ್ರಿ ಬೆಂಗಳೂರಿಗೆ ಪ್ರಯಾಣಿಸಲಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ವರದಿಯ ವಿವರಗಳು |
 |
ಕೃಪೆ : ವಾರ್ತಾಭಾರತಿ ವರದಿಗಾರರು : ಬೆಂಗಳೂರು ವರದಿಗಾರರು
ಪ್ರಕಟಿಸಿದ ದಿನಾಂಕ : 2010-03-19 00:00:00
|
|
|
|
| »ಶೋಭಾ ತಂದೆ ವೈಕುಂಠಕ್ಕೆ ಯಡ್ಡಿ ಪಟಾಲಂ ಹಾಜರ್ | | »ಹೀಗೂ ಸಮರ್ಥನೆ; ಸಚಿವರು ಸೆಕ್ಸ್ ನೋಡಿದ್ದಾರೆ ಅಷ್ಟೆ 'ಮಾಡಿಲ್ಲ' | | »ಸೆಕ್ಸ್ ಫಿಲ್ಮ್ ಸವದಿ ನೋಡುವುದಕ್ಕೂ ಮುನ್ನ ಹಲವು ಶಾಸಕರು ನೋಡಿದ್ದರಂತೆ. ನೋಡಿ ಮೂರ್ಛೆ ಹೋದ ಶಾಸಕ ಯಾರು? | | »ಅಶ್ಲೀಲ ದೃಶ್ಯ ವೀಕ್ಷಣೆ; ನಿಲುವಳಿ ಸೂಚನೆಗೆ ಪ್ರತಿಪಕ್ಷಗಳ ಪಟ್ಟು; ಪರಿಷತ್ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; ಗದ್ದಲ ಕೋಲಾಹಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಅಂಗೀಕಾರ | | »ನಾಪತ್ತೆಯಾಗಿದ್ದ ವಜ್ರಾಭರಣ ವ್ಯಾಪಾರಿ ಭೀಕರ ಕೊಲೆ!; ಮೂವರು ಆರೋಪಿಗಳ ಸೆರೆ | ನಿರ್ಲಕ್ಷ್ಯ ಮುಳುವಾಯಿತೇ?(updated) | | »ಮೈಸೂರು: ತೆರೆದ ತೊಟ್ಟಿಗೆ ಬಿದ್ದು ಆರು ವರ್ಷದ ಬಾಲಕ ಸಾವು | | »ಮಂಡ್ಯ: ನಗರಸಭೆ ಸಾವಾನ್ಯ ಸಭೆಗೆ ಅಡ್ಡಿ: ಜೆಡಿಎಸ್‌ನ ನಾಲ್ವರ ಅವಾನತು | | »ತುಮಕೂರಿನಲ್ಲಿ ಹೆಣ್ಣು ಮಕ್ಕಳ ಪತ್ತೆ: ಅನಾಥ ಮಕ್ಕಳ ಹಿಂದೆ ಭಿಕ್ಷಾಟನಾ ಜಾಲದ ಶಂಕೆ | | »ಮಂಡ್ಯ ಬಳಿ ಕಂದಕಕ್ಕೆ ಬಿದ್ದ ಟೆಂಪೊ: 10 ಮಂದಿಯ ದಾರುಣ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ | | »ಬ್ಲೂಫಿಲಂ ವೀಕ್ಷಣೆ: ಸಚಿವರು ರಾಜೀನಾಮೆ ನೀಡಿದ್ದೇ ತಪ್ಪು: ಈಶ್ವರಪ್ಪ | ಚಿಲ್ಲರೆ ರಾಜಕೀಯ: ಸದಾನಂದ ಗೌಡ - ತ್ರಿವಳಿಗಳ ಬೆಂಬಲಕ್ಕೆ ನಿಂತ ಬಿಜೆಪಿ | | »ಬ್ಲೂಫಿಲಂ ವೀಕ್ಷಣೆ: ವಿಪಕ್ಷಗಳಿಂದ ರಾಜ್ಯಪಾಲರ ಭೇಟಿ; ತಕ್ಷಣವೇ ಬಿಜೆಪಿ ಸರಕಾರವನ್ನು ವಜಾಗೊಳಿಸುವಂತೆ ಮನವಿ | | »ಬೋಧಿ ದಮ್ಮ ಬಂತೇಜಿ ಬಿಡುಗಡೆಗೆ ಆಗ್ರಹಿಸಿ ಧರಣಿ | | »ಗಣಿಗಾರಿಕೆ ಸ್ಥಗಿತ : 20,000 ಕೋಟಿ ರು ನಷ್ಟ | | »ಕೆ.ಎಸ್.ಸಿ.ಎ. ಡೆಲ್ ಶಾಲಾ ಟೂರ್ನಿ ಬಳ್ಳಾರಿ ಶಾಲಾ ತಂಡ ಚಾಂಪಿಯನ್ | | »ಮಾಜಿ ಸಚಿವರ ಮೊಂಡು ವಾದ; ಕ್ಷಮೆ ಕೇಳುವಂತಹ ತಪ್ಪು ಮಾಡಿಲ್ಲ | | »ಕಾಂಗ್ರೆಸ್‌ನಂತೆ ನಾವು ಚಿಲ್ಲರೆ ರಾಜಕಾರಣ ಮಾಡಲ್ಲ: ಡಿ.ವಿ. ಸದಾನಂದ ಗೌಡ | | »ತಮಿಳುನಾಡು ರಾಜ್ಯಪಾಲ ರೋಸಯ್ಯರ ಸಂಬಂಧಿ ಮನೋಜ್ ಹತ್ಯೆ ಪ್ರಕರಣ: ಮೂವರು ವಶಕ್ಕೆ | | » ಬನ್ನೂರಮಠ ಲೋಕಾಯುಕ್ತ ಹುದ್ದೆ ನಿರಾಕರಣೆ: ರಾಜ್ಯ ಸರ್ಕಾರ ಯಾರ ಹೆಸರು ಶಿಫಾರಸು ಮಾಡಲಿದೆಂಬ ಕುತೂಹಲ | | »ಬಳೆ ಅತ್ತಿಗುಪ್ಪೆ: ನಿಧಿ ಆಸೆಗೆ ದೇವರ ವಿಗ್ರಹ ಭಗ್ನ | | »ಕುವೆಂಪು ವಿಶ್ವವಿದ್ಯಾಲಯದ 22ನೇ ವಾರ್ಷಿಕ ಘಟಿಕೋತ್ಸವ: ಕಷ್ಟ ಕಾರ್ಪಣ್ಯ; ಆದರೂ ಬಿಡಲಿಲ್ಲ ಚಿನ್ನದ ಬೇಟೆ | | »ನರಗುಂದ, ಅಥಣಿ ಬಂದ್: ಮೈಸೂರು, ಮಂಗಳೂರಿನಲ್ಲಿ ಆಕ್ರೋಶ | | »ಮತ್ತೊಂದು ಮುಜುಗರ!: ಅಡ್ವೊಕೇಟ್ ಜನರಲ್ ಬಿ.ವಿ. ಆಚಾರ್ಯ ಪದತ್ಯಾಗ.. | | »ಭಿಕ್ಷೆ ಎತ್ತಿದ ಹಣದಿಂದ ತುಮಕೂರಿನಲ್ಲಿ ರೇಣುಕಾ ಎಲ್ಲಮ್ಮ ದೇಗುಲ ನಿರ್ಮಿಸಿದ ಮಂಗಳಮುಖಿಯರು | | »ಅಶ್ಲೀಲ ಕಲಾಪಕ್ಕೆ ಸದನ ಬಲಿ | | »ನೀಲಿ ಕಮಲ:.ಕಳಂಕಿತರಿಗೆ ಸದನ ಪ್ರವೇಶ ನಿರ್ಬಂಧ : ಬ್ಲೂಫಿಲಂ ವೀಕ್ಷಣೆ ಪ್ರಕರಣದಿಂದ ತಪ್ಪಿಸಿಕೊಳ್ಳಲು ಸರಕಾರದ ಹುನ್ನಾರ: ಎಂಟೇ ದಿನಕ್ಕೆ ಮೊಟಕುಗೊಂಡ ಅಧಿವೇಶನ | | »ವಿಧಾನಸೌಧದಲ್ಲಿ ಸಚಿವತ್ರಯರಿಂದ ಅಶ್ಲೀಲ ಚಿತ್ರ ವೀಕ್ಷಣೆ: ಸರಕಾರ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ | | »ಹಾಸನ: ವಿಟಿಯು ಕುಲಪತಿ ವಿರುದ್ಧ ಪ್ರತಿಭಟನೆ | | »ಬನ್ನೇರುಘಟ್ಟಕ್ಕೆ ಪಠಾಣ್, ಸಂದೀಪ್ ಪಾಟೀಲ್ ಭೇಟಿ | | »ಪಾವಗಡಕ್ಕೆ ಕುಡಿಯುವ ನೀರಿಗೆ ಆಗ್ರಹಿಸಿ ಪಾದಯಾತ್ರೆ: ‘ಬೆಂಗಳೂರು ಚಲೋ’ಗೆ ವಿದುಕ್ತ ಚಾಲನೆ | | »‘ಬ್ಲೂ ಫಿಲಂ’ ಸಚಿವರ ವಿರುದ್ಧ ಭುಗಿಲೆದ್ದ ಆಕ್ರೋಶ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಶಾಸಕ ಸ್ಥಾನದಿಂದಲೂ ಅನರ್ಹಕ್ಕೆ ಒತ್ತಾಯ | | »ಶಾಸಕತ್ವ ಅನರ್ಹಗೊಳಿಸಲು ಆಗ್ರಹಿಸಿ ಸಿಪಿಐ ಧರಣಿ | | »ಜಿಲ್ಲೆಯನ್ನು ಮುಜುಗರಕ್ಕೀಡು ಮಾಡಿದ ಪಾಲೆಮಾರ್ ; ಯಾಕಿಂಥ ಕೆಲಸ ಮಾಡಿದರು? | ಬಿಜೆಪಿಯ ಹಗರಣಗಳು ಮತ್ತು ಕಳಂಕಿತ ಮಿನಿಸ್ಟರುಗಳು | ವಾಜಪೇಯಿ, ಅಡ್ವಾಣಿ ಬೆಳೆಸಿದ ಪಕ್ಷ ಇದೇನಾ? | | »ನಾವೇಕೆ ಕ್ಷಮೆಯಾಚಿಸ್ಬೇಕು-ಡೀವಿ; ಕಳಂಕಿತರಿಗೆ ಬಿಜೆಪಿ ಬೆಂಬಲ | | »ಸದನದಲ್ಲಿ ‘ಬ್ಲೂಫಿಲಂ’ ವೀಕ್ಷಣೆ: ಆರೋಪಿಗಳ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿ; ಸಿದ್ದರಾಮಯ್ಯ | | »ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ 'ಕೈ' ಪ್ರತಿಭಟನೆ, ಪ್ರತಿಕೃತಿ ದಹನ | | »ಬಿಬಿಎಂಪಿ ಹಗರಣ:ಎಲ್ಲ ಕಾಮಗಾರಿಗಳ ತನಿಖೆಗೆ ಸರ್ಕಾರ ಆದೇಶ | | »ಐಷಾರಾಮಿ ಪ್ರವಾಸಿ ರೈಲು 'ಗೋಲ್ಡನ್ ಚಾರಿಯಟ್' 'ಹೌಸ್ ಫುಲ್ ಜರ್ನಿ' ಆರಂಭ: ರೈಲಿನಲ್ಲಿ ಅಮೆರಿಕ, ಆಸ್ಟ್ರಿಯಾದ 80 ಪ್ರವಾಸಿಗರು | | »ಅನುದಾನ ಬಿಡುಗಡೆಗೆ ಆಗ್ರಹಿಸಿ ಆಮರಣ ಉಪವಾಸ : ಕಣ್ತೆರೆಯದ ಸರ್ಕಾರ: ಅತಂತ್ರರಾದ ಶಿಕ್ಷಕರು | | »ಯೋಗ ವಿಜ್ಞಾನ ಶಿಬಿರ: ಬಜೆಟ್‌ನಲ್ಲಿ ಯೋಗಕ್ಕೆ ವಿಶೇಷ ಒತ್ತು: ಸಿಎಂ | | »ನನ್ನ ಮೇಲಿನ ಆರೋಪಗಳೆಲ್ಲ ನಿರಾಧಾರ: ಮಾಜಿ ಸಿಎಂ ಯಡಿಯೂರಪ್ಪ ನನ್ನ ಸಂಬಂಧಿಕರಲ್ಲ: ನ್ಯಾ. ಬನ್ನೂರಮಠ ( Update) | | »ಸದನದಲ್ಲಿ ಮೊಬೈಲ್ ಫೋನ್ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಸಚಿವರುಗಳ ತಲೆದಂಡ: ಸವದಿ, ಸಿಸಿ, ಮತ್ತು ಪಾಲೇಮಾರ್ ಮಂತ್ರಿ ಸ್ಥಾನಕ್ಕೆ ರಾಜಿನಾಮೆ | | »ಹೂವಿನಹಡಗಲಿಯಲ್ಲಿ ಪ್ರತ್ಯೇಕ ದುರಂತ : ಅಪಘಾತದಲ್ಲಿ 8, ತೆಪ್ಪ ಮುಳುಗಿ 5ಸಾವು | | »ಆಧಾರ್ ಕಾರ್ಡ್‌ಗೆ ಲಂಚವೇ ಆಧಾರ: ಸರ್ಕಾರದಿಂದ ತನಿಖೆ ಭರವಸೆ | | »50 ಕೋಟಿ ಯುವಕರಿಗೆ ಕೌಶಲ ತರಬೇತಿ: ಖರ್ಗೆ | | »ಏಡ್ಸ್ ಜಾಗೃತಿ ಜಾಥಾಕ್ಕೆ ಡಾ.ಸಲೀಂ ಚಾಲನೆ | | »ಕಲ್ಲಡ್ಕ ಭಟ್ಟರ ಗಡಿಪಾರಿಗೆ ಒತ್ತಾಯ: ಸದನದಲ್ಲಿ ಕೋಲಾಹಲ; ವಿಪಕ್ಷದಿಂದ ಸಭಾತ್ಯಾಗ | | »ತರಕಾರಿ ಸೇವಿಸಿ; ರೋಗ ತಡೆಗಟ್ಟಿ: ಡಾ.ಎಂ.ಆರ್. ಹುಲಿನಾಯ್ಕರ್ | | »ಸರಕಾರಿ ಜಾಗದಲ್ಲಿ ಅನಧಿಕೃತ ನಾಗರಕಟ್ಟೆ ನಿರ್ಮಾಣ: ಪಿಡಬ್ಲುಡಿ ಇಲಾಖೆಯ ವರ್ತನೆಗೆ ಕಣ್ಣು ಮುಚ್ಚಿ ಕುಳಿತ ಜಿಲ್ಲಾಡಳಿತ | | »ಮಂಡ್ಯ: ಮಕ್ಕಳ ಹಬ್ಬದಲ್ಲಿ ಜಿಲ್ಲೆಯ ಸಾಂಸ್ಕೃತಿಕ ಸೊಗಡು ಅನಾವರಣ | | »ವಕ್ಕಲೇರಿ ಮಾರ್ಕಂಡೇಶ್ವರಸ್ವಾಮಿ ಬ್ರಹ್ಮರಥೋತ್ಸವ | |